ರೈಲು ಪ್ರಯಾಣಿಕರ ತುರ್ತು ಗಮನಕ್ಕೆ; ಯಾವುದೇ ರಾಜ್ಯಕ್ಕೆ ಹೋಗುವ ಮುನ್ನ ಅಲ್ಲಿಯ ನಿಯಮ ತಿಳಿಯಿರಿ
ರೈಲು ಪ್ರಯಾಣಿಕರ ಗಮನಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ರೈಲ್ವೆ ಸಚಿವಾಲಯವು ಹೊರಡಿಸಿದೆ. ಯಾವ ರಾಜ್ಯಕ್ಕೆ ತೆರಳುತ್ತಾರೆ ಎಂಬುದರ ಆಧಾರದಲ್ಲಿ ಪ್ರಯಾಣಿಕರು ಈ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು.
ರೈಲ್ವೆ ಸಚಿವಾಲಯವು ಮಾರ್ಚ್ 15ರ ಸೋಮವಾರದಂದು ಅತಿ ಮುಖ್ಯವಾದ ಸಂದೇಶವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿದೆ. ಆ ಪೋಸ್ಟ್ನಲ್ಲಿ ಹಾಕಿರುವಂತೆ, ಯಾರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೋ ಅಂಥವರು ಇದನ್ನು ಓದಬೇಕು ಹಾಗೂ ವಿವಿಧ ರಾಜ್ಯಗಳಿಗೆ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧರಾಗಿರಬೇಕು. ಕೆಲವು ರಾಜ್ಯಗಳಲ್ಲಿ ರೈಲು ಬರುವ 72ರಿಂದ 96 ಗಂಟೆ ಮುಂಚಿತವಾಗಿ RT- PCR ಪರೀಕ್ಷೆ ಅಗತ್ಯವಿದೆ. ಇನ್ನು ಕಳೆದ ವರ್ಷ ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡಾಗ ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆಗ ಪ್ರಯಾಣಿಕರ ರೈಲುಗಳನ್ನು ಸಂಪೂರ್ಣ ಅಮಾನತು ಮಾಡಲಾಗಿತ್ತು.
ಈಚೆಗಷ್ಟೇ ಪ್ರಯಾಣಿಕರ ರೈಲುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಆರಂಭಿಸಿವೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರೈಲ್ವ ಸಚಿವಾಲಯವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಈಗ ಮತ್ತೆ ಕೋವಿಡ್- 19 ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಎಲ್ಲ ಪ್ರಯಾಣಿಕರೂ ಕಡ್ಡಾಯವಾಗಿ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧರಾಗಿರಬೇಕು ಎಂದು ಸಚಿವಾಲಯವು ಸಲಹೆ ಮಾಡಿದೆ. ಯಾವ ರಾಜ್ಯಕ್ಕೆ ಭೇಟಿ ನೀಡುತ್ತೀರಿ, ಅಲ್ಲಿ ಅನುಸರಿಸಬೇಕಾದ ಕ್ರಮಗಳೇನು ಎಂಬ ಬಗ್ಗೆ ತಿಳಿದುಕೊಂಡು, ಅದಕ್ಕೆ ಬದ್ಧರಾಗಿರುವಂತೆ ತಿಳಿಸಲಾಗಿದೆ.
ಪ್ರತಿ ರಾಜ್ಯದಲ್ಲೂ ಇರುವ ಮಾರ್ಗದರ್ಶಿ ಸೂತ್ರಗಳ ಬಗ್ಗೆ ನಿರ್ದಿಷ್ಟವಾಗಿ ತಿಳಿಸಲಾಗಿದೆ. ಆ ಬಗ್ಗೆ ಪ್ರಯಾಣಿಕರಿಗೆ ತಿಳಿವಳಿಕೆ ಇರಬೇಕು. ಇನ್ನು ಕೆಲ ರಾಜ್ಯಗಳಿಗೆ ಪ್ರವೇಶಿಸಲು ಕೋವಿಡ್ – 19 ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು ಕೂಡ ಮಾಹಿತಿ ನೀಡಲಾಗಿದೆ. ಟ್ವೀಟ್ನ ಒಂದು ಭಾಗದಲ್ಲಿ ಇರುವಂತೆ, ತಮ್ಮ ಪ್ರಯಾಣ ಆರಂಭವಾಗುವ ಮುನ್ನ ಪ್ರಯಾಣಿಕರು ಆಯಾ ರಾಜ್ಯದಿಂದ ಉಲ್ಲೇಖ ಮಾಡಲಾದ ಆರೋಗ್ಯ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಓದಿಕೊಂಡಿರುವಂತೆ ಮನವಿ ಮಾಡಲಾಗಿದೆ.
ಮಾಸ್ಕ್ ಧರಿಸದೆ ಯಾರಿಗೂ ರೈಲಿನ ಒಳಗೆ ಪ್ರವೇಶ ಇಲ್ಲ. ಈ ಹಿಂದೆಯೂ ಇದರ ಕುರಿತು ಹೇಳಲಾಗಿತ್ತು. ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆ ಇಬ್ಬರಿಗೂ ಇದು ಅಗತ್ಯ ಎನ್ನಲಾಗಿತ್ತು. ಇನ್ನೂ ಮುಂದುವರಿದು, ಸರಿಯಾದ ಸ್ಯಾನಿಟೈಸೇಷನ್ ಹಾಗೂ ಸಾಮಾಜಿಕ ಅಂತರವನ್ನು ಜನರ ಅನುಕೂಲಕ್ಕಾಗಿ ಅನುಸರಿಸಲಾಗುತ್ತಿದೆ ಹಾಗೂ ಸದ್ಯಕ್ಕೆ ರೈಲಿನಲ್ಲಿ ಆಹಾರ ವಿತರಣೆ ಮಾಡುತ್ತಿಲ್ಲ.
In the wake of #COVID19, passengers are requested to read the health advisory guidelines issued by different states before the commencement of their journey to these states. #IndiaFightsCorona pic.twitter.com/CIZxz8g0tm
— Ministry of Railways (@RailMinIndia) March 15, 2021
ಇದನ್ನೂ ಓದಿ: ರೈಲ್ವೆಯಲ್ಲಿ ಖಾಸಗಿ ಹೂಡಿಕೆ ಅಷ್ಟೇ, ಸಂಪೂರ್ಣ ಖಾಸಗೀಕರಣ ಇಲ್ಲ ಎಂದ ಕೇಂದ್ರ ಸರ್ಕಾರ