ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಖದೀಮರು ತಮ್ಮ ಕೈ ಚಳಕ ತೋರಿಸಿದ್ದಾರೆ. ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಲಾಕ್ಡೌನ್ ಸಡಲಿಕೆಯಾಗುತ್ತಿದೆ. ಜನ ಜೀವನ ಸುಧಾರಿಸುತ್ತಿದೆ. ಎಲ್ಲ ಮೊದಲಿನಂತಾಗುತ್ತಿದೆ. ಇದೇ ಬೆನ್ನಲ್ಲೇ ಕಳ್ಳರು ಸಹ ತಮ್ಮ ಕಸುಬನ್ನು ಶುರು ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಇರುವ ಚಿರಾಗ್ ಜುವೆಲ್ಲರಿ ಶಾಪ್‌ನಲ್ಲಿ ಕಳ್ಳತನವಾಗಿದೆ. ಗ್ಯಾಸ್ ಕಟರ್ ಬಳಸಿ ಖದೀಮರು ಶಾಪ್ ಒಳನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾರೆ. ಹೈ ಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 8:56 am, Mon, 8 June 20