‘ಆಗಸ್ಟ್ 15ರ ನಂತರ ಶಾಲೆ, ಕಾಲೇಜುಗಳು ರೀ ಓಪನ್’
ದೆಹಲಿ: ಕೊರೊನಾ ಸೋಂಕಿನಿಂದಾಗಿ ಭಾರತದಾದ್ಯಂತ ಮುಂಚಲ್ಪಟ್ಟಿದ್ದ ಶಾಲೆ- ಕಾಲೇಜುಗಳು ಆಗಸ್ಟ್ 15ರ ನಂತರ ಮತ್ತೆ ತೆರೆಯಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ತಿಳಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದ ಮೂರು ತಿಂಗಳಿನಿಂದ ದೇಶಾದ್ಯಂತ ಮುಚ್ಚಲ್ಪಟ್ಟಿರುವ ಶಾಲೆಗಳ ಪುನರಾರಂಭಕ್ಕಾಗಿ ಸುಮಾರು 33 ಕೋಟಿ ವಿದ್ಯಾರ್ಥಿಗಳು ಕಾಯುತ್ತಿದ್ದರು. ಸದ್ಯ ಆಗಸ್ಟ್ 15ರ ನಂತರ ಶಾಲೆಗಳು ಮತ್ತು ಕಾಲೇಜುಗಳನ್ನು ಪುನಃ ತೆರೆಯಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಇದಲ್ಲದೆ, ಈ ಅಧಿವೇಶನದಲ್ಲಿ ನಡೆದ ಪರೀಕ್ಷೆಗಳ ಎಲ್ಲಾ ಫಲಿತಾಂಶಗಳನ್ನು ಆಗಸ್ಟ್ […]
ದೆಹಲಿ: ಕೊರೊನಾ ಸೋಂಕಿನಿಂದಾಗಿ ಭಾರತದಾದ್ಯಂತ ಮುಂಚಲ್ಪಟ್ಟಿದ್ದ ಶಾಲೆ- ಕಾಲೇಜುಗಳು ಆಗಸ್ಟ್ 15ರ ನಂತರ ಮತ್ತೆ ತೆರೆಯಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ತಿಳಿಸಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದ ಮೂರು ತಿಂಗಳಿನಿಂದ ದೇಶಾದ್ಯಂತ ಮುಚ್ಚಲ್ಪಟ್ಟಿರುವ ಶಾಲೆಗಳ ಪುನರಾರಂಭಕ್ಕಾಗಿ ಸುಮಾರು 33 ಕೋಟಿ ವಿದ್ಯಾರ್ಥಿಗಳು ಕಾಯುತ್ತಿದ್ದರು. ಸದ್ಯ ಆಗಸ್ಟ್ 15ರ ನಂತರ ಶಾಲೆಗಳು ಮತ್ತು ಕಾಲೇಜುಗಳನ್ನು ಪುನಃ ತೆರೆಯಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಇದಲ್ಲದೆ, ಈ ಅಧಿವೇಶನದಲ್ಲಿ ನಡೆದ ಪರೀಕ್ಷೆಗಳ ಎಲ್ಲಾ ಫಲಿತಾಂಶಗಳನ್ನು ಆಗಸ್ಟ್ ವೇಳೆಗೆ ಘೋಷಿಸಲು ಆಡಳಿತವು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದ್ರು.
Published On - 9:45 am, Mon, 8 June 20