ಗೂಗಲ್​ ಉದ್ಯೋಗಿಗಳಿಗೆ ಪತ್ರ​ ಬರೆದ ಸುಂದರ್​ ಪಿಚೈ; ಆ ಇ-ಮೇಲ್​ನಲ್ಲೇನಿದೆ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 16, 2020 | 8:02 PM

ಸ್ಥಳೀಯ ಆಡಳಿತ ಸಂಸ್ಥೆಗಳು ಅವಕಾಶ ನೀಡಿದರೆ ನಾವು ನಮ್ಮ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುತ್ತೇವೆ. ವಾಲೆಂಟರಿ ವರ್ಕ್​ ಫ್ರಮ್ ​ಹೋಂ ಆಯ್ಕೆ ಸೆ.1ರವರೆಗೆ ಮುಂದುವರಿಯಲಿದೆ ಎಂದು ಬರೆದಿದ್ದಾರೆ.

ಗೂಗಲ್​ ಉದ್ಯೋಗಿಗಳಿಗೆ ಪತ್ರ​ ಬರೆದ ಸುಂದರ್​ ಪಿಚೈ; ಆ ಇ-ಮೇಲ್​ನಲ್ಲೇನಿದೆ?
ಸುಂದರ್ ಪಿಚೈ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಗೂಗಲ್​ ಮುಖ್ಯಸ್ಥ ಸುಂದರ್ ಪಿಚೈ ಈಗ ತಮ್ಮ ಉದ್ಯೋಗಿಗಳಿಗೆ ಪ್ರಮುಖ ಇಮೇಲ್​ ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಮೇಲ್​ನಲ್ಲಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಮುಂದುವರಿಸುವ ಬಗ್ಗೆ ತಿಳಿಸಿದ್ದಾರೆ.

ಡಿ.14ರಂದು ರವಾನಿಸಿರುವ ಪತ್ರದಲ್ಲಿ ಅವರು ಸೆಪ್ಟೆಂಬರ್ 2021ರವರೆಗೆ ವರ್ಕ್​ ಫ್ರಮ್ ಹೋಂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಗಳು ಅವಕಾಶ ನೀಡಿದರೆ ನಾವು ನಮ್ಮ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುತ್ತೇವೆ. ವಾಲೆಂಟರಿ ವರ್ಕ್​ ಫ್ರಮ್ ​ಹೋಂ ಆಯ್ಕೆ ಸೆ.1ರವರೆಗೆ ಮುಂದುವರಿಯಲಿದೆ ಎಂದು ಬರೆದಿದ್ದಾರೆ.

ಈಗಾಗಲೇ ಟ್ವಿಟರ್​, ಫೇಸ್​ಬುಕ್​ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಾಯಂ ಆಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿವೆ. ಆದರೆ, ಗೂಗಲ್​ನಲ್ಲಿ ಆ ರೀತಿ ಯೋಜನೆ ತರುವ ಯಾವುದೇ ಆಲೋಚನೆ ಇಲ್ಲ ಎಂದು ಪಿಚೈ ಸ್ಪಷ್ಟನೆ ನೀಡಿದ್ದಾರೆ.

ಕಚೇರಿಯಿಂದ ಕೆಲಸ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಆದರೆ, ಕೊರೊನಾ ತಂದ ತೊಂದರೆಯಿಂದ ನಾವು ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯೆತ ಬಂದೊದಗಿದೆ. ಆದಷ್ಟು ಬೇಗ ನಾವು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ಆಲೋಚನೆಯಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರದಲ್ಲಿ ಬಹುತೇಕ ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿವೆ. ಕೆಲ ಸಂಸ್ಥೆಗಳು ಇದನ್ನು ಈಗಾಗಲೇ 2021ರ ಅಂತ್ಯದವರೆಗೆ ವಿಸ್ತರಣೆ ಮಾಡಿವೆ. ಇನ್ನೂ ಕೆಲ ಸಂಸ್ಥೆಗಳು ಶಾಶ್ವತವಾಗಿ ವರ್ಕ್​ ಫ್ರಮ್​ ಹೋಂ ಆಯ್ಕೆ ನೀಡಿವೆ.

ಲೊಕೇಶನ್ ಮಾಹಿತಿ ಸೋರಿಕೆಗೆ ಆಪಲ್-ಗೂಗಲ್ ಕಡಿವಾಣ