ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ: ಸುಪ್ರೀಂ ಕೋರ್ಟ್ ಕೊಲೆಜಿಯಂ ಶಿಫಾರಸು
ದೇಶದ ಹಲವು ಹೈಕೋರ್ಟ್ ನ್ಯಾಯಾಧೀಶರು ವರ್ಗಾವಣೆಗೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್ ಕೊಲೆಜಿಯಂ ಶಿಫಾರಸು ಮಾಡಿದೆ. ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ, ಸಿಕ್ಕಿಂ ಹೈಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆಗೂ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಸ್ತು ಎಂದಿದೆ.
ದೆಹಲಿ: ದೇಶದ ಹಲವು ಹೈಕೋರ್ಟ್ ನ್ಯಾಯಾಧೀಶರು ವರ್ಗಾವಣೆಗೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್ ಕೊಲೆಜಿಯಂ ಶಿಫಾರಸು ಮಾಡಿದೆ. ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ, ಸಿಕ್ಕಿಂ ಹೈಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆಗೂ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಸ್ತು ಎಂದಿದೆ.
ತೆಲಂಗಾಣ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಆರ್.ಎಸ್. ಚೌಹಾಣ್ ಉತ್ತರಾಖಾಂಡ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಯಾಗಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಜೆ.ಕೆ. ಮಹೇಶ್ವರಿ ಸಿಕ್ಕಿಂಗೆ ಮತ್ತು ಸಿಕ್ಕಿಂ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಎ.ಕೆ. ಗೋಸ್ವಾಮಿ ಆಂಧ್ರಪ್ರದೇಕ್ಕೆ ವರ್ಗಾವಣೆಗೊಂಡಿದ್ದಾರೆ. ಒರಿಸ್ಸಾ ಮುಖ್ಯ ನ್ಯಾಯಾಧೀಶ ಮೊಹಮ್ಮದ್ ರಫೀಕ್ ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗವಾಗಿದ್ದಾರೆ.
ಈ ಹಿಂದೆ, ಆಂಧ್ರ ಹೈಕೋರ್ಟ್ ವಿರೋಧ ಪಕ್ಷದ ಪರವಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೋರ್ಟ್ ನಡೆಯನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟ್ಗೆ ಪತ್ರ ಬರೆದಿದ್ದರು. ಈ ಘಟನೆಯನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ರೈತರ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ನಿಂದ ಹೊಸ ಸಮಿತಿ ರಚನೆ ಸಾಧ್ಯತೆ
Published On - 9:24 pm, Wed, 16 December 20