
ಬೆಂಗಳೂರು: ಕೊರೊನಾ ದಾಳಿ ಇಡುತ್ತಿದ್ದ ಸಂದರ್ಭದಲ್ಲಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆದಿತ್ತು. ಆದರೆ ಈಗ ಅದಕ್ಕೆ ಬೀಗ ಹಾಕಲು ಮುಂದಾಗಿದೆ. ಕೊರೊನಾ 2ನೇ ಅಲೆ ವಕ್ಕರಿಸಿರುವಾಗಲೇ ಕೇರ್ ಸೆಂಟರ್ಗಳಿಗೆ ಬೀಗ ಏತಕ್ಕಾಗಿ ಹಾಕಲಾಗುತ್ತಿದೆ. ಕೊರೊನಾರ್ಭಟ ಹೊತ್ತಲ್ಲೇ ರೆಡಿ ಇರಬೇಕಿದ್ದ ಸರ್ಕಾರ ಮಾಡ್ತಿರೋದೇನು? ಎಂಬ ಪ್ರಶ್ನೆಗಳೆದ್ದಿವೆ.
ಸೋಂಕಿತರು ಬಾರದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಮಿಸಿದ್ದ ಕೊವಿಡ್ ಕೇರ್ ಸೆಂಟರ್ಗಳನ್ನು ಕ್ಲೋಸ್ ಮಾಡಲು ನಿರ್ಧರಿಸಲಾಗಿದೆ. ಸೋಂಕಿತರ ಆರೈಕೆಗೆ ಬೆಂಗಳೂರಿನಲ್ಲಿ 12 ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿತ್ತು. 12 ಕೇರ್ ಸೆಂಟರ್ಗಳಲ್ಲಿ ಸುಮಾರು 14 ಸಾವಿರ ಬೆಡ್ ವ್ಯವಸ್ಥೆ ಇತ್ತು. ಆದರೆ, ಕೇರ್ ಸೆಂಟರ್ಗಳಿಗೆ ಸೋಂಕಿತರು ಬಾರದ ಹಿನ್ನೆಲೆಯಲ್ಲಿ ಈಗಾಗಲೇ 8 ಕೊವಿಡ್ ಕೇರ್ ಸೆಂಟರ್ಗಳನ್ನು ಕ್ಲೋಸ್ ಮಾಡಲಾಗಿದೆ. ಉಳಿದ 4 ಕೇರ್ ಸೆಂಟರ್ಗಳನ್ನು ಶೀಘ್ರವೇ ಕ್ಲೋಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಒಂದೆಡೆ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಹೀಗಾಗಿ ಯುರೋಪ್ ರಾಷ್ಟ್ರಗಳಲ್ಲಿ ಮತ್ತೆ ಲಾಕ್ಡೌನ್ ಮಾಡಲಾಗುತ್ತಿದೆ.
ಒಂದೆಡೆ ಕೊರೊನಾ ಅಬ್ಬರ, ಮತ್ತೊಂದ್ಕಡೆ ಎಡವಟ್ಟಿನ ನಿರ್ಧಾರ
ಜೊತೆಗೆ ದೇಶದಲ್ಲಿ ಈಗ ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲ ಡೇಂಜರ್ ಅಂತಾ ಆರೋಗ್ಯ ಸಚಿವರೇ ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೇರ್ ಸೆಂಟರ್ ಆರಂಭಿಸಬೇಕು. ಆದರೆ ರಾಜ್ಯದಲ್ಲಿ ಮಾತ್ರ ಕೊವಿಡ್ ಕೇರ್ ಸೆಂಟರ್ ಕ್ಲೋಸ್ ಮಾಡಲಾಗುತ್ತಿದೆ. ಎರಡನೇ ಅಲೆ ಹೇಗಿರಲಿದೆ ಎಂಬ ಯೋಚನೆಯೂ ಇಲ್ಲ. ಹೀಗಿರುವಾಗ ಕೇರ್ ಸೆಂಟರ್ ಮುಚ್ಚಬೇಕೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
Published On - 8:25 am, Fri, 30 October 20