ಮನೆ ಮುಂದೆ ಕಸ ಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಗುಂಪು ಗುಂಪಾಗಿ ಬಂದು ಚಾಕುವಿನಿಂದ ಹಲ್ಲೆ, 3 ಮಹಿಳೆಯರು ಆಸ್ಪತ್ರೆಗೆ ದಾಖಲು

|

Updated on: Jan 14, 2021 | 9:11 AM

ಚಿಕ್ಕ ವಿಷಯಕ್ಕೆ ಚಿಕ್ಕ ಹೆಣ್ಣು ಮಕ್ಕಳು ಎಂದೂ ನೋಡದೆ ಅವರ ಮೇಲೆ ದಾಳಿ ಮಾಡಿದ್ದಾರೆ. ಗುಂಪು ಗುಂಪಿನಲ್ಲಿ ಮಹಿಳೆಯರು, ಗಂಡಸರು ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರಂತೆ. ಬಟ್ಟೆ ಹರಿದು ವಿಕೃತಿ ಮೆರೆದಿದ್ದಾರೆ

ಮನೆ ಮುಂದೆ ಕಸ ಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಗುಂಪು ಗುಂಪಾಗಿ ಬಂದು ಚಾಕುವಿನಿಂದ ಹಲ್ಲೆ, 3 ಮಹಿಳೆಯರು ಆಸ್ಪತ್ರೆಗೆ ದಾಖಲು
Follow us on

ರಾಯಚೂರು: ಮನೆ ಮುಂದೆ ಕಸ ಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಮನೆ ಮುಂದೆ ಕಸ ಹಾಕ ಬೇಡಿ ಎಂದಿದ್ದಕ್ಕೆ ಗುಂಪು ಗುಂಪಾಗಿ ಬಂದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಇಲ್ಲಿ ನಡೆದಿರುವುದು ಹೀನಾಯ ಕೃತ್ಯ ಚಿಕ್ಕ ವಿಷಯಕ್ಕೆ ಚಿಕ್ಕ ಹೆಣ್ಣು ಮಕ್ಕಳು ಎಂದೂ ನೋಡದೆ ಅವರ ಮೇಲೆ ದಾಳಿ ಮಾಡಿದ್ದಾರೆ. ಗುಂಪು ಗುಂಪಿನಲ್ಲಿ ಮಹಿಳೆಯರು, ಗಂಡಸರು ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರಂತೆ. ಬಟ್ಟೆ ಹರಿದು ವಿಕೃತಿ ಮೆರೆದಿದ್ದಾರೆ.

ಮಹಿಳೆಯರ ಬಟ್ಟೆ ಬಿಚ್ಚಿ ವಿಡಿಯೋ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುವ ಬೆದರಿಕೆಯನ್ನು ಹಾಕಿದ್ದಾರಂತೆ ಈ ಬಗ್ಗೆ ಹಲ್ಲೆಗೆ ಒಳಗಾದ ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಘಟನೆಯಲ್ಲಿ ನಸಿಮೂನ್, ಮುಬಿನಾ, ರಿಜ್ವಾನಾ ಬಾನುಗೆ ಗಂಭೀರ ಗಾಯಗಳಾಗಿದ್ದು ಅವರನ್ನು ರಿಮ್ಸ್​ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೌಲಾ ಸೇರಿದಂತೆ 11 ಜನರ ವಿರುದ್ಧ ಐಪಿಸಿ ಸೆಕ್ಷನ್ 354, 504, 506ರಡಿ ಮಾರ್ಕೆಟ್ ಯಾರ್ಡ್​ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹಾಸನ ಜಿಲ್ಲೆಯಲ್ಲಿ ದಂಪತಿ ಮೇಲೆ ಮಾಜಿ ಯೋಧನಿಂದ ಮಾರಣಾಂತಿಕ ಹಲ್ಲೆ