ಏಳು ತಿಂಗಳ ಬಳಿಕ A6 ಆದಿತ್ಯ ಆಳ್ವಾಗೆ ಇಂದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಡ್ರಗ್ಸ್ ಟೆಸ್ಟ್!

ಆದಿತ್ಯ ಆಳ್ವಾ ರೆಸಾರ್ಟ್​ನಲ್ಲಿ ಶೋಧ ಕಾರ್ಯಾಚರಣೆ ವೇಳೆ ಡ್ರಗ್ಸ್​ ಸಿಕ್ಕಿತ್ತು. ಹೀಗಾಗಿ ಈಗ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡ್ರಗ್ಸ್ ಟೆಸ್ಟ್ ಮಾದರಿ ಸಂಗ್ರಹ ಮಾಡಲಾಗಿದೆ.

ಏಳು ತಿಂಗಳ ಬಳಿಕ A6 ಆದಿತ್ಯ ಆಳ್ವಾಗೆ ಇಂದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಡ್ರಗ್ಸ್ ಟೆಸ್ಟ್!
ಆದಿತ್ಯ ಆಳ್ವಾ
Follow us
ಆಯೇಷಾ ಬಾನು
|

Updated on: Jan 14, 2021 | 8:46 AM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ ಆದಿತ್ಯ ಆಳ್ವಾಗೆ ಡ್ರಗ್ಸ್ ಟೆಸ್ಟ್ ಮಾಡಲು ಸ್ಯಾಂಪಲ್ ಸಂಗ್ರಹಕ್ಕೆ ಕಳಿಸಲಾಗಿದೆ. ಈ ಹಿಂದೆ ಇದೇ ಕೇಸ್​​ ಸಂಬಂಧ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಡ್ರಗ್ಸ್ ಟೆಸ್ಟ್ ಮಾಡಲಾಗಿತ್ತು. ಈಗ ಅದೇ ಮಾದರಿಯಲ್ಲಿ ಆದಿತ್ಯನ ರಕ್ತ, ತಲೆ ಕೂದಲು, ಉಗುರಿನ ಮಾದರಿಯನ್ನು ಸಿಸಿಬಿ ಸಂಗ್ರಹಿಸಿದೆ.

ಆದಿತ್ಯ ಆಳ್ವಾ ರೆಸಾರ್ಟ್​ನಲ್ಲಿ ಶೋಧ ಕಾರ್ಯಾಚರಣೆ ವೇಳೆ ಡ್ರಗ್ಸ್​ ಸಿಕ್ಕಿತ್ತು. ಹೀಗಾಗಿ ಈಗ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡ್ರಗ್ಸ್ ಟೆಸ್ಟ್ ಮಾದರಿ ಸಂಗ್ರಹ ಮಾಡಲಾಗಿದೆ.

ಆದಿತ್ಯ ವಿಚಾರಣೆಯಲ್ಲಿ ಸಿಸಿಬಿ ತಂಡಕ್ಕೆ ಸ್ಫೋಟಕ ಮಾಹಿತಿ ಇನ್ನು ಆದಿತ್ಯ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿಯೊಂದು ಸಿಕ್ಕಿದೆ. ವಿರೇನ್ ಖನ್ನಾ ಮತ್ತು ಆದಿತ್ಯ ಆಳ್ವಾ ಇಬ್ಬರೂ ಬಂದೇ ಕೇಸ್​ನಲ್ಲಿ ಆರೋಪಿಗಳಾಗಿದ್ದಾರೆ. ಆದ್ರೆ ಅವರಲ್ಲಿ ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗೆ ಆಗದಷ್ಟು ಕಿತ್ತಾಟವಿದೆಯಂತೆ. ಇಬ್ಬರೂ ಒಂದೇ ರೀತಿ, ಅದೇ ದಿನ ಪಾರ್ಟಿ ಆಯೋಜನೆ ಮಾಡ್ತಿದ್ದರು.

ಒಂದು ಕಡೆ ವಿರೇನ್ ಖನ್ನಾ ಪಾರ್ಟಿ ಆಯೋಜನೆ ಮಾಡುದ್ರೆ ಮತ್ತೊಂದೆಡೆ ಆದಿತ್ಯ ಆಳ್ವಾ ರೆಸಾರ್ಟ್​ನಲ್ಲಿ ಪಾರ್ಟಿ ಆಯೋಜನೆ ಮಾಡ್ತಿದ್ದ. ಜೊತೆಗೆ ಇಬ್ಬರೂ ಒಂದೇ ರೀತಿಯ ಗ್ರಾಹಕರನ್ನ ಟಾರ್ಗೆಟ್ ಮಾಡ್ತಿದ್ರು. ಹೀಗಾಗಿ ಆದಿತ್ಯ, ವಿರೇನ್​ಗೆ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗ್ತಿರಲಿಲ್ಲ. ಹಲವು ಬಾರಿ ಪೊಲೀಸರಿಗೆ ಒಬ್ಬರ ಕುರಿತು ಮತ್ತೊಬ್ಬರು ದೂರು ನೀಡಿ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಕೊಡ್ತಿದ್ರು.

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು: A6 ಆದಿತ್ಯ ಆಳ್ವಾ 7 ದಿನ CCB ಕಸ್ಟಡಿಗೆ