ಬೆಳಗಾವಿಯಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ ವ್ಯಾಕ್ಸಿನ್​: ಸಂಭ್ರಮದ ಸ್ವಾಗತ

ರಾಜ್ಯದ ವಿವಿಧೆಡೆ ಬುಧವಾರ ಕೊರೊನಾ ಸೋಂಕು ನಿರೋಧಕ ಲಸಿಕೆ ಹೊತ್ತ ವಾಹನಗಳನ್ನು ಜನರು ಆರತಿ ಬೆಳಗಿ ಸ್ವಾಗತಿಸಿದರು. ಕೆಲ ಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳು ವಾಹನಗಳ ಎದುರು ಸಂಭ್ರಮಿಸಿದವು.

ಬೆಳಗಾವಿಯಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ ವ್ಯಾಕ್ಸಿನ್​: ಸಂಭ್ರಮದ ಸ್ವಾಗತ
ಬಾಗಲಕೋಟೆಯಲ್ಲಿ ಕೊರೊನಾಗೆ ಸ್ವಾಗತ
Follow us
TV9 Web
| Updated By: ganapathi bhat

Updated on:Apr 06, 2022 | 9:03 PM

ಬಾಗಲಕೋಟೆ: ರಾಜ್ಯದ ವಿವಿಧೆಡೆ ಬುಧವಾರ ಕೊರೊನಾ ಸೋಂಕು ನಿರೋಧಕ ಲಸಿಕೆ ಹೊತ್ತ ವಾಹನಗಳನ್ನು ಜನರು ಆರತಿ ಬೆಳಗಿ ಸ್ವಾಗತಿಸಿದರು. ಕೆಲ ಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳು ವಾಹನಗಳ ಎದುರು ಸಂಭ್ರಮಿಸಿದವು.

ಕೋವಿಡ್ ಲಸಿಕೆ ಹೊತ್ತಿದ್ದ ವಾಹನ ಬೆಳಗಾವಿಯಿಂದ ಬಾಗಲಕೋಟೆ ಜಿಲ್ಲೆಗೆ ಪೊಲೀಸ್ ಭದ್ರತೆಯಲ್ಲಿ ಆಗಮಿಸಿತು. ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ ಜಿಲ್ಲೆಗಳಿಗೆ ಪೂರೈಸಬೇಕಾದ ಲಸಿಕೆಯೂ ಇದೇ ವಾಹನದಲ್ಲಿತ್ತು. ಒಟ್ಟು 30 ಸಾವಿರ ಲಸಿಕೆ ಸೀಸೆಗಳು ಈ ವಾಹನದಲ್ಲಿದ್ದವು.

ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಜಿ.ಪಂ. ಸಿಇಒ ಟಿ.ಭೂಬಾಲನ್​, ಡಿಹೆಚ್​ಒ ಅನಂತ ದೇಸಾಯಿ ವಾಹನವನ್ನು ಸ್ವಾಗತಿಸಿದರು. ಜಿಲ್ಲಾಡಳಿತ ಭವನದ ಕೋಲ್ಡ್​ಸ್ಟೋರೇಜ್​ನಲ್ಲಿ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಾಗಲಕೋಟೆಗೆ ಲಸಿಕೆ ಆಗಮನ

ಲಸಿಕೆ ಸ್ವಾಗತಿಸಿದ ಮಹಿಳೆಯರು

ಲಸಿಕೆಗೆ ಸ್ವಾಗತ

ಲಸಿಕೆ ಸ್ವಾಗತಕ್ಕೆ ಡೊಳ್ಳು ಕುಣಿತ

ಲಸಿಕೆ ಸ್ವಾಗತಕ್ಕೆ ಡೊಳ್ಳು ಕುಣಿತ

ಸಂಭ್ರಮದ ಸ್ವಾಗತ ಕೋರಿದ ಜನರು

ಲಸಿಕೆ ಸಂಗ್ರಹಣಾ ಕೊಠಡಿಗೆ ಅಲಂಕಾರ

ಲಸಿಕೆ ಸಂಗ್ರಹಣಾ ಕೊಠಡಿಗೆ ಅಲಂಕಾರ

ಲಸಿಕೆ ಹೊತ್ತು ತಂದರು

Explainer | ಕೊರೊನಾ ಲಸಿಕೆ ಸಾಗಣೆ ಬಾಕ್ಸ್ ಮೇಲೆ ಸರ್ವೇ ಸಂತು ನಿರಾಮಯಾಃ.. ಏನಿದರ ಅರ್ಥ?

Published On - 11:05 pm, Wed, 13 January 21