ಕಾರಿಗೆ ಸೈಡ್ ಬಿಡಲಿಲ್ಲ ಅಂತಾ KSRTC ಬಸ್ ನಿರ್ವಾಹಕನ ಮೇಲೆ ಹಲ್ಲೆ

| Updated By: ಸಾಧು ಶ್ರೀನಾಥ್​

Updated on: Oct 28, 2020 | 2:27 PM

ಮಡಿಕೇರಿ: ಕಾರಿಗೆ ಸೈಡ್ ಬಿಡಲಿಲ್ಲವೆಂದು KSRTC ಬಸ್ ನಿರ್ವಾಹಕನ ಮೇಲೆ ಯುವಕರು ಹಲ್ಲೆ ಮಾಡಿರುವ ಘಟನೆ ಕರಿಕೆ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಮಡಿಕೇರಿಯಿಂದ ಕರಿಕೆಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹಿಂದೆ ಬರುತ್ತಿದ್ದ ಪುಂಡರ ಕಾರಿಗೆ ಸೈಡ್ ಬಿಡಲಿಲ್ಲವೆಂದು ಕಾರಿನಲ್ಲಿದ್ದ ಯುವಕರು ಗಲಾಟೆ ಮಾಡಿ, ನಿರ್ವಾಹಕ ರಾಜಶೇಖರ್​ನನ್ನು ಬಸ್​ನಿಂದ ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಿರ್ವಾಹಕ ರಾಜಶೇಖರ್, ಭಾಗಮಂಡಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿರ್ವಾಹಕ ದೂರು ನೀಡುತ್ತಿದ್ದಂತೆ ಯುವಕರಿಂದಲೂ ನಿರ್ವಾಹಕ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆಂದು […]

ಕಾರಿಗೆ ಸೈಡ್ ಬಿಡಲಿಲ್ಲ ಅಂತಾ KSRTC ಬಸ್ ನಿರ್ವಾಹಕನ ಮೇಲೆ ಹಲ್ಲೆ
Follow us on

ಮಡಿಕೇರಿ: ಕಾರಿಗೆ ಸೈಡ್ ಬಿಡಲಿಲ್ಲವೆಂದು KSRTC ಬಸ್ ನಿರ್ವಾಹಕನ ಮೇಲೆ ಯುವಕರು ಹಲ್ಲೆ ಮಾಡಿರುವ ಘಟನೆ ಕರಿಕೆ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಮಡಿಕೇರಿಯಿಂದ ಕರಿಕೆಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹಿಂದೆ ಬರುತ್ತಿದ್ದ ಪುಂಡರ ಕಾರಿಗೆ ಸೈಡ್ ಬಿಡಲಿಲ್ಲವೆಂದು ಕಾರಿನಲ್ಲಿದ್ದ ಯುವಕರು ಗಲಾಟೆ ಮಾಡಿ, ನಿರ್ವಾಹಕ ರಾಜಶೇಖರ್​ನನ್ನು ಬಸ್​ನಿಂದ ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ನಿರ್ವಾಹಕ ರಾಜಶೇಖರ್, ಭಾಗಮಂಡಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿರ್ವಾಹಕ ದೂರು ನೀಡುತ್ತಿದ್ದಂತೆ ಯುವಕರಿಂದಲೂ ನಿರ್ವಾಹಕ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆಂದು ಪ್ರತಿದೂರು ದಾಖಲಾಗಿದೆ. ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು.