ಗೂರ್ಖಾ ಬಹಾದ್ದೂರ್​ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಚಿನ್ನದ ದರೋಡೆ!

ವಿಜಯಪುರ: ಗೂರ್ಖಾ ಬಹಾದ್ದೂರ್​ನ ಸಮಯ ಪ್ರಜ್ಞೆಯಿಂದ ಚಿನ್ನದ ಅಂಗಡಿಯಲ್ಲಿ ಕಳ್ಳತನ ತಪ್ಪಿರುವ ರೋಚಕ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರ್​ನಲ್ಲಿರುವ ಚಿನ್ನದ ಅಂಗಡಿಯಲ್ಲಿ ನಡೆದಿದೆ. ಚಿನ್ನಾಭರಣ ಅಂಗಡಿಯ ಕಳ್ಳತನ ಮಾಡುವಲ್ಲಿ ಖದೀಮರು ವಿಫಲ ಯತ್ನ ನಡೆಸಿದ್ದಾರೆ. ಕಳ್ಳತನದ ಯತ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶ್ರೀನಿವಾಸ್ ನಾರಾಯಣ ಯಲ್ಲೂರ ಎಂಬುವವರಿಗೆ ಸೇರಿದ ಚಿನ್ನದ ಅಂಗಡಿಯಲ್ಲಿ ಕಳ್ಳತನ ಆಗುತ್ತಿರುವ ಬಗ್ಗೆ ಗೂರ್ಖಾ ಬಹಾದ್ದೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಾಗಾಗಿ, ಸ್ಥಳಕ್ಕೆ ಧಾವಿಸಿದ ಪೊಲೀಸರನ್ನು ಕಂಡ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. […]

ಗೂರ್ಖಾ ಬಹಾದ್ದೂರ್​ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಚಿನ್ನದ ದರೋಡೆ!

Updated on: Oct 30, 2020 | 3:38 PM

ವಿಜಯಪುರ: ಗೂರ್ಖಾ ಬಹಾದ್ದೂರ್​ನ ಸಮಯ ಪ್ರಜ್ಞೆಯಿಂದ ಚಿನ್ನದ ಅಂಗಡಿಯಲ್ಲಿ ಕಳ್ಳತನ ತಪ್ಪಿರುವ ರೋಚಕ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರ್​ನಲ್ಲಿರುವ ಚಿನ್ನದ ಅಂಗಡಿಯಲ್ಲಿ ನಡೆದಿದೆ. ಚಿನ್ನಾಭರಣ ಅಂಗಡಿಯ ಕಳ್ಳತನ ಮಾಡುವಲ್ಲಿ ಖದೀಮರು ವಿಫಲ ಯತ್ನ ನಡೆಸಿದ್ದಾರೆ. ಕಳ್ಳತನದ ಯತ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಶ್ರೀನಿವಾಸ್ ನಾರಾಯಣ ಯಲ್ಲೂರ ಎಂಬುವವರಿಗೆ ಸೇರಿದ ಚಿನ್ನದ ಅಂಗಡಿಯಲ್ಲಿ ಕಳ್ಳತನ ಆಗುತ್ತಿರುವ ಬಗ್ಗೆ ಗೂರ್ಖಾ ಬಹಾದ್ದೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಾಗಾಗಿ, ಸ್ಥಳಕ್ಕೆ ಧಾವಿಸಿದ ಪೊಲೀಸರನ್ನು ಕಂಡ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗೂರ್ಖಾ ಬಹದ್ದೂರ್​ನ ಸಮಯಪ್ರಜ್ಞೆಗೆ ಎಲ್ಲೆಡೆಯಿಂದ ಪ್ರಶಂಸೆ ಮಹಾಪೂರವೇ ಹರಿದುಬಂದಿದೆ.