CBI ಎದುರಿಸುವುದು ಡಿಕೆಶಿಗೆ ಗೊತ್ತು, ನಾನು ತುಂಬಾ ವರ್ಷ ಅವರ ಜೊತೆ ಇದ್ದವನು: H ವಿಶ್ವನಾಥ್

ಮೈಸೂರು: ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ CBI ದಾಳಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಗೆದ್ದು ಬರುವುದೂ ಗೊತ್ತು; ಅವರಿಗೆ ಆ ಶಕ್ತಿ ಇದೆ ನಾನು ತುಂಬಾ ವರ್ಷ ಅವರ ಜೊತೆ ಇದ್ದವನು. ಈಗಾಗಿ ಈ ಮಾತು ಹೇಳುತ್ತಿದ್ದೇನೆ. ಡಿಕೆಶಿಗೆ ಇಂತಹವನ್ನು ಎದರಿಸುವುದು ಗೊತ್ತು. ಗೆದ್ದು ಬರುವುದೂ ಗೊತ್ತು. ಅವರಿಗೆ ಆ ಶಕ್ತಿ ಇದೆ ಎಂದು ಪ್ರಸ್ತುತ ಬಿಜೆಪಿ ಪಕ್ಷದಲ್ಲಿರುವ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ. ಇವೆಲ್ಲ ದಾಳಿಗಳು […]

CBI ಎದುರಿಸುವುದು ಡಿಕೆಶಿಗೆ ಗೊತ್ತು, ನಾನು ತುಂಬಾ ವರ್ಷ ಅವರ ಜೊತೆ ಇದ್ದವನು: H ವಿಶ್ವನಾಥ್
ಸಾಧು ಶ್ರೀನಾಥ್​

Updated on: Oct 05, 2020 | 12:13 PM

ಮೈಸೂರು: ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ CBI ದಾಳಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

ಗೆದ್ದು ಬರುವುದೂ ಗೊತ್ತು; ಅವರಿಗೆ ಆ ಶಕ್ತಿ ಇದೆ

ನಾನು ತುಂಬಾ ವರ್ಷ ಅವರ ಜೊತೆ ಇದ್ದವನು. ಈಗಾಗಿ ಈ ಮಾತು ಹೇಳುತ್ತಿದ್ದೇನೆ. ಡಿಕೆಶಿಗೆ ಇಂತಹವನ್ನು ಎದರಿಸುವುದು ಗೊತ್ತು. ಗೆದ್ದು ಬರುವುದೂ ಗೊತ್ತು. ಅವರಿಗೆ ಆ ಶಕ್ತಿ ಇದೆ ಎಂದು ಪ್ರಸ್ತುತ ಬಿಜೆಪಿ ಪಕ್ಷದಲ್ಲಿರುವ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.

ಇವೆಲ್ಲ ದಾಳಿಗಳು ಒಂದು ರೀತಿಯಲ್ಲಿ ಸಹಜ. ಇವುಗಳನ್ನು ರಾಜಕೀಯ ದಾಳಿ ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ‌. ದಾಳಿ ಬಗ್ಗೆ ಹಾಗೆ ಹೇಳಿರುವ ಸಿದ್ದರಾಮಯ್ಯ ಹೇಳಿಕೆ ಸತ್ಯವಲ್ಲ. ಇವೆಲ್ಲವು ಒಂದೊಂದು ರೀತಿ ಸಹಜ ಪ್ರಕ್ರಿಯೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us