ಸೋಂಕಿನಿಂದ ಹೇರ್‌ ಕಟಿಂಗ್‌ ಶಾಪ್‌ ಮಾಲೀಕ ಸಾವು, ಆತಂಕದಲ್ಲಿ ಬೆಂಗಳೂರು ಜನ

| Updated By: ಸಾಧು ಶ್ರೀನಾಥ್​

Updated on: Jul 01, 2020 | 11:37 AM

ಬೆಂಗಳೂರು: ಕೊರೊನಾ ಅಟ್ಟಹಾಸ ಈಗ ಯಾರನ್ನೂ ಬಿಡ್ತಿಲ್ಲ. ಬಡವರಿರಲಿ, ಶ್ರೀಮಂತರಿರಲಿ, ದಿನಗೂಲಿಯವರಿರಲಿ, ಐಪಿಎಸ್/ ಐಪಿಎಸ್‌ ಅಧಿಕಾರಿಗಳೇ ಇರಲಿ, ಊಹೂಂ ಯಾರನ್ನೂ ಬಿಡ್ತಿಲ್ಲ. ಸಂಪರ್ಕಕ್ಕೆ ಬಂದ್ರೆ ಸಾಕು ಸಿಕ್ಕಿದ್ದೇ ಸಿರುಂಡೆ ಅಂತಾ ಅಪ್ಪಿಕೊಂಡೇ ಬಿಡ್ತಿದೆ. ಈಗ ಹೇರ್‌ ಕಟಿಂಗ್‌ ಶಾಪ್‌ನ ಮಾಲಿಕರನ್ನೂ ಬಿಡದೇ ಆವರಿಸಿಕೊಂಡಿದೆ. ಹೌದು, ಬೆಂಗಳೂರಿನ ಶಿವನಗರದಲ್ಲಿರುವ ಹೇರ್‌ ಕಟಿಂಗ್‌ ಶಾಪ್‌ ಮಾಲಿಕ ಈಗ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಶಿವನಗರ ವಾರ್ಡ್‌ನ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಮಂಗಳವಾರ ತಡ ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. […]

ಸೋಂಕಿನಿಂದ ಹೇರ್‌ ಕಟಿಂಗ್‌ ಶಾಪ್‌ ಮಾಲೀಕ ಸಾವು, ಆತಂಕದಲ್ಲಿ ಬೆಂಗಳೂರು ಜನ
Follow us on

ಬೆಂಗಳೂರು: ಕೊರೊನಾ ಅಟ್ಟಹಾಸ ಈಗ ಯಾರನ್ನೂ ಬಿಡ್ತಿಲ್ಲ. ಬಡವರಿರಲಿ, ಶ್ರೀಮಂತರಿರಲಿ, ದಿನಗೂಲಿಯವರಿರಲಿ, ಐಪಿಎಸ್/ ಐಪಿಎಸ್‌ ಅಧಿಕಾರಿಗಳೇ ಇರಲಿ, ಊಹೂಂ ಯಾರನ್ನೂ ಬಿಡ್ತಿಲ್ಲ. ಸಂಪರ್ಕಕ್ಕೆ ಬಂದ್ರೆ ಸಾಕು ಸಿಕ್ಕಿದ್ದೇ ಸಿರುಂಡೆ ಅಂತಾ ಅಪ್ಪಿಕೊಂಡೇ ಬಿಡ್ತಿದೆ. ಈಗ ಹೇರ್‌ ಕಟಿಂಗ್‌ ಶಾಪ್‌ನ ಮಾಲಿಕರನ್ನೂ ಬಿಡದೇ ಆವರಿಸಿಕೊಂಡಿದೆ.

ಹೌದು, ಬೆಂಗಳೂರಿನ ಶಿವನಗರದಲ್ಲಿರುವ ಹೇರ್‌ ಕಟಿಂಗ್‌ ಶಾಪ್‌ ಮಾಲಿಕ ಈಗ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಶಿವನಗರ ವಾರ್ಡ್‌ನ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಮಂಗಳವಾರ ತಡ ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತ ಒಂದು ವಾರದ ಹಿಂದೆ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ ಜ್ವರದ ಪ್ರತಾಪ ಕಡಿಮೆಯಾಗದೇ ಈಗ ಕೊನೆಯುಸಿರೆಳೆದಿದ್ದಾನೆ.

ಆದ್ರೆ ಶಿವನಗರದಲ್ಲಿರುವ ಈತನ ಹೇರ್‌ ಕಟಿಂಗ್‌ ಸಲೂನ್‌ಗೆ ಹೋದವರಲ್ಲಿ ಈಗ ಆತಂಕ ಶುರುವಾಗಿದೆ. ಹಾಗೇನೇ ಅಧಿಕಾರಿಗಳಿಗೂ ಕೂಡಾ ಈತ ಯಾರು ಯಾರಿಗೆ ಹೇರ್ ಕಟಿಂಗ್‌ ಮಾಡಿದ್ದ ಅನ್ನೋದನ್ನ ಪತ್ತೆ ಹಚ್ಚಲು ಪರದಾಡಬೇಕಾಗಿದೆ.