ರಾಜ್ಯದ ಪ್ರಸಿದ್ದ ಶಕ್ತಿ ದೇವತೆ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನವೆಂಬರ್ 5ರಿಂದ 16ರವರೆಗೆ 12 ದಿನಗಳ ಕಾಲ ಹಾಸನಾಂಬೆದೇಗುಲದ ಬಾಗಿಲು ತೆರಯಲಿದ್ದು ಇಂದಿನಿಂದಲೇ ದೇವಿಯ ದೇಗುಲ ತೆರೆಯೋ ಪ್ರಕ್ರಿಯೆಗಳು ಆರಂಭಗೊಂಡಿವೆ,ಇಂದು ಹಾಸನಾಂಬೆ ಹಾಗು ಸಿದ್ದೇಶ್ವರ ದೇವಾಲಯದ ಒಡೆವೆಗಳನ್ನ ಇಂದು ಜಿಲ್ಳಾ ಖಜಾನೆಯಿಂದ ಮೆರವಣಿಗೆ ಮೂಲಕ ದೇವಾಲಯಕ್ಕೆ ರವಾನೆ ಮಾಡಲಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯೋ ಹಾಸನಾಂಬೆ ದೇಗುಲದ ಬಾಗಿಲು ಈ ಬಾರಿ ನವೆಂಬರ್ 5ರಂದು ಅಪರಾಹ್ನ 12 ಗಂಟೆಗೆ ಸಂಪ್ರದಾಯದಂತೆ ತರೆಯಲಿದೆ.
ಇಂದು ಜಿಲ್ಲಾಧಿಕಾರಿ ಆರ್. ಗಿರೀಶ್, ಎಡಿಸಿ ಜಿಲ್ಲಾಧಿಕಾರಿ ಕವಿತಾ ರಾಜರಾಮ್, ಹಾಗೂ ತಹಸೀಲ್ದಾರ್ ಶಿವಶಂಕರಪ್ಪ ನೇತೃತ್ವದಲ್ಲಿ ಖಜಾನೆಯಲ್ಲಿದ್ದ ಒಡವೆ ಪೆಟ್ಟಿಗೆಯನ್ನು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅಲಂಕೃತಗೊಂಡಿದ್ದ ಅಡ್ಡ ಪಲ್ಲಕ್ಕಿ ಮೇಲೆ ಇಟ್ಟು ಪೂಜೆ ಸಲ್ಲಿಸಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇಗುಲಕ್ಕೆ ತರಲಾಯಿತು.
ಶತಮಾನಗಳ ಸಂಪ್ರದಾಯ ಕಾಪಾಡಿಕೊಳ್ಳೋ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ
ಪ್ರತೀ ವರ್ಷ ಆಶ್ವೀಜ ಮಾಸದ ಮೊದಲ ಗುರುವಾರ ದೇಗುಲದ ಬಾಗಿಲು ತೆರೆಯೋದು ವಾಡಿಗೆ, ಅದರಂತೆ ಈ ಬಾರಿಗೂ ಕೂಡ ನವೆಂಬರ್ 5ರ ಗುರುವಾರ ದೇಗುಲದ ಬಾಗಿಲು ತೆರೆಯಲಿದೆ. ಆದ್ರೆ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. 12 ದಿನಗಳೂ ಕೂಡ ಆನ್ಲೈನ್ ಮೂಲದ ದೇವಿ ದರ್ಶನ ಮಾಡಲು ಅವಕಾಶ ಭಕ್ತರಿಗೆ ಸಿಗಲಿದೆ.
ಕೇವಲ 10 ದಿನಗಳಲ್ಲಿ ಐದಾರು ಲಕ್ಷ ಭಕ್ತರು ಆಗಮಿಸುತ್ತಿದ್ದ ಹಾಸನಾಂಬೆಗೆ ಈ ಬಾರಿ ಕೊರೊನಾಂತಂಕ ಕಾಡುತ್ತಿರೋದು ವರ್ಷಕ್ಕೊಮ್ಮೆ ಹಾಸನಾಂಬೆಯನ್ನ ಕಣ್ತುಂಬಿಕೊಳ್ಳೋ ಕಾತರದಲ್ಲಿ ಕಾಯುತ್ತಿರೋ ಭಖ್ತರಿಗೆ ಸಹಜವಾಗಿಯೇ ನಿರಾಸೆ ಉಂಟು ಮಾಡಿದ್ದರೆ, ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರೋ ಕೊರೊನಾತಂಕದಿಂದ ಭಕ್ತರು ಹೆಚ್ಚು ಸೇರದಂತೆ ಎಚ್ಚರಿಕೆ ವಹಿಸೋ ಜೊತೆಗೆ ಶತಮಾನಗಳ ಸಂಪ್ರದಾಯವನ್ನೂ ಕಾಪಾಡಿಕೊಳ್ಳೋ ಜವಾಬ್ದಾರಿ ಜಿಲ್ಲಾಡಳಿತದ ಮೇಲೆ ಇದ್ದು, ಇದಕ್ಕಾಗಿ ಈ ವರ್ಷದ ಆನ್ಲೈನ್ ದರ್ಶನಕ್ಕೆ ಜಿಲ್ಲಾಡಳಿತ ತಯಾರಿ ನಡೆಸಿದ್ದು ಎಲ್.ಇ.ಡಿ ಪರದೆ ಮೇಲೆ ಹಾಸನಾಂಬೆಯನ್ನ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.
-ಮಂಜುನಾಥ್ ಕೆ.ಬಿ