‘ಈಶ್ವರಪ್ಪ ನಂಬಿ ಹೋದರೆ 3 ಚೊಂಬು, 3 ನಾಮವೇ ಗತಿ’ -ಬೇಳೂರು ಗೋಪಾಲಕೃಷ್ಣ

  • TV9 Web Team
  • Published On - 14:04 PM, 3 Nov 2020
‘ಈಶ್ವರಪ್ಪ ನಂಬಿ ಹೋದರೆ 3 ಚೊಂಬು, 3 ನಾಮವೇ ಗತಿ’ -ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ‘ಈಶ್ವರಪ್ಪ ನಂಬಿ ಹೋದರೆ 3 ಚೊಂಬು, 3 ನಾಮವೇ ಗತಿ’ ಎಂದು ಶಿವಮೊಗ್ಗದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿ ಕಾರಿದ್ದಾರೆ. ಸಚಿವ K.S.ಈಶ್ವರಪ್ಪರಿಂದ ಸಮಾಜಕ್ಕೆ ಏನೂ ಕೊಡುಗೆ ಇಲ್ಲ. ಈ ಹಿಂದೆ ಆರ್.ಎಸ್.ಎಸ್​ನಿಂದ ನನಗೆ ತೊಂದರೆಯಾಗುತ್ತದೆ ಅಂತಾ ಕನಕದಾಸರ ಹೋರಾಟಕ್ಕೆ ಹೋಗಿರಲಿಲ್ಲ.

ಕನಕ ಪೀಠಕ್ಕಾಗಿ ರಚನೆಯಾಗಿದ್ದ ರಾಯಣ್ಣ ಬ್ರಿಗೇಡ್ ಈಗ ಏನಾಯ್ತು? ಇದರಿಂದ ಕುರುಬ ಸಮುದಾಯ ಬಹಳ ನೊಂದುಕೊಂಡಿದೆ. ಟಿವಿ ಇಂಟರ್ ವ್ಯೂವ್​ಗೆ ಬಂದವರು ಈಶ್ವರಪ್ಪರ ಬಗ್ಗೆ ಕೈ ಮುಗಿದು ಹೇಳುತ್ತಾರೆ. ಈಶ್ವರಪ್ಪ ನಮಗೆ ಮುಗಿಸಿ ಬಿಟ್ಟರು ಎನ್ನುತ್ತಾರೆ. ಇವರೆಲ್ಲಾ ಹಿಂದುಳಿದ ನಾಯಕರು ಎಂದು ಈಶ್ವರಪ್ಪ ವಿರುದ್ಧ ಬೇಳೂರು ವಾಕ್ ಪ್ರಹಾರ ಮಾಡಿದ್ದಾರೆ.

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದರೆ ಒಂದು ಚಾನ್ಸ್ ನೋಡೋಣ ಅಂತಾ ಎಸ್.ಟಿ. ಮೀಸಲಾತಿಗೆ ಸೇರಿಸುವ ಹೋರಾಟ ನಡೆಸುತ್ತಿದ್ದಾರೆ. ಈಶ್ವರಪ್ಪರನ್ನು ಯಾರಾದರು ಮುಖಂಡರು ನಂಬಿಕೊಂಡು ಹೋದರೆ ಮೂರು ನಾಮವೇ ಗತಿ. ಉದಾಹರಣೆಗೆ ನಾನೇ ಇದ್ದೀನಿ. ಅವರನ್ನು ನಂಬಿ ಹೋಗಿದ್ದಕ್ಕೆ ನನಗೆ ಟಿಕೆಟ್ ಸಹ ಕೈತಪ್ಪಿತು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.