
ಹಾಸನ: ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಾಸನ ಮೂಲದ ಯೋಧರೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದ ನಿವಾಸಿ ಮಲ್ಲೇಶ್ ಮೃತ ಯೋಧ.
ಸೇನೆಯ 18ನೇ ಬೆಟಾಲಿಯನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲೇಶ್ರನ್ನು ಅರುಣಾಚಲ ಪ್ರದೇಶದ ಟ್ಯಾಟ್ಯೂಡಿಗ್ಗುನಲ್ಲಿ ನಿಯೋಜಿಸಲಾಗಿತ್ತು. ಕರ್ತವ್ಯದ ವೇಳೆ ಎತ್ತರದ ಪ್ರದೇಶದಿಂದ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇಂದು ಸ್ವಗ್ರಾಮಕ್ಕೆ ಮಲ್ಲೇಶ್ರ ಪಾರ್ಥಿವ ಶರೀರ ಬರಲಿದೆ ಎಂದು ತಿಳಿದುಬಂದಿದೆ.
Published On - 2:41 pm, Sun, 5 July 20