AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟಡ ಕಾಮಗಾರಿಗಾಗಿ ಮೇಸ್ತ್ರಿಗಳನ್ನು ಫ್ಲೈಟ್​ನಲ್ಲಿ ಕರೆಸಿಕೊಂಡ ಬಿಲ್ಡರ್, ಎಲ್ಲಿ..?

ದಕ್ಷಿಣ ಕನ್ನಡ: ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದ್ದ ಹಿನ್ನೆಲೆಯಲ್ಲಿ ಐವರು ಮೇಸ್ತ್ರಿಗಳನ್ನು ಕೋಲ್ಕತ್ತಾದಿಂದ ಮಂಗಳೂರಿಗೆ ವಿಮಾನದಲ್ಲಿ ಕರೆಸಿಕೊಂಡಿರುವ ಅಚ್ಚರಿಯ ಸಂಗತಿಯೊಂದು ಜಿಲ್ಲೆಯಲ್ಲಿ ನಡೆದಿದೆ. ಮಂಗಳೂರಿನ ಮೇರಿಯನ್ ಬಿಲ್ಡರ್ಸ್​ನ ಮಾಲೀಕ ನವೀನ್ ಈ ಹಿಂದೆ ನಗರದಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಲಾಕ್​ಡೌನ್​ ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಂತುಹೋಗಿತ್ತು. ಜೊತೆಗೆ, ಕಾರ್ಮಿಕರು ಮತ್ತು ಅವರ ಮೇಸ್ತ್ರಿಗಳು ಪಶ್ಚಿಮ ಬಂಗಾಳಕ್ಕೆ ವಾಪಸ್​ ಆಗಿದ್ದರು. ಹೀಗಾಗಿ, ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾದ ನವೀನ್​ ಆ ಐವರು ಮೇಸ್ತ್ರಿಗಳಿಗೆ ಮತ್ತೊಮ್ಮೆ ಆಹ್ವಾನ […]

ಕಟ್ಟಡ ಕಾಮಗಾರಿಗಾಗಿ ಮೇಸ್ತ್ರಿಗಳನ್ನು ಫ್ಲೈಟ್​ನಲ್ಲಿ ಕರೆಸಿಕೊಂಡ ಬಿಲ್ಡರ್, ಎಲ್ಲಿ..?
KUSHAL V
|

Updated on: Jul 05, 2020 | 2:19 PM

Share

ದಕ್ಷಿಣ ಕನ್ನಡ: ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದ್ದ ಹಿನ್ನೆಲೆಯಲ್ಲಿ ಐವರು ಮೇಸ್ತ್ರಿಗಳನ್ನು ಕೋಲ್ಕತ್ತಾದಿಂದ ಮಂಗಳೂರಿಗೆ ವಿಮಾನದಲ್ಲಿ ಕರೆಸಿಕೊಂಡಿರುವ ಅಚ್ಚರಿಯ ಸಂಗತಿಯೊಂದು ಜಿಲ್ಲೆಯಲ್ಲಿ ನಡೆದಿದೆ.

ಮಂಗಳೂರಿನ ಮೇರಿಯನ್ ಬಿಲ್ಡರ್ಸ್​ನ ಮಾಲೀಕ ನವೀನ್ ಈ ಹಿಂದೆ ನಗರದಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಲಾಕ್​ಡೌನ್​ ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಂತುಹೋಗಿತ್ತು. ಜೊತೆಗೆ, ಕಾರ್ಮಿಕರು ಮತ್ತು ಅವರ ಮೇಸ್ತ್ರಿಗಳು ಪಶ್ಚಿಮ ಬಂಗಾಳಕ್ಕೆ ವಾಪಸ್​ ಆಗಿದ್ದರು.

ಹೀಗಾಗಿ, ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾದ ನವೀನ್​ ಆ ಐವರು ಮೇಸ್ತ್ರಿಗಳಿಗೆ ಮತ್ತೊಮ್ಮೆ ಆಹ್ವಾನ ನೀಡಿದ್ದರು. ಆದರೆ, ಕೊರೊನಾಗೆ ಹೆದರಿ ಅವರು ರೈಲಿನಲ್ಲಿ ಮಂಗಳೂರಿಗೆ ಬರಲು ಹಿಂದೇಟು ಹಾಕಿದ್ದರು. ಹೀಗಾಗಿ, ನವೀನ್​ ಆ ಐವರು ಮೇಸ್ತ್ರಿಗಳಿಗೂ ವಿಮಾನದ ಮೂಲಕ ಕೋಲ್ಕತ್ತಾದಿಂದ ಮಂಗಳೂರಿಗೆ ಬರಲು ಟಿಕೆಟ್ ಬುಕ್​ ಮಾಡಿಕೊಟ್ಟಿದ್ದಾರೆ. ಟಿಕೆಟ್​ಗಾಗಿ ತಲಾ 7 ಸಾವಿರ ರೂಪಾಯಿಯಂತೆ ಒಟ್ಟು 35 ಸಾವಿರ ರೂಪಾಯಿ ಖರ್ಚು ಮಾಡಿರುವ ಬಿಲ್ಡರ್ ಜೊತೆಗೆ ಐವರು ಕಾರ್ಮಿಕರ ಕ್ವಾರೆಂಟೈನ್​ಗಾಗಿ ಮಂಗಳೂರಿನಲ್ಲಿ ವ್ಯವಸ್ಥೆ ಸಹ ಮಾಡಿದ್ದಾರಂತೆ.