ಬೆಡ್ ಇದ್ದರೂ ಇಲ್ಲಾ ಅಂತಿರೋದ್ಯಾಕೆ? ನಗರದ ಆಸ್ಪತ್ರೆಗಳ ಅಸಲಿ ಚಿತ್ರಣ ಬಯಲು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ತಾರಕಕ್ಕೇರಿದೆ. ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಇದರ ನಡುವೆ ಬೆಂಗಳೂರಿನ ಯಾವುದೇ ಆಸ್ಪತ್ರೆಗೆ ಹೋದ್ರೂ ಬೆಡ್ ಇಲ್ಲ ಎಂದು ಟ್ರೀಟ್ಮೆಂಟ್ ಕೊಡ್ತಿಲ್ಲ. ಕೊರೊನಾ ರೋಗಿಗಳಿಗೆ ಹಾಗೂ ನಾನ್ ಕೊವಿಡ್ ಪೇಷಂಟ್ಗಳಿಗೆ ಟ್ರೀಟ್ಮೆಂಟ್ ಸಿಗ್ತಿಲ್ಲ. ಯಾವುದೇ ಆಸ್ಪತ್ರೆಗೆ ಹೋದ್ರೂ ಬೆಡ್ ಇಲ್ಲ.. ಬೆಡ್ ಇಲ್ಲ.. ಬೆಡ್ ಇಲ್ಲ.. ಎಂದೇ ಹೇಳುತ್ತಿದ್ದಾರೆ. ಆದ್ರೆ ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳ ಅಸಲಿ ಚಿತ್ರಣವೇ ಬೇರೆ ಇದೆ. ಆಸ್ಪತ್ರೆಗಳು ಮುಚ್ಚಿಟ್ಟಿರುವ, ಮುಚ್ಚಿಡಲು ನೋಡ್ತಿರೋ ಸತ್ಯ ಕಥೆ ರಿವೀಲ್ […]

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ತಾರಕಕ್ಕೇರಿದೆ. ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಇದರ ನಡುವೆ ಬೆಂಗಳೂರಿನ ಯಾವುದೇ ಆಸ್ಪತ್ರೆಗೆ ಹೋದ್ರೂ ಬೆಡ್ ಇಲ್ಲ ಎಂದು ಟ್ರೀಟ್ಮೆಂಟ್ ಕೊಡ್ತಿಲ್ಲ. ಕೊರೊನಾ ರೋಗಿಗಳಿಗೆ ಹಾಗೂ ನಾನ್ ಕೊವಿಡ್ ಪೇಷಂಟ್ಗಳಿಗೆ ಟ್ರೀಟ್ಮೆಂಟ್ ಸಿಗ್ತಿಲ್ಲ. ಯಾವುದೇ ಆಸ್ಪತ್ರೆಗೆ ಹೋದ್ರೂ ಬೆಡ್ ಇಲ್ಲ.. ಬೆಡ್ ಇಲ್ಲ.. ಬೆಡ್ ಇಲ್ಲ.. ಎಂದೇ ಹೇಳುತ್ತಿದ್ದಾರೆ. ಆದ್ರೆ ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳ ಅಸಲಿ ಚಿತ್ರಣವೇ ಬೇರೆ ಇದೆ. ಆಸ್ಪತ್ರೆಗಳು ಮುಚ್ಚಿಟ್ಟಿರುವ, ಮುಚ್ಚಿಡಲು ನೋಡ್ತಿರೋ ಸತ್ಯ ಕಥೆ ರಿವೀಲ್ ಆಗಿದೆ.
ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದ್ರೂ ಕೊರೊನಾ ಸೋಂಕಿತರಿಗೆ ಬೆಡ್ ಖಾಲಿ ಇಲ್ಲ ಅಂತಾ ಆಸ್ಪತ್ರೆಗಳು ಸುಳ್ಳು ಹೇಳ್ತಿವೆ. ಇದರಿಂದ ಎಷ್ಟೋ ಸೋಂಕಿತರು ಚಿಕಿತ್ಸೆ ಸಿಗದೆ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಾಣಬಿಟ್ಟಿದ್ದಾರೆ.
ಬೆಡ್ ಖಾಲಿ ಇದ್ರೂ ಸಿಗ್ತಿಲ್ಲ ಚಿಕಿತ್ಸೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬರೋಬ್ಬರಿ 211 ಬೆಡ್ಗಳು ಖಾಲಿ ಇವೆ. ಆದ್ರೂ ಬೆಡ್ ಖಾಲಿ ಇಲ್ಲ ಅಂತಾ ರೋಗಿಗಳನ್ನು ಕಳಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 25 ಬೆಡ್ ಖಾಲಿ ಇವೆ. ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ 26 ಬೆಡ್. ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ 32 ಬೆಡ್, ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ 23 ಬೆಡ್, ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ 10 ಬೆಡ್ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದ್ರೂ ರೋಗಿಗಳಿಗೆ ಚಿಕಿತ್ಸೆ ಸಿಗ್ತಿಲ್ಲ. ಆದರೆ ಏಕೆ ಎಂಬ ಪ್ರಶ್ನೆ ಎದ್ದಿದೆ.
ಅಲ್ಲದೆ ಸರ್ಕಾರಿ ಆಸ್ಪತ್ರೆಗಳಂತೆ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಖಾಲಿ ಇವೆ. ಆಕಾಶ್ ಮೆಡಿಕಲ್ ಕಾಲೇಜ್ನಲ್ಲಿ 151 ಬೆಡ್, ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜ್ನಲ್ಲಿ 100 ಬೆಡ್, ಹೊಸಕೋಟೆಯ ಎಂವಿಜೆಯಲ್ಲಿ 78, ಬಿಜಿಎಸ್ನಲ್ಲಿ 55 ಬೆಡ್, ಈಸ್ಟ್ ಪಾಯಂಟ್ ಮೆಡಿಕಲ್ ಕಾಲೇಜ್ 128 ಬೆಡ್, ದಿ ಆಕ್ಸಪರ್ಡ್ ಮೆಡಿಕಲ್ ಕಾಲೇಜ್ ನಲ್ಲಿ 148 ಬೆಡ್, ವೈದೇಹಿ ಮೆಡಿಕಲ್ ಕಾಲೇಜ್ನಲ್ಲಿಯೂ 197 ಬೆಡ್ ಖಾಲಿ ಇವೆ ಎಂದು ತಿಳಿದು ಬಂದಿದೆ.
Published On - 3:10 pm, Sun, 5 July 20