ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಮೆಕ್ಕೆಜೋಳ ನಾಶ

ರವಿ ತಿರುಮಲೈ ಮತ್ತು ಪ್ರವೀಣ್ ತಿರುಮಲೈ ಅವರಿಗೆ ಸೇರಿದ ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಸುಟ್ಟು ನಾಶವಾಗಿರುವ ಮೆಕ್ಕೆ ತೆನೆಗಳ ರಾಶಿಯನ್ನು ಕಂಡು ರೈತರು ಕಂಗಾಲಾಗಿದ್ದಾರೆ. 

ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಮೆಕ್ಕೆಜೋಳ ನಾಶ
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 24, 2021 | 4:09 PM

ಹಾವೇರಿ: ಪಕ್ಕದ ಜಮೀನಿನಲ್ಲಿ ಹಾಕಿದ್ದ ಬೆಂಕಿ ಕಿಡಿ ತಾಗಿ 9 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ನಡೆದಿದೆ.

ರವಿ ತಿರುಮಲೈ ಮತ್ತು ಪ್ರವೀಣ್ ತಿರುಮಲೈ ಅವರಿಗೆ ಸೇರಿದ ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಸುಟ್ಟು ನಾಶವಾಗಿರುವ ಮೆಕ್ಕೆ ತೆನೆಗಳ ರಾಶಿಯನ್ನು ಕಂಡು ರೈತರು ಕಂಗಾಲಾಗಿದ್ದಾರೆ.  ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತು.

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ: 26 ಎಕರೆ ಸೂರ್ಯಕಾಂತಿ ಬೆಳೆ ಆಹುತಿ