ಪರಿಚಿತ ಮಹಿಳೆಯನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗಿ ಹೀನಾಯ ಕೃತ್ಯ ಎಸಗಿದ್ದ ಯುವಕ ಅರೆಸ್ಟ್

|

Updated on: Nov 08, 2020 | 9:57 AM

ಹಾವೇರಿ: ಮಹಿಳೆಯನ್ನ ಹತ್ಯೆ ಮಾಡಿ ಮೃತದೇಹವನ್ನ ಅರಣ್ಯ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈರಮ್ಮ (48) ಹತ್ಯೆಯಾಗಿರೋ ಮಹಿಳೆ. ಯಲ್ಲಪ್ಪ(26) ಬಂಧಿತ ಆರೋಪಿ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಕರವಳ್ಳಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ 48 ವರ್ಷದ ಈರಮ್ಮನ ಶವ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ. ನವಂಬರ್ 1ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಈರಮ್ಮ ಅದೇ ಗ್ರಾಮದ 26 ವರ್ಷದ ಯಲ್ಲಪ್ಪ ಎಂಬ […]

ಪರಿಚಿತ ಮಹಿಳೆಯನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗಿ ಹೀನಾಯ ಕೃತ್ಯ ಎಸಗಿದ್ದ ಯುವಕ ಅರೆಸ್ಟ್
Follow us on

ಹಾವೇರಿ: ಮಹಿಳೆಯನ್ನ ಹತ್ಯೆ ಮಾಡಿ ಮೃತದೇಹವನ್ನ ಅರಣ್ಯ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈರಮ್ಮ (48) ಹತ್ಯೆಯಾಗಿರೋ ಮಹಿಳೆ. ಯಲ್ಲಪ್ಪ(26) ಬಂಧಿತ ಆರೋಪಿ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಕರವಳ್ಳಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ 48 ವರ್ಷದ ಈರಮ್ಮನ ಶವ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ. ನವಂಬರ್ 1ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಈರಮ್ಮ ಅದೇ ಗ್ರಾಮದ 26 ವರ್ಷದ ಯಲ್ಲಪ್ಪ ಎಂಬ ಯುವಕನ ಜೊತೆ ಬೈಕ್​ನಲ್ಲಿ ಮಕರವಳ್ಳಿ ಅರಣ್ಯ ಪ್ರದೇಶ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಯಲ್ಲಪ್ಪ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಮೃತದೇಹ ಬಿಟ್ಟು ಪರಾರಿಯಾಗಿದ್ದ.

ಯಲ್ಲಪ್ಪ ಹಾಗೂ ಈರಮ್ಮ ಪರಸ್ಪರ ಪರಿಚಿತರಾಗಿದ್ದವರು. ಆದ್ರೆ ಯಲ್ಲಪ್ಪ ತನ್ನ ತಾಯಿ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಮುಖ ಅರೆಸ್ಟ್ ಆಗಿದ್ದಾನೆ.