ಇನ್ಸ್ಪೆಕ್ಟರ್​ಗೆ ಕೊರೊನಾ, 100ಕ್ಕೂ ಹೆಚ್ಚು ಜನರ ಗಂಟಲು ದ್ರವ ಪರೀಕ್ಷೆ

ಮೈಸೂರು: ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಮತ್ತೊಂದು ಪೊಲೀಸ್ ಠಾಣೆ ಸೀಲ್‌ ಆಗಿದೆ. H.D.ಕೋಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್​ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ಪೊಲೀಸ್ ಠಾಣೆ ಮತ್ತು ಪಾರ್ವತಿ ಹೆಲ್ತ್ ಕೇರ್ ಖಾಸಗಿ ಮೆಡಿಕಲ್ಸ್​ ಸಹಾ ಸೀಲ್​ಡೌನ್ ಮಾಡಲಾಗಿದೆ. ಹೆಚ್.ಡಿ.ಕೋಟೆ ಪಟ್ಟಣದ ಅಂಗಡಿಗಳನ್ನ ಮುಚ್ಚಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಂದಿನಿಂದ 2 ದಿನ ಅಂಗಡಿ ಬಂದ್​ಗೆ ವರ್ತಕರು ನಿರ್ಧಾರಿಸಿದ್ದಾರೆ. ಪೊಲೀಸ್ ಅಧಿಕಾರಿ ಸಂಪರ್ಕದಲ್ಲಿದ್ದ ಸಿಬ್ಬಂದಿ, ಪತ್ರಕರ್ತರು, ಸಾರ್ವಜನಿಕರು ಸೇರಿದಂತೆ 100ಕ್ಕೂ ಹೆಚ್ಚು ಜನರ ಗಂಟಲು ದ್ರವವನ್ನು ಸಂಗ್ರಹಿಸಿ ಟೆಸ್ಟ್‌ಗೆ […]

ಇನ್ಸ್ಪೆಕ್ಟರ್​ಗೆ ಕೊರೊನಾ, 100ಕ್ಕೂ ಹೆಚ್ಚು ಜನರ ಗಂಟಲು ದ್ರವ ಪರೀಕ್ಷೆ

Updated on: Jul 03, 2020 | 8:57 AM

ಮೈಸೂರು: ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಮತ್ತೊಂದು ಪೊಲೀಸ್ ಠಾಣೆ ಸೀಲ್‌ ಆಗಿದೆ. H.D.ಕೋಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್​ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ಪೊಲೀಸ್ ಠಾಣೆ ಮತ್ತು ಪಾರ್ವತಿ ಹೆಲ್ತ್ ಕೇರ್ ಖಾಸಗಿ ಮೆಡಿಕಲ್ಸ್​ ಸಹಾ ಸೀಲ್​ಡೌನ್ ಮಾಡಲಾಗಿದೆ.

ಹೆಚ್.ಡಿ.ಕೋಟೆ ಪಟ್ಟಣದ ಅಂಗಡಿಗಳನ್ನ ಮುಚ್ಚಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಂದಿನಿಂದ 2 ದಿನ ಅಂಗಡಿ ಬಂದ್​ಗೆ ವರ್ತಕರು ನಿರ್ಧಾರಿಸಿದ್ದಾರೆ. ಪೊಲೀಸ್ ಅಧಿಕಾರಿ ಸಂಪರ್ಕದಲ್ಲಿದ್ದ ಸಿಬ್ಬಂದಿ, ಪತ್ರಕರ್ತರು, ಸಾರ್ವಜನಿಕರು ಸೇರಿದಂತೆ 100ಕ್ಕೂ ಹೆಚ್ಚು ಜನರ ಗಂಟಲು ದ್ರವವನ್ನು ಸಂಗ್ರಹಿಸಿ ಟೆಸ್ಟ್‌ಗೆ ರವಾನಿಸಲಾಗಿದೆ. ಅಲ್ಲದೆ ಈ ಕೇಸ್​ನಿಂದಾಗಿ HD ಕೋಟೆ ಪಟ್ಟಣದ ನಿವಾಸಿಗಳು ಆತಂಕದಲ್ಲಿದ್ದಾರೆ.