ನಿಮ್ಮಂತೆ ರಾಸಲೀಲೆ ಮಾಡೋಕ್ಕಲ್ಲ ಪಂಚತಾರಾ ಹೋಟೆಲ್‌ನಲ್ಲಿ ಇದ್ದಿದ್ದು: HDK

|

Updated on: Nov 28, 2019 | 1:37 PM

ಮೈಸೂರು: ನಾನು ಸರ್ಕಾರದ ಮನೆ ತೆಗೆದುಕೊಂಡಿರದ ಕಾರಣ ಪಂಚತಾರಾ ಹೋಟೆಲ್‌ನಲ್ಲಿ ರೂಂ ಮಾಡಿದ್ದೆ. ಹೀಗಾಗಿ ಪಂಚತಾರಾ ಹೋಟೆಲ್‌ನಲ್ಲಿದ್ದೆ. ನಿಮ್ಮಂತೆ ರಾಸಲೀಲೆ ಮಾಡುವುದಕ್ಕಲ್ಲ ಎಂದು ಮಾಜಿ ಹೆಚ್​ ಡಿ ಕುಮಾರಸ್ವಾಮಿ ಗುಟುರು ಹಾಕಿದ್ದಾರೆ. KSRTC ಬಸ್ ಸ್ಕ್ರ್ಯಾಪ್ ಟೆಂಡರ್ ಕೊಡ್ಸಿ ಅಂತಾ ಬಂದಿದ್ದ: ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬಗ್ಗೆ ತೀವ್ರ ಗರಂ ಆಗಿರುವ ಕುಮಾರಸ್ವಾಮಿ, ವಿಶ್ವನಾಥ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಈ ವಿಶ್ವನಾಥ್ ಎಷ್ಟು ದಿನ ನನ್ನ ಮನೆಗೆ ಬಂದು ತಿಂಡಿ ತಿಂದಿಲ್ಲ. […]

ನಿಮ್ಮಂತೆ ರಾಸಲೀಲೆ ಮಾಡೋಕ್ಕಲ್ಲ ಪಂಚತಾರಾ ಹೋಟೆಲ್‌ನಲ್ಲಿ ಇದ್ದಿದ್ದು: HDK
Follow us on

ಮೈಸೂರು: ನಾನು ಸರ್ಕಾರದ ಮನೆ ತೆಗೆದುಕೊಂಡಿರದ ಕಾರಣ ಪಂಚತಾರಾ ಹೋಟೆಲ್‌ನಲ್ಲಿ ರೂಂ ಮಾಡಿದ್ದೆ. ಹೀಗಾಗಿ ಪಂಚತಾರಾ ಹೋಟೆಲ್‌ನಲ್ಲಿದ್ದೆ. ನಿಮ್ಮಂತೆ ರಾಸಲೀಲೆ ಮಾಡುವುದಕ್ಕಲ್ಲ ಎಂದು ಮಾಜಿ ಹೆಚ್​ ಡಿ ಕುಮಾರಸ್ವಾಮಿ ಗುಟುರು ಹಾಕಿದ್ದಾರೆ.

KSRTC ಬಸ್ ಸ್ಕ್ರ್ಯಾಪ್ ಟೆಂಡರ್ ಕೊಡ್ಸಿ ಅಂತಾ ಬಂದಿದ್ದ:
ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬಗ್ಗೆ ತೀವ್ರ ಗರಂ ಆಗಿರುವ ಕುಮಾರಸ್ವಾಮಿ, ವಿಶ್ವನಾಥ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಈ ವಿಶ್ವನಾಥ್ ಎಷ್ಟು ದಿನ ನನ್ನ ಮನೆಗೆ ಬಂದು ತಿಂಡಿ ತಿಂದಿಲ್ಲ. ಅವತ್ತು ನನ್ನ ಮನೆಗೆ ಬಂದಿದ್ದಲ್ಲಪ್ಲ ಕ್ಷೇತ್ರದ ಕೆಲಸ ಮಾಡಿಕೊಡಿ ಅಂತ ಕೇಳಿದ್ರಾ? ನನ್ ಮನೆಗೆ ಬಂದಿದ್ದು KSRTC ಬಸ್ ಸ್ಕ್ರ್ಯಾಪ್ ಟೆಂಡರ್ ಕೊಡಿಸಿ ಅಂತ ಕೇಳುವುದಕ್ಕೆ. ಅದರಲ್ಲಿ ಬರೋ ಕಮಿಷನ್‌ಗಾಗಿ ನನ್ನ ಮನೆ ಬಳಿ ಬಂದಿದ್ರು. KSRTC ಎಂಡಿಗೆ ಕರೆ ಮಾಡಿ ಅಂತ ನನ್ ಮನೆಗೆ ಬಾಗಿಲಿಗೆ ಬಂದಿರಲಿಲ್ವಾ ಕೇಳಿ? ಎಂದು ವಿಶ್ವನಾಥ್‌ರನ್ನ ಉಲ್ಲೇಖಿಸಿ ಹೆಚ್‌ಡಿಕೆ ಪ್ರಶ್ನೆ ಹಾಕಿದರು.

ನನ್ನ ಬಳಿ ಆಡಬೇಡ‌:
ನನ್ನ ಬಗ್ಗೆ ಲಘುವಾಗಿ ಮಾತನಾಡುವುದಕ್ಕೆ ಮುನ್ನ ಎಚ್ಚರಿಕೆಯಿಂದಿರಿ. ಬೇರೆಯವರ ಬಳಿ ಆಟವಾಡಿದ ರೀತಿ ನನ್ನ ಬಳಿ ಆಡಬೇಡ‌. ಹುಣಸೂರು ಜಿಲ್ಲೆ ವಿಚಾರ ನನ್ನ ಬಳಿ ಪ್ರಸ್ತಾಪವೇ ಮಾಡಿಲ್ಲ. ಅವರು ನನ್ನ ಭೇಟಿ ಮಾಡೋದಿರಲಿ ನಾನೇ ಅವರನ್ನ ಜಯದೇವ ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದೇನೆ. ಚಂಗಿಪಿಂಗಿ ವ್ಯವಹಾರದ ಮೂಲಕ ರಾಜಕಾರಣ ಮಾಡಿದ್ದೀಯಾ. ಅದಕ್ಕೆಲ್ಲ ಹುಣಸೂರು ಜನ ಅಂತಿಮ ಹಾಡ್ತಾರೆ ಎಂದು ಹುಣಸೂರು ಅಖಾಡದಲ್ಲಿ ಹಳ್ಳಿಹಕ್ಕಿಗೆ ಹೆಚ್‌ಡಿಕೆ ಕುಟುಕಿದರು.

Published On - 1:37 pm, Thu, 28 November 19