ತಿರುಪತಿ ಮಾದರಿಯ ಕಲ್ಯಾಣಮಂಟಪದಲ್ಲಿ ಆನಂದ್ ಸಿಂಗ್ ಪುತ್ರನ ಮದುವೆಗೆ ರೆಡಿ
ಬಳ್ಳಾರಿ: ಹಾಲಿ ಬಿಜೆಪಿಯ ಪ್ರಭಾವಿ ನಾಯಕ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಮದುವೆ ಹಿನ್ನೆಲೆ ಮಗನ ಮದುವೆಗೆ ಹೊಸಪೇಟೆ ನಿವಾಸದಲ್ಲಿ ಭರ್ಜರಿಯಾಗಿ ಮದುವೆ ಪೂರ್ವ ಸಿದ್ಧತೆ ನಡೆಯುತ್ತಿದೆ. ಡಿಸೆಂಬರ್ 1 ರಂದು ಅದ್ದೂರಿ ಮದುವೆ ಹಾಗೂ ನವೆಂಬರ್ 30 ರಂದು ಕಲರ್ ಪುಲ್ ಸಾಂಸ್ಕೃತಿಕ ಕಾರ್ಯಕ್ರಮ ಇರುವುದರಿಂದ ಹೊಸಪೇಟೆ ಹೊರವಲಯದ ತಮ್ಮ ನೂತನ ನಿವಾಸ ದ್ವಾರಕ ಹಿಂಭಾಗ ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ. ನಂದಗೋಕುಲ ಹೆರಿಟೇಜ್ನ 8 ಎಕರೆ ಜಾಗದಲ್ಲಿ ಮೂರು ಪ್ರಮುಖ ವೇದಿಕೆಯಲ್ಲಿ ಸೆಟ್ ನಿರ್ಮಾಣ […]
ಬಳ್ಳಾರಿ: ಹಾಲಿ ಬಿಜೆಪಿಯ ಪ್ರಭಾವಿ ನಾಯಕ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಮದುವೆ ಹಿನ್ನೆಲೆ ಮಗನ ಮದುವೆಗೆ ಹೊಸಪೇಟೆ ನಿವಾಸದಲ್ಲಿ ಭರ್ಜರಿಯಾಗಿ ಮದುವೆ ಪೂರ್ವ ಸಿದ್ಧತೆ ನಡೆಯುತ್ತಿದೆ. ಡಿಸೆಂಬರ್ 1 ರಂದು ಅದ್ದೂರಿ ಮದುವೆ ಹಾಗೂ ನವೆಂಬರ್ 30 ರಂದು ಕಲರ್ ಪುಲ್ ಸಾಂಸ್ಕೃತಿಕ ಕಾರ್ಯಕ್ರಮ ಇರುವುದರಿಂದ ಹೊಸಪೇಟೆ ಹೊರವಲಯದ ತಮ್ಮ ನೂತನ ನಿವಾಸ ದ್ವಾರಕ ಹಿಂಭಾಗ ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ.
ನಂದಗೋಕುಲ ಹೆರಿಟೇಜ್ನ 8 ಎಕರೆ ಜಾಗದಲ್ಲಿ ಮೂರು ಪ್ರಮುಖ ವೇದಿಕೆಯಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತಿದ್ದು, ವೇದಿಕೆಗೆ ಬಂಗಾರ ಬಣ್ಣ ಲೇಪಿನ ಕೊನೆ ಟಚ್ ಆಗಲಿದೆ. ತಿರುಪತಿ ದೇವಾಲಯದ ಮಾದರಿಯಲ್ಲಿ ಕಲ್ಯಾಣ ಮಂಟಪ ರೆಡಿಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರತ್ಯೇಕ ತೆರೆದ ವೇದಿಕೆಯ ಸಿದ್ಧತೆ ನಡೆಯುತ್ತಿದೆ.
ಹತ್ತು ದಿನಗಳಿಂದ ಹೈದ್ರಾಬಾದ್, ಮುಂಬೈ ಕಲಾವಿದರು ಸೇರಿದಂತೆ ನೂರಾರು ಕಾರ್ಮಿಕರಿಂದ ಮದುವೆಯ ತಯಾರಿ ಶುರುವಾಗಿದೆ. ಊಟಕ್ಕೆ ಮೂರು ಕಡೆ ವ್ಯವಸ್ಥೆ ಆಯೋಜನೆ ಮಾಡಿದ್ದಾರೆ. ಇದೇ ಡಿಸೆಂಬರ್ 1 ರಂದು ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಅವರು ಸಂಜನಾ ಸಿಂಗ್ ಅವರನ್ನು ವರಿಸಲಿದ್ದಾರೆ.
Published On - 10:36 am, Thu, 28 November 19