ಹೈಕೋರ್ಟ್ ತಿವಿತಕ್ಕೆ ಬೆಚ್ಚಿಬಿದ್ದ BBMP ಏನ್ ಮಾಡಿದೆ, ತಪ್ಪದೇ ನೋಡಿ!
ಬೆಂಗಳೂರು: ನಿಮ್ಮ ಅವಾಂತರಗಳಿಂದಾಗಿ ಆಗುವ ಅನಾಹುತ, ಅಪಘಾತಗಳಿಗೆ ಪರಿಹಾರ ನೀಡಲು ಬರುವುದಿಲ್ಲ ನಿಮಗೆ! ರಸ್ತೆ ಗುಂಡಿ ನಿರ್ಮಾಣವಾಗಿದ್ದರೆ ಕಣ್ಣುಮುಚ್ಚಿ ಕುಳಿತಿರುತ್ತೀರಿ, ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ? ಎಂದು ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ BBMPಯನ್ನು ನಿನ್ನೆ ವಿಚಾರಿಸಿಕೊಂಡಿದ್ದರು. ಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ನಿಮ್ಮ ವಕೀಲರ ಮೂಲಕ ವಿತಂಡವಾದ ಮಾಡುತ್ತೀರಾ? ಬೆಂಗಳೂರಿನಲ್ಲಿ BBMPವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳೇನಾದರೂ ಆದ್ರೆ ಅದಕ್ಕೆ ಪರಿಹಾರ ನೀಡುವುದಾಗಿ ಮೊದಲು ಸಾರ್ವಜನಿಕ ಪ್ರಕಟಣೆ ನೀಡಿ ಎಂದು […]
ಬೆಂಗಳೂರು: ನಿಮ್ಮ ಅವಾಂತರಗಳಿಂದಾಗಿ ಆಗುವ ಅನಾಹುತ, ಅಪಘಾತಗಳಿಗೆ ಪರಿಹಾರ ನೀಡಲು ಬರುವುದಿಲ್ಲ ನಿಮಗೆ! ರಸ್ತೆ ಗುಂಡಿ ನಿರ್ಮಾಣವಾಗಿದ್ದರೆ ಕಣ್ಣುಮುಚ್ಚಿ ಕುಳಿತಿರುತ್ತೀರಿ, ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ? ಎಂದು ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ BBMPಯನ್ನು ನಿನ್ನೆ ವಿಚಾರಿಸಿಕೊಂಡಿದ್ದರು.
ಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ನಿಮ್ಮ ವಕೀಲರ ಮೂಲಕ ವಿತಂಡವಾದ ಮಾಡುತ್ತೀರಾ? ಬೆಂಗಳೂರಿನಲ್ಲಿ BBMPವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳೇನಾದರೂ ಆದ್ರೆ ಅದಕ್ಕೆ ಪರಿಹಾರ ನೀಡುವುದಾಗಿ ಮೊದಲು ಸಾರ್ವಜನಿಕ ಪ್ರಕಟಣೆ ನೀಡಿ ಎಂದು ಖುದ್ದು ಸಿಜೆ ಅಭಯ್ ಎಸ್.ಒಕಾ ನಿನ್ನೆ ಕಿಡಿಕಿಡಿಯಾಗಿದ್ದರು.
ಇದು ನಿಮ್ಮ ಆದ್ಯ ಗಮನಕ್ಕೆ! ಇದಕ್ಕೆ ಥರಗುಟ್ಟಿರುವ BBMP ಇಂದು ಕೆಲ ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ, ಹೈಕೋರ್ಟ್ ಹೇಳಿದಂತೆ ರಸ್ತೆ ಗುಂಡಿಗಳಿಂದಾಗಿ ಸಾರ್ವಜನಿಕರಿಗೆ ಏನೇ ಅನಾಹುತ ಸಂಭವಿಸಿದರೆ ಪರಿಹಾರ ಅರ್ಜಿಯನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥಪಡಿಸುವುದಾಗಿ ತಿಳಿಸಿದೆ. ಇದು ಸಾರ್ವಜನಿಕರ ಆದ್ಯ ಗಮನಕ್ಕೆ!
https://www.facebook.com/Tv9Kannada/posts/1183754615160100
Published On - 11:51 am, Thu, 28 November 19