ಕಾಂಗ್ರೆಸ್ ಮೋಸದ ಬಗ್ಗೆ ಮುಂದೆ ಹೇಳ್ತೇನೆ, ಟೈಂಬಾಂಬ್ ಫಿಕ್ಸ್ ಮಾಡಿದ ರಮೇಶ್
ಗೋಕಾಕ್: ರಾಜ್ಯ ಕಾಂಗ್ರೆಸ್ ನಾಯಕರು ಹೇಗೆಲ್ಲಾ ಮೋಸ ಮಾಡಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಸುವೆ ಎಂದು ರಮೇಶ್ ಜಾರಕಿಹೊಳಿ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಂಧಿಕುರಬೇಟ ಎಂಬ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ‘ಕಾಂಗ್ರೆಸ್ ನಾಯಕರ ಬಗ್ಗೆ ಚುನಾವಣೆ ಬಳಿಕ ಇನ್ನಷ್ಟು ವಿಷಯ ಹೇಳುವೆ. ಬಹಳಷ್ಟು ವಿಷಯಗಳು ನನ್ನ ಮನಸ್ಸಿನಲ್ಲಿವೆ. ಕಾಂಗ್ರೆಸ್ ನಾಯಕರು ಏನೇನು ಮೋಸ ಮಾಡಿದ್ದಾರೆ, ಹೇಗೆ ಮೋಸ ಮಾಡಿದ್ದಾರೆ‘ ಎಂಬುದನ್ನ ತಿಳಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. […]
ಗೋಕಾಕ್: ರಾಜ್ಯ ಕಾಂಗ್ರೆಸ್ ನಾಯಕರು ಹೇಗೆಲ್ಲಾ ಮೋಸ ಮಾಡಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಸುವೆ ಎಂದು ರಮೇಶ್ ಜಾರಕಿಹೊಳಿ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಂಧಿಕುರಬೇಟ ಎಂಬ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ‘ಕಾಂಗ್ರೆಸ್ ನಾಯಕರ ಬಗ್ಗೆ ಚುನಾವಣೆ ಬಳಿಕ ಇನ್ನಷ್ಟು ವಿಷಯ ಹೇಳುವೆ. ಬಹಳಷ್ಟು ವಿಷಯಗಳು ನನ್ನ ಮನಸ್ಸಿನಲ್ಲಿವೆ. ಕಾಂಗ್ರೆಸ್ ನಾಯಕರು ಏನೇನು ಮೋಸ ಮಾಡಿದ್ದಾರೆ, ಹೇಗೆ ಮೋಸ ಮಾಡಿದ್ದಾರೆ‘ ಎಂಬುದನ್ನ ತಿಳಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸದ್ಯಕ್ಕೆ ಸುರೇಶ್ ಅಂಗಡಿ ಮತ್ತು ಬಾಲಚಂದ್ರ ಜಾರಕಿಹೊಳಿ ನನ್ನ ಬಾಯಿ ಮುಚ್ಚಿಸಿದ್ದಾರೆ. ಆದ್ರೆ ಚುನಾವಣೆ ಬಳಿಕ ಸುದ್ದಿಗೋಷ್ಠಿ ಮಾಡಿ ಸವಿಸ್ತಾರವಾಗಿ ಎಲ್ಲಾ ತಿಳಿಸುವೆ ಎಂದು ರಮೇಶ್ ಗುಡುಗು ಹಾಕಿದ್ದಾರೆ.
Published On - 1:00 pm, Thu, 28 November 19