ಆರೋಗ್ಯ ಸಲಹೆ: ಚಿಕ್ಕ ಚಿಕ್ಕ ಗಸಗಸೆ ಬೀಜಗಳ ದೊಡ್ಡ ದೊಡ್ಡ ಪ್ರಯೋಜನಗಳು ಹೀಗಿವೆ

|

Updated on: Aug 27, 2023 | 6:06 AM

Poppy Seeds: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಗಸಗಸೆ ಬೀಜಗಳು ಜೈವಿಕವಾಗಿ ಸಕ್ರಿಯವಾಗಿರುವ ವಸ್ತುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್, ಆ್ಯಂಟಿ ಫಂಗಲ್ ಗುಣಲಕ್ಷಣಗಳು ಜ್ವರ, ಶೀತ, ಗಂಟಲು ನೋವು ಮತ್ತು ಉಸಿರಾಟದ ಸೋಂಕುಗಳನ್ನು ತಡೆಯಲು ಕೆಲಸ ಮಾಡುತ್ತವೆ.

ಆರೋಗ್ಯ ಸಲಹೆ: ಚಿಕ್ಕ ಚಿಕ್ಕ ಗಸಗಸೆ ಬೀಜಗಳ ದೊಡ್ಡ ದೊಡ್ಡ ಪ್ರಯೋಜನಗಳು ಹೀಗಿವೆ
ಚಿಕ್ಕ ಚಿಕ್ಕ ಗಸಗಸೆ ಬೀಜದ ದೊಡ್ಡ ದೊಡ್ಡ ಪ್ರಯೋಜನಗಳು
Follow us on

ಪಾಯಸ, ಮಸಾಲೆ ಸಾಂಬಾರ್​​ ಮುಂತಾದ ಹಲವು ಅಡುಗೆಗೆ ಗಸಗಸೆ ಎಂಬ ಚಿಕ್ಕ ಚಿಕ್ಕ ಬೀಜಗಳ ಕೊಡುಗೆ ಅಪಾರ. ಹಾಗೆಯೇ, ಮಾಂಸಾಹಾರಿ ಅಡುಗೆಯಲ್ಲಿಯೂ ಮಸಾಲೆ ಹಾಕಿ ಬೇಯಿಸಿದ ಯಾವುದೇ ಸಾಂಬಾರ್​ ಕರಿ ಇರಲೀ.. ಅದರಲಿ ಗಸಗಸೆ ಇರಲೇ ಬೇಕು. ನಮ್ಮ ದೇಶದಲ್ಲಿ ಬಿಳಿ ಗಸಗಸೆ ಹೆಚ್ಚಾಗಿ ಬಳಸುತ್ತೇವೆ. ಮರಳು ಮರಳಿನ ಹಾಗೆ ಕಾಣುವ ಈ ಧಾನ್ಯಗಳು ನೋಡಲು ತುಂಬಾ ಚಿಕ್ಕದಾಗಿರುತ್ತವೆ. ಆದರೆ ವಿವಿಧ ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳು (Health benefits) ಈ ಗಸಗಸೆ ಬೀಜಗಳಲ್ಲಿ ದೊಡ್ಡದಾಗಿಯೆ ಇರುತ್ತವೆ. ತೂಕ ನಷ್ಟಕ್ಕೆ ಗಸಗಸೆಯನ್ನು ಸಹ ಬಳಸಬಹುದು ಎಂದು ಅನೇಕರಿಗೆ ತಿಳಿದಿಲ್ಲ. ದಿನನಿತ್ಯ ಗಸಗಸೆ ತಿಂದರೆ.. ತೂಕದಲ್ಲಿ ಬದಲಾವಣೆ ಖಂಡಿತ (Opium poppy Seeds).

ಗಸಗಸೆಯಿಂದ ಸಕ್ಕರೆ ನಿಯಂತ್ರಣ:  ಗಸಗಸೆಯಲ್ಲಿ ಇರುವ ಸತುವು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಇವುಗಳಲ್ಲಿರುವ ಮ್ಯಾಂಗನೀಸ್ ಸಕ್ಕರೆಯನ್ನು ನಿಯಂತ್ರಿಸಲು ಸಹ ಉಪಯುಕ್ತವಾಗಿದೆ.

ಗಸಗಸೆಅನೇಕ ರೋಗಗಳಿಗೆ ಚೆಕ್ ಹಾಕುತ್ತೆ:  ಗಸಗಸೆಯಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್‌, ಕಬ್ಬಿಣ, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ-6, ಒಮೆಗಾ-6 ಕೊಬ್ಬಿನಾಮ್ಲಗಳು, ಮೆಗ್ನೀಶಿಯಂ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಹೃದಯ, ಜೀರ್ಣಾಂಗ ವ್ಯವಸ್ಥೆ, ಕೂದಲು, ಚರ್ಮ, ನಿದ್ರಾಹೀನತೆ, ಸಕ್ಕರೆ, ಮೂಳೆ, ನರಗಳ ಸಮಸ್ಯೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ ಕಾಯಿಲೆಗಳಿಗೆ ಗಸಗಸೆ ಪರಿಣಾಮಕಾರಿಯಾಗಿದೆ.

ಗಸಗಸೆ ಫಲವತ್ತತೆಯನ್ನು ಹೆಚ್ಚಿಸುತ್ತದೆ:  ಮಹಿಳೆಯರು ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಅವರು ತಮ್ಮ ಆಹಾರದಲ್ಲಿ ಗಸಗಸೆಯನ್ನು ಸೇರಿಸಬಹುದು. ಫಾಲೋಪಿಯನ್ ಟ್ಯೂಬ್​ನಿಂದ ಲೋಳೆಯನ್ನು ತೆಗೆದುಹಾಕುತ್ತದೆ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಗಸಗಸೆ -ಯಾವುದೇ ಚರ್ಮ ಮತ್ತು ತಲೆಹೊಟ್ಟು ಸಮಸ್ಯೆ ನಿಯಂತ್ರಣಕ್ಕಾಗಿ:  ಗಸಗಸೆಯಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಅಂಶವಿರುತ್ತದೆ. ಚರ್ಮಕ್ಕೆ ಸಂಬಂಧಿಸಿದ ಎಗ್ಜಿಮಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಗಸಗಸೆಯನ್ನು ಮೃದುವಾದ ಪೇಸ್ಟ್ ಆಗಿ ಮ್ಯಾಶ್ ಮಾಡಿ ಮತ್ತು ನಿಂಬೆ ರಸವನ್ನು ಸೇರಿಸಿ, ಮಿಶ್ರಣವನ್ನು ತುರಿಕೆ ಇರುವ ಜಾಗಕ್ಕೆ ಲೇಪನ ಮಾಡಿದರೆ ತ್ವರಿತ ಪರಿಹಾರ ಸಿಗುತ್ತದೆ. ಅಲ್ಲದೆ, ತಲೆಹೊಟ್ಟು ಕಡಿಮೆ ಮಾಡಲು ಗಸಗಸೆ ಬೀಜಗಳನ್ನು ಮೊಸರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ತಲೆಯ ಬುಡಕ್ಕೆ ಹಚ್ಚಿ ಒಂದು ಗಂಟೆಯ ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆಯಿರಿ.

ಗಸಗಸೆ ಮೂಳೆಗಳನ್ನು ಬಲವಾಗಿಸುತ್ತದೆ:  ಗಸಗಸೆಯಲ್ಲಿ ಕ್ಯಾಲ್ಸಿಯಂ ಮತ್ತು ತಾಮ್ರ ಹೆಚ್ಚಾಗಿರುತ್ತದೆ. ಮೂಳೆಗಳು ದುರ್ಬಲವಾಗಿದ್ದರೆ ಮತ್ತು ನೋವಿನಿಂದ ಕೂಡಿದ್ದರೆ ಗಸಗಸೆ ತಿನ್ನುವುದು ಒಳ್ಳೆಯದು. ಗಸಗಸೆ ಮೂಳೆಗಳನ್ನು ಬಲಪಡಿಸುತ್ತದೆ. ಅದರಲ್ಲಿರುವ ಮ್ಯಾಂಗನೀಸ್ ಮತ್ತು ಪ್ರೋಟೀನ್ ಕಾಲಜನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ.

ಗಸಗಸೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:  ಗಸಗಸೆ ಬೀಜಗಳು ಜೈವಿಕವಾಗಿ ಸಕ್ರಿಯವಾಗಿರುವ ವಸ್ತುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್, ಆ್ಯಂಟಿ ಫಂಗಲ್ ಗುಣಲಕ್ಷಣಗಳು ಜ್ವರ, ಶೀತ, ಗಂಟಲು ನೋವು ಮತ್ತು ಉಸಿರಾಟದ ಸೋಂಕುಗಳನ್ನು ತಡೆಯಲು ಕೆಲಸ ಮಾಡುತ್ತವೆ.

ಹೆಚ್ಚಿನ ಆರೋಗ್ಯ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ