ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಮಳೆ ನೀರು ಧುಮ್ಮಿಕ್ಕುತ್ತಿದೆ.
ಆದರೆ ಯಲ್ಲಮ್ಮ ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗಿಲ್ಲ. ಗುಡ್ಡದ ಮೇಲಿಂದ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಎಣ್ಣೆ ಹೊಂಡದ ಮೂಲಕ ಕಾಲುವೆಯತ್ತ ಹರಿಯುತ್ತಿದೆ.