ನಶೆ ರಾಣಿಯರಿಗೆ ಬೇಲ್ ಬೇಡ: CCB ಬಳಿಯಿದೆ ನವ ಅಸ್ತ್ರಗಳು!
ಬೆಂಗಳೂರು: ಡ್ರಗ್ಸ್ ಘಾಟಿನ ನಂಟಿನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಶೆ ರಾಣಿಯರಿಗೆ ಬೇಲ್ ನಿರಾಕರಣೆಗೆ CCB ಮನವಿ ಮಾಡುವ ಸಾಧ್ಯತೆ ಇದೆ. ಬೇಲ್ ನಿರಾಕರಣೆ ಮಾಡಲು ಸಿಸಿಬಿ ಅಧಿಕಾರಿಗಳು ಸಮರ್ಥ ಕಾರಣ ನೀಡಿದ್ದಾರೆ. ಸಂಜನಾ ಮತ್ತು ರಾಗಿಣಿಗೆ ಬೇಲ್ ಕೊಡಬಾರದು ಎಂದು ಸಿಸಿಬಿ ಮನವಿ ಮಾಡಿಕೊಂಡಿದೆ. ಹಾಗಿದ್ರೆ ಬೇಲ್ ನಿರಾಕರಣೆಗೆ ಸಿಸಿಬಿ ಕೊಟ್ಟ ಕಾರಣ ಏನೂ ಅನ್ನೋದನ್ನ ನೋಡೋದಾದ್ರೆ.. ಬೇಲ್ ನಿರಾಕರಣೆಗೆ ಪ್ರಮುಖ ಕಾರಣ: 1.ಡ್ರಗ್ಸ್ ಸೇವನೆ ಮತ್ತು ಬೇರೆಯವರಿಗೆ ಮಾರಾಟ ಮಾಡುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. […]
ಬೆಂಗಳೂರು: ಡ್ರಗ್ಸ್ ಘಾಟಿನ ನಂಟಿನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಶೆ ರಾಣಿಯರಿಗೆ ಬೇಲ್ ನಿರಾಕರಣೆಗೆ CCB ಮನವಿ ಮಾಡುವ ಸಾಧ್ಯತೆ ಇದೆ. ಬೇಲ್ ನಿರಾಕರಣೆ ಮಾಡಲು ಸಿಸಿಬಿ ಅಧಿಕಾರಿಗಳು ಸಮರ್ಥ ಕಾರಣ ನೀಡಿದ್ದಾರೆ.
ಸಂಜನಾ ಮತ್ತು ರಾಗಿಣಿಗೆ ಬೇಲ್ ಕೊಡಬಾರದು ಎಂದು ಸಿಸಿಬಿ ಮನವಿ ಮಾಡಿಕೊಂಡಿದೆ. ಹಾಗಿದ್ರೆ ಬೇಲ್ ನಿರಾಕರಣೆಗೆ ಸಿಸಿಬಿ ಕೊಟ್ಟ ಕಾರಣ ಏನೂ ಅನ್ನೋದನ್ನ ನೋಡೋದಾದ್ರೆ..
ಬೇಲ್ ನಿರಾಕರಣೆಗೆ ಪ್ರಮುಖ ಕಾರಣ: 1.ಡ್ರಗ್ಸ್ ಸೇವನೆ ಮತ್ತು ಬೇರೆಯವರಿಗೆ ಮಾರಾಟ ಮಾಡುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. ಇವರಿಗೆ ಬೇಲ್ ನೀಡಿದರೆ ಆ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಸಾಧ್ಯತೆ ಇದೆ. 2.ಇವರುಗಳಿಗೆ.. ಸಮಾಜಕ್ಕೆ ಇರೋ ಒಂದು ಮುಖ ಮತ್ತು ನಶೆಯ ಮತ್ತೊಂದು ಮುಖದ ಅನಾವರಣೆ ಮಾಡಿದ್ದೇವೆ. 3.ಅಕ್ರಮದಂಧೆಯಲ್ಲಿ ಇಬ್ಬರೂ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. 4.ಅಕ್ರಮದಂಧೆ ಬಗ್ಗೆ ಸಾಕ್ಷ್ಯಗಳಿವೆ ಮತ್ತು ಇನ್ನೂ ತನಿಖೆ ಅಗತ್ಯವಿದೆ. 5.ಗಣ್ಯ, ರಾಜಕೀಯ ಮಕ್ಕಳು, ಸಿನಿಮಾದವರು ಇವರೆಲ್ಲಾ ಸಂಪರ್ಕದಲ್ಲಿದ್ದಾರೆ. 6. ಬೇಲ್ ಕೊಟ್ಟರೆ ಕೆಲವು ಪ್ರಭಾವಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. 7. IT-ED ಇವರ ಮೇಲೆ ಈಗಾಗಲೇ ತನಿಖೆ ಆರಂಭ ಮಾಡಿದೆ. 8.ಇವರುಗಳ ಮೊಬೈಲ್‌ಗಳಲ್ಲಿ ಸಿಕ್ಕ ಆಧಾರದ ಮೇಲೆ ಪೆಡ್ಲರ್‌ಗಳನ್ನ ಬಂಧಿಸಿದ್ದೇವೆ. 9.ಕೆಲವು ಪೆಡ್ಲರ್‌ಗಳು ನಾಪತ್ತೆಯಾಗಿದ್ದಾರೆ, ಇನ್ನೂ ಕೆಲವರನ್ನ ವಿಚಾರಣೆ ಮಾಡುತ್ತಿದ್ದೇವೆ.
ಈ ಮೇಲಿನ ನವ ಕಾರಣಗಳಿಂದಾಗಿ ಬೇಲ್ ಕೊಡಬಾರದು ಎಂದು ಸಿಸಿಬಿ ಅಧಿಕಾರಿಗಳು ಬೇಲ್ ನಿರಾಕರಣೆಗೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.