ಕ್ವಾರಂಟೈನ್‌ ಆಗಬೇಕಿದ್ದ ಪೊಲೀಸ್‌ ಸಿಬ್ಬಂದಿಗೆ SSLC ಪರೀಕ್ಷೆ ಡ್ಯೂಟಿ, ಜನರಲ್ಲಿ ಆತಂಕ

| Updated By:

Updated on: Jun 26, 2020 | 12:59 PM

ಮಂಗಳೂರು: ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನ ಕ್ವಾರಂಟೈನ್‌ ಮಾಡೋದು ಬಿಟ್ಟು SSLC ಪರೀಕ್ಷೆ ಕರ್ತವ್ಯಕ್ಕೆ ನಿಯೋಜಿಸಿದ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇದು ಮಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೌದು, ಗುರುವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಉಳ್ಳಾಲ ಪೊಲೀಸ್‌ ಠಾಣೆಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಳ್ಳಾಲ ಪೊಲೀಸ್‌ ಠಾಣೆಯ ಪಿಎಸ್‌ಐಗೆ ಜೂನ್‌ 24ರಂದು ಕೊರೊನಾ ಸೋಂಕಿರೋದು ಪತ್ತೆಯಾಗಿತ್ತು. ಆಗ ಸಂಪರ್ಕದಲ್ಲಿದ್ದ ಎಎಸ್‌ಐ ಸೇರಿದಂತೆ ಅವರೊಂದಿಗಿದ್ದ ಪೊಲೀಸ್‌ ಸಿಬ್ಬಂದಿಯನ್ನ ಕ್ವಾರಂಟೈನ್‌ […]

ಕ್ವಾರಂಟೈನ್‌ ಆಗಬೇಕಿದ್ದ ಪೊಲೀಸ್‌ ಸಿಬ್ಬಂದಿಗೆ SSLC ಪರೀಕ್ಷೆ ಡ್ಯೂಟಿ, ಜನರಲ್ಲಿ ಆತಂಕ
Follow us on

ಮಂಗಳೂರು: ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನ ಕ್ವಾರಂಟೈನ್‌ ಮಾಡೋದು ಬಿಟ್ಟು SSLC ಪರೀಕ್ಷೆ ಕರ್ತವ್ಯಕ್ಕೆ ನಿಯೋಜಿಸಿದ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇದು ಮಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹೌದು, ಗುರುವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಉಳ್ಳಾಲ ಪೊಲೀಸ್‌ ಠಾಣೆಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಳ್ಳಾಲ ಪೊಲೀಸ್‌ ಠಾಣೆಯ ಪಿಎಸ್‌ಐಗೆ ಜೂನ್‌ 24ರಂದು ಕೊರೊನಾ ಸೋಂಕಿರೋದು ಪತ್ತೆಯಾಗಿತ್ತು. ಆಗ ಸಂಪರ್ಕದಲ್ಲಿದ್ದ ಎಎಸ್‌ಐ ಸೇರಿದಂತೆ ಅವರೊಂದಿಗಿದ್ದ ಪೊಲೀಸ್‌ ಸಿಬ್ಬಂದಿಯನ್ನ ಕ್ವಾರಂಟೈನ್‌ ಮಾಡಬೇಕಾಗಿತ್ತು. ಆದ್ರೆ ಅದರ ಬದಲು ಅವರನ್ನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಡ್ಯೂಟಿಗೆ ನಿಯೋಜಿಸಿದ್ದಾರೆ.

ಆಘಾತಕಾರಿಯಂದ್ರೆ, ಅವರನ್ನ ತಲಪಾಡಿ ಗಡಿಭಾಗದಲ್ಲೂ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. ಸೋಂಕಿತ ಪಿಎಸ್‌ಐ ಜತೆಗೆ ಸಂಪರ್ಕದಲ್ಲಿದ್ದ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆ‌ ಕೂಡಾ ಮಾಡಿಲ್ಲ. ಜತೆಗೆ ಪೊಲೀಸ್‌ ಠಾಣೆಯನ್ನ ಸೀಲ್‌ಡೌನ್‌ ಮಾಡದೆ ಮೇಲಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದು ಕಾನೂನು ಅನುಷ್ಠಾನಗೊಳಿಸಬೇಕಾದವರೇ ಕಾನೂನು ಭಂಗ ಮಾಡಿದರೆ ಹೇಗೆ ಎಂಬ ಆತಂಕಕ್ಕೆ ಕಾರಣವಾಗಿದೆ.