ತಾಯಿಯ ಮೃತದೇಹ ಪಡೆಯಲು ಹಣವಿಲ್ಲದೆ 3 ದಿನದಿಂದ ಮಕ್ಕಳ ಪರದಾಟ, ಮುಂದೇನಾಯ್ತು?

ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ತಾಯಿಯ ಅಂತ್ಯ ಕ್ರಿಯೆಗೂ ದುಡ್ಡಿಲ್ಲದೇ ಮಕ್ಕಳು ಪರದಾಡಿದ್ದು, ಅವರಿಗೆ ಹೆಲ್ಪ್ ಫಾರ್ ನೀಡಿ ಎಂಬ ಸಂಸ್ಥೆ ಸಹಾಯ ಮಾಡುವ ಮೂಲಕ ಪುಣ್ಯ ಕಾರ್ಯ ಮಾಡಿದೆ. ಸದ್ಯ ಮೂರು ದಿನದ ಬಳಿಕ ಮಗ ತಾಯಿಯ ಅಂತ್ಯ ಸಂಸ್ಕಾರವನ್ನು ನಡೆಸಿದ್ದಾನೆ. ಹಣ ಇರದ ಕಾರಣಕ್ಕೆ ತಾಯಿಯ ಅಂತ್ಯ ಕ್ರಿಯೆಗಾಗಿ ಮಕ್ಕಳು ಮೂರು ದಿನ ಕಾದುಕುಳಿತ ಮನಕಲುಕುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಣೇಶಪುರ ಗ್ರಾಮದ ನಿವಾಸಿ ಭಾರತಿ ಬಸ್ತವಾಡಕರ್(50) […]

ತಾಯಿಯ ಮೃತದೇಹ ಪಡೆಯಲು ಹಣವಿಲ್ಲದೆ 3 ದಿನದಿಂದ ಮಕ್ಕಳ ಪರದಾಟ, ಮುಂದೇನಾಯ್ತು?

Updated on: Oct 19, 2020 | 2:34 PM

ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ತಾಯಿಯ ಅಂತ್ಯ ಕ್ರಿಯೆಗೂ ದುಡ್ಡಿಲ್ಲದೇ ಮಕ್ಕಳು ಪರದಾಡಿದ್ದು, ಅವರಿಗೆ ಹೆಲ್ಪ್ ಫಾರ್ ನೀಡಿ ಎಂಬ ಸಂಸ್ಥೆ ಸಹಾಯ ಮಾಡುವ ಮೂಲಕ ಪುಣ್ಯ ಕಾರ್ಯ ಮಾಡಿದೆ. ಸದ್ಯ ಮೂರು ದಿನದ ಬಳಿಕ ಮಗ ತಾಯಿಯ ಅಂತ್ಯ ಸಂಸ್ಕಾರವನ್ನು ನಡೆಸಿದ್ದಾನೆ.

ಹಣ ಇರದ ಕಾರಣಕ್ಕೆ ತಾಯಿಯ ಅಂತ್ಯ ಕ್ರಿಯೆಗಾಗಿ ಮಕ್ಕಳು ಮೂರು ದಿನ ಕಾದುಕುಳಿತ ಮನಕಲುಕುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಣೇಶಪುರ ಗ್ರಾಮದ ನಿವಾಸಿ ಭಾರತಿ ಬಸ್ತವಾಡಕರ್(50) ಚಿಕಿತ್ಸೆ ಫಲಿಸದೇ ಅಕ್ಟೋಬರ್ 16 ರಂದು ಮೃತಪಟ್ಟಿದ್ದರು. ಮೃತ ಭಾರತಿಯ ಇಬ್ಬರು ಗಂಡು ಮಕ್ಕಳು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಲಾಕ್‌ಡೌನ್​ನಿಂದಾಗಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದರು.

ಹೀಗಾಗಿ ತಾಯಿಯ ಮೃತ ದೇಹ ಪಡೆಯಲು ಅವರಿಬ್ಬರ ಬಳಿ ಹಣವಿರಲಿಲ್ಲ. ಹೀಗಾಗಿ ಬಹಳಷ್ಟು ಪರದಾಡಿದ್ದಾರೆ. ಕೊನೆಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಲ್ಪ್ ಫಾರ್ ನೀಡಿ ಎಂಬ ಸಂಸ್ಥೆ ಸಿಬ್ಬಂದಿ ಇವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಮೂರು ದಿನದ ನಂತರ ಮಕ್ಕಳು ಆಸ್ಪತ್ರೆಯ ಶವಾಗಾರದಲ್ಲಿದ್ದ ತಮ್ಮ ತಾಯಿಯ ಮೃತದೇಹವನ್ನು ಪಡೆದು ಸದಾಶಿವನಗರದಲ್ಲಿ ಅಂತ್ಯ ಕ್ರಿಯೆ ನೆರವೇರಿಸಿದ್ದಾರೆ.