‘ಅಧಿಕಾರಿಗಳೇನು ದನ ಕಾಯೋರಾ’ ಎಂದಿದ್ದಕ್ಕೆ ಸಹಾಯಕ ನಿರ್ದೇಶಕ ಶರಣಪ್ಪ ಅಮಾನತು
ಕೊಪ್ಪಳ: ಕೆ.ಡಿ.ಪಿ. ಸಭೆಯಲ್ಲಿ ಅಸಂಬದ್ಧ ಪದ ಬಳಕೆ ಹಿನ್ನೆಲೆಯಲ್ಲಿ ಯಲಬುರ್ಗಾ ತಾಲೂಕು ಕೃಷಿ ಇಲಾಖೆ ಎ.ಡಿ. ಶರಣಪ್ಪ ಗುಂಗಾಡಿಯನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ರಘುನಂದನಮೂರ್ತಿ ಆದೇಶ ನೀಡಿದ್ದಾರೆ. 3 ಗ್ರಾ.ಪಂ.ಗಳ ಆಡಳಿತಾಧಿಕಾರಿಯಾಗಿ ಶರಣಪ್ಪರನ್ನ ನೇಮಕ ಮಾಡಲಾಗಿತ್ತು. ಬಳಿಕ ಕಾರಣ ನೀಡದೆ ಆ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಇದನ್ನು ಕುಕನೂರು ತಾ.ಪಂ. ಸಭೆಯಲ್ಲಿ ಶರಣಪ್ಪ ಪ್ರಶ್ನಿಸಿದ್ರು. ಈ ವೇಳೆ ಸರ್ಕಾರಿ ಅಧಿಕಾರಿಗಳೇನು ದನ ಕಾಯೋರಾ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನೆ ಮಾಡಿದ್ದಾರೆ. ಶರಣಪ್ಪ ಗುಂಗಾಡಿ ಪದ ಬಳಕೆ ಬಗ್ಗೆ ಇ.ಒ […]

ಕೊಪ್ಪಳ: ಕೆ.ಡಿ.ಪಿ. ಸಭೆಯಲ್ಲಿ ಅಸಂಬದ್ಧ ಪದ ಬಳಕೆ ಹಿನ್ನೆಲೆಯಲ್ಲಿ ಯಲಬುರ್ಗಾ ತಾಲೂಕು ಕೃಷಿ ಇಲಾಖೆ ಎ.ಡಿ. ಶರಣಪ್ಪ ಗುಂಗಾಡಿಯನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ರಘುನಂದನಮೂರ್ತಿ ಆದೇಶ ನೀಡಿದ್ದಾರೆ.
3 ಗ್ರಾ.ಪಂ.ಗಳ ಆಡಳಿತಾಧಿಕಾರಿಯಾಗಿ ಶರಣಪ್ಪರನ್ನ ನೇಮಕ ಮಾಡಲಾಗಿತ್ತು. ಬಳಿಕ ಕಾರಣ ನೀಡದೆ ಆ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಇದನ್ನು ಕುಕನೂರು ತಾ.ಪಂ. ಸಭೆಯಲ್ಲಿ ಶರಣಪ್ಪ ಪ್ರಶ್ನಿಸಿದ್ರು. ಈ ವೇಳೆ ಸರ್ಕಾರಿ ಅಧಿಕಾರಿಗಳೇನು ದನ ಕಾಯೋರಾ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನೆ ಮಾಡಿದ್ದಾರೆ.
ಶರಣಪ್ಪ ಗುಂಗಾಡಿ ಪದ ಬಳಕೆ ಬಗ್ಗೆ ಇ.ಒ ವರದಿ ಹಿನ್ನೆಲೆಯಲ್ಲಿ ಶರಣಪ್ಪರನ್ನು ಅಮಾನತು ಮಾಡಿ ಜಿ.ಪಂ. ಸಿಇಒ ಆದೇಶ ನೀಡಿದ್ದಾರೆ. ಶರಣಪ್ಪ ಗುಂಗಾಡಿ ಅಮಾನತಿಗೆ ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಸಸ್ಪೆಂಡ್ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
Published On - 2:35 pm, Mon, 19 October 20




