
ದಾವಣಗೆರೆ:ಲಾಕ್ಡೌನ್ ವೇಳೆ ವಿದೇಶದಲ್ಲಿ ಸಿಲುಕಿದ್ದ ದಾವಣಗೆರೆ ಮೂಲದ ಗಿಡಮೂಲಿಕೆ ಔಷಧಿ ಮಾರಾಟಗಾರರು ಸರ್ಕಾರದ ನೆರವಿನಿಂದ ತವರಿಗೆ ಮರಳುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ 17 ಜನ ಗಿಡಮೂಲಿಕೆ ವ್ಯಾಪಾರಿಗಳು ಪೂರ್ವ ಆಫ್ರಿಕಾದ ಮಡಸ್ಕಾರ್ ನಗರಕ್ಕೆ ಗಿಡಮೂಲಿಕೆ ಔಷಧಿ ಮಾರಾಟಕ್ಕೆ ತೆರಳಿದ್ದರು. ಆ ವೇಳೆ ಕೊರೊನಾ ಸೋಂಕಿನ ಹಾವಳಿಯಿಂದಾಗಿ ಲಾಕ್ಡೌನ್ ಘೋಷಣೆ ಆದ ಬಳಿಕ, ಐದು ತಿಂಗಳಿನಿಂದ ಸ್ವದೇಶಕ್ಕೆ ಮರಳಲು ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ವ್ಯಾಪಾರಿಗಳ ನೆರವಿಗೆ ಬಂದ ರಾಜ್ಯ ಸರ್ಕಾರ ಹಾಗೂ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಅವರ ಶತಪ್ರಯತ್ನದಿಂದಾಗಿ ವ್ಯಾಪಾರಿಗಳು ತವರಿಗೆ ಮರಳುವಂತ್ತಾಗಿದೆ.
ಮಡಗಾಸ್ಕರ್ನಿಂದ ಭಾರತಕ್ಕೆ ಬರಲು ಒಬ್ಬರಿಗೆ 89 ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿತ್ತು, ಆದರೆ ವ್ಯಾಪಾರಿಗಳ ಪರಿಸ್ದಿತಿ ಮನವರಿಕೆ ಮಾಡಿಕೊಟ್ಟ ನಂತರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.ಇಂದು ಮುಂಬಯಿಗೆ ಬಂದ 17 ಜನ ಗಿಡಮೂಲಿಕೆ ಔಷಧಿ ವ್ಯಾಪಾರಿಗಳು. ಎಳು ದಿನ ಹೊಟೆಲ್ನಲ್ಲಿ ಕ್ವಾರಂಟೈನ್ ಆಗಿ ಅವಧಿ ಪೂರ್ಣಗೊಳಿಸಿದ ನಂತರ ಸ್ವಗ್ರಾಮಕ್ಕೆ ತೆರಳಲಿದ್ದಾರೆ.
Published On - 10:32 am, Fri, 21 August 20