ಅಡ್ಡಪಲ್ಲಕ್ಕಿ ಉತ್ಸವ, 50ಕ್ಕೂ ಹೆಚ್ಚು ಗ್ರಾಮಸ್ಥರ ಬಂಧನ
[lazy-load-videos-and-sticky-control id=”YY9HlWSPqUA”] ಕೊಪ್ಪಳ: ನಿರ್ಬಂಧದ ಮಧ್ಯೆಯೂ ಅಡ್ಡಪಲ್ಲಕ್ಕಿ ಉತ್ಸವ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಅವಧೂತ ಶುಕಮಣಿ ಅಡ್ಡಪಲ್ಲಕ್ಕಿ ಉತ್ಸವ ಆಚರಣೆ ಮಾಡಲಾಗಿತ್ತು. ದೇವಸ್ಥಾನದ ಒಳಗೆ ಆಚರಿಸಲು ತಹಶೀಲ್ದಾರ್ ಸೂಚಿಸಿದ್ದರು. ಆದ್ರೆ ದೇಗುಲದ ಬಾಗಿಲು ಮುರಿದು ಹೊರಬಂದ ಉತ್ಸವ. ನಿರ್ಬಂಧ ಇದ್ರೂ ದೇವಸ್ಥಾನದಿಂದ ಅಡ್ಡಪಲ್ಲಕ್ಕಿ ಹೊರತಂದು ಉತ್ಸವ ಆಚರಿಸಿದ್ದಾರೆ. ಅಲ್ಲದೆ ಅಡ್ಡಪಲ್ಲಕ್ಕಿ ಹೊತ್ತು ಏಕಾಏಕಿ ಭಕ್ತರು ಹೊರಬಂದ ಹಿನ್ನೆಲೆಯಲ್ಲಿ ಪೊಲೀಸ್ ವಾಹನಕ್ಕೆ […]
[lazy-load-videos-and-sticky-control id=”YY9HlWSPqUA”]
ಕೊಪ್ಪಳ: ನಿರ್ಬಂಧದ ಮಧ್ಯೆಯೂ ಅಡ್ಡಪಲ್ಲಕ್ಕಿ ಉತ್ಸವ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ನಿನ್ನೆ ತಡರಾತ್ರಿ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಅವಧೂತ ಶುಕಮಣಿ ಅಡ್ಡಪಲ್ಲಕ್ಕಿ ಉತ್ಸವ ಆಚರಣೆ ಮಾಡಲಾಗಿತ್ತು. ದೇವಸ್ಥಾನದ ಒಳಗೆ ಆಚರಿಸಲು ತಹಶೀಲ್ದಾರ್ ಸೂಚಿಸಿದ್ದರು. ಆದ್ರೆ ದೇಗುಲದ ಬಾಗಿಲು ಮುರಿದು ಹೊರಬಂದ ಉತ್ಸವ. ನಿರ್ಬಂಧ ಇದ್ರೂ ದೇವಸ್ಥಾನದಿಂದ ಅಡ್ಡಪಲ್ಲಕ್ಕಿ ಹೊರತಂದು ಉತ್ಸವ ಆಚರಿಸಿದ್ದಾರೆ.
ಅಲ್ಲದೆ ಅಡ್ಡಪಲ್ಲಕ್ಕಿ ಹೊತ್ತು ಏಕಾಏಕಿ ಭಕ್ತರು ಹೊರಬಂದ ಹಿನ್ನೆಲೆಯಲ್ಲಿ ಪೊಲೀಸ್ ವಾಹನಕ್ಕೆ ಅಡ್ಡಪಲ್ಲಕ್ಕಿ ತಗುಲಿ ಗಾಜು ಪುಡಿಪುಡಿಯಾಗಿದೆ. ನಿಷೇಧದ ನಡುವೆ ಉತ್ಸವ ಆಚರಣೆ ಮಾಡಿದ್ದು ಹಾಗೂ ಪೊಲೀಸ್ ವಾಹನ ಜಖಂ ಆದ ಹಿನ್ನೆಲೆಯಲ್ಲಿ ಕುಷ್ಟಗಿ ಕಂದಾಯ ನೀರಿಕ್ಷಕರು ಹಾಗೂ ಕುಷ್ಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಇಂದ ದೂರು ದಾಖಲಿಸಿ ಇಬ್ಬರ ದೂರಿನನ್ವಯ 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
Published On - 11:10 am, Fri, 21 August 20