ಹಿಂದೂ ಧರ್ಮದಲ್ಲಿ ಶನಿ ದೇವನಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಹಿಂದೂ ಪುರಾಣದ ಅತ್ಯಂತ ಪೂಜ್ಯ ದೇವಾನು ದೇವತೆಗಳಲ್ಲಿ ಒಬ್ಬನಾದ ಶನಿ ದೇವರನ್ನು ದೇಶದಲ್ಲಿ ವ್ಯಾಪಕವಾಗಿ ಪೂಜಿಸಲಾಗುತ್ತದೆ. ಸೂರ್ಯ ಮತ್ತು ಛಾಯಾ ಮಗ ಶನಿದೇವ. ಶನಿ ಕರ್ಮ ಮತ್ತು ನ್ಯಾಯದ ದೇವರು ಎಂದು ನಂಬಲಾಗಿದೆ. ಶನಿ ದೇವರು ಪ್ರತಿಯೊಬ್ಬರಿಗೂ ಅವರ ಆಲೋಚನೆಗಳು, ಮಾತು ಮತ್ತು ಕರ್ಮದ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಶನಿ ದೇವರಿಗೆ ಸಾಕಷ್ಟು ದೇವಾಲಯಗಳಿವೆ. ನೀವು ಶನಿ ದೇವರ ದೇವಾಲಯಕ್ಕೆ ಭೇಟಿ ನೀಡಿದಾಗ ಏನೇನು ಮಾಡಬೇಕು? ಏನು ಮಾಡಬಾರದು ? ಎಂಬುವುದೆಲ್ಲದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.