ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನಕ್ಕೆ ಪೋಸ್ಟರ್​ ಅಂಟಿಸಿದ್ದ ಯುವಕರ ವಿರುದ್ಧ FIR

| Updated By: ಆಯೇಷಾ ಬಾನು

Updated on: Feb 26, 2024 | 12:28 PM

ಶೋಭಕ್ಕ ಎಲ್ಲಿದ್ದೀರ?, ಶೋಭಕ್ಕ ಕಾಣೆ ಎಂದು ತರೀಕೆರೆಯಿಂದ ಚಿಕ್ಕಮಗಳೂರುವರೆಗೂ ರಾತ್ರೋರಾತ್ರಿ ಪೋಸ್ಟರ್​​​ಗಳನ್ನು ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬಸವನಹಳ್ಳಿ ಪೊಲೀಸರಿಂದ ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಹಣ ಕೊಟ್ಟು ಪೋಸ್ಟರ್ ಅಂಟಿಸಿ ಎಂದರು ಎಂದು ಯುವಕರು ಹೇಳಿಕೆ ನೀಡಿದ್ದಾರೆ.

ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನಕ್ಕೆ ಪೋಸ್ಟರ್​ ಅಂಟಿಸಿದ್ದ ಯುವಕರ ವಿರುದ್ಧ FIR
ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನಕ್ಕೆ ಪೋಸ್ಟರ್​ ಅಂಟಿಸಿದ್ದ ಯುವಕರ ವಿರುದ್ಧ FIR
Follow us on

ಚಿಕ್ಕಮಗಳೂರು, ಫೆ.26: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವರ್ಸಸ್ ಮಾಜಿ ಶಾಸಕ ಸಿ.ಟಿ ರವಿ (CT Ravi) ನಡುವೆ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್ ಫೈಟ್ ಜೋರಾಗಿದೆ. ಗೋ ಬ್ಯಾಕ್, ಶೋಭಾ ಹಾಠಾವೋ ಎಂದು ಸಿ,ಟಿ.ರವಿ ಬೆಂಬಲಿಗರು ಅಭಿಯಾನ ನಡೆಸಿದ್ದಾರೆ. ಸದ್ಯ ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್​ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ.

ಕಳೆದ ಜನವರಿ 01ರಿಂದ ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದಂಗಲ್ ಆರಂಭ ಮಾಡಿದ್ದಾರೆ. ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ ,ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ ನಡೆಯುತ್ತಿದೆ. ಟಿಕೆಟ್ ನೀಡದಂತೆ ಕ್ಯಾಂಪೇನ್ ನಡೆಸಲಾಗಿದೆ. ಇದು ಬಿಜೆಪಿ ಹೈ ಕಮಾಂಡ್ ಕೋಪಕ್ಕೂ ಕಾರಣವಾಗಿದೆ. ಇದೆಲ್ಲದರ ನಡುವೆ ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್​ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ. ಬಸವನಹಳ್ಳಿ ಪೊಲೀಸರಿಂದ ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ತುಮಕೂರು: ಗೃಹ ಸಚಿವರ ಮನೆಯೊಳಗೆ ನುಗ್ಗಿ ಕದ್ದು ಹಾಲು ಕುಡಿದ ಕೋತಿ

ಶೋಭಕ್ಕ ಎಲ್ಲಿದ್ದೀರ?, ಶೋಭಕ್ಕ ಕಾಣೆ ಎಂದು ತರೀಕೆರೆಯಿಂದ ಚಿಕ್ಕಮಗಳೂರುವರೆಗೂ ರಾತ್ರೋರಾತ್ರಿ ಪೋಸ್ಟರ್​​​ಗಳನ್ನು ಅಂಟಿಸಿದ್ದ ನಾಲ್ವರು ಯುವಕರಾದ ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಯುವಕರು ತರೀಕೆರೆ ಮೂಲದವರು. ತರೀಕೆರೆ ಪಟ್ಟಣದಿಂದ ಚಿಕ್ಕಮಗಳೂರು ನಗರದ ವರೆಗೂ ಪೋಸ್ಟರ್ ಅಂಟಿಸಿದ್ದರು. ನಗರ ಸಭೆ ಪೌರ ಕಾರ್ಮಿಕ ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಾಗಿದೆ. ಇನ್ನು ಯುವಕರು ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ರು ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಸವನಹಳ್ಳಿ ಪೊಲೀಸರು ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಗೋ ಬ್ಯಾಕ್ ಅಭಿಯಾನಕ್ಕೆ ಶೋಭಾ ಕರಂದ್ಲಾಜೆ ಗರಂ

ಕಳೆದ ಚುನಾವಣೆಯಲ್ಲಿ ಗೋ ಬ್ಯಾಕ್ ಅಭಿಯಾನ ಮಾಡಿದ್ರು. ಇವತ್ತು ಅದನ್ನೇ ಮಾಡಲು ಹೊರಟಿದ್ದಾರೆ. ಕೆಲವರು ದುಡ್ಡಿನ ಮದದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ. ಕೆಲವು ಗಂಡಸರಿಗೆ ಅಧಿಕಾರ ನಮ್ಮ ಬಳಿಯೇ ಇರಬೇಕು ಎಂಬ ಭಾವನೆ ಇರುತ್ತೆ. ದರ್ಪದಿಂದ ಇಂತಹ ಕೆಲಸವನ್ನ ಮಾಡಿಸುತ್ತಿದ್ದಾರೆ. ನಾನು ಯಡಿಯೂರಪ್ಪ, ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇದಕ್ಕೆಲ್ಲ ಉತ್ತರ ನಾನು ಕೊಡಲ್ಲ, ನಮ್ಮ ಹೈ ಕಮಾಂಡ್ ಕೊಡುತ್ತೆ ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

ಎಲ್ಲವನ್ನೂ ಹೈ ಕಮಾಂಡ್ ಗಮನಿಸಿದೆ. ಸರಿಯಾದ ಉತ್ತರ ನನ್ನ ಹಿರಿಯರು ಕೊಡುತ್ತಾರೆ. ನನ್ನ ಹಿರಿಯರು ನನ್ನ ಪರವಾಗಿ ಉತ್ತರ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಪತ್ರ ಯಾರು ಬರೆದು ಯಾರು ಪೋಸ್ಟ್ ಮಡಿದ್ರು ಎಲ್ಲವೂ ಗೊತ್ತಿದೆ. ಕೇಂದ್ರ ಎಲ್ಲವನ್ನೂ ವರದಿ ತರಿಸಿಕೊಂಡಿದೆ. ಇದಕ್ಕೆ ಉತ್ತರ ಕೊಡುತ್ತಾರೆ. ಚುನಾವಣೆಯಲ್ಲಿ ಇಂತಹ ಕೆಲಸಗಳು ನಡೆದಾಗ ಕೇಂದ್ರ ವರದಿಯನ್ನ ತರಿಸಿಕೊಳ್ಳುತ್ತೆ. ಸತ್ಯ ಕೇಂದ್ರಕ್ಕೆ ತಲುಪಿದೆ. ಉತ್ತರ ಅವರೆ ಕೊಡುತ್ತಾರೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:59 am, Mon, 26 February 24