WITT TV9 Global Summit 2024: ಟಾಪ್ ಹಂತದಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚದಿದ್ದರೆ ಅದು ಇಕಾನಮಿಗೆ ದುಬಾರಿಯಾಗಲಿದೆ: ವಿನೀತಾ ಸಿಂಗ್

WITT TV9 Global Summit 2024: ಟಾಪ್ ಹಂತದಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚದಿದ್ದರೆ ಅದು ಇಕಾನಮಿಗೆ ದುಬಾರಿಯಾಗಲಿದೆ: ವಿನೀತಾ ಸಿಂಗ್

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 28, 2024 | 6:40 PM

WITT TV9 Global Summit 2024: ನಮ್ಮ ದೇಶದ ಸಂಸ್ಥೆಗಳಲ್ಲಿ ಕೆಳಹಂತದ ವರ್ಕ್ ಫೋರ್ಸ್ ನಲ್ಲಿ ಶೇಕಡ 30 ರಿಂದ 33 ರಷ್ಟು ಮಹಿಳಾ ಪಾಲುದಾರಿಕೆ ಇದೆ, ಆದರೆ ಟಾಪ್ ಹಂತದಲ್ಲಿ ಅಂದರೆ ನಿರ್ಣಯಗಳನ್ನು ತೆಗೆದುಕೊಳ್ಳುವ ಬೋರ್ಡ್ ರೂಮ್ ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇಕಡಾ 5ರಷ್ಟು ಮಾತ್ರ ಇದೆ ಎಂದ ವಿನಿತಾ ಸಿಂಗ್, ಈ ತಾರತಮ್ಯ ಕೊನೆಗೊಳ್ಳದಿದ್ದರೆ ಅದು ಅರ್ಥಿಕ ವ್ಯವಸ್ಥೆಗೆ ದುಬಾರಿಯಾಗಿ ಪರಿಣಮಿಸಲಿದೆ ಅನ್ನುತ್ತಾರೆ.

ದೆಹಲಿ: ಶುಗರ್ ಕಾಸ್ಮೆಟಿಕ್ಸ್ ಸಂಸ್ಥೆಯ ಒಡತಿ ಮತ್ತು ಸಿಇಒ ವಿನೀತಾ ಸಿಂಗ್ (Vinita Singh) ಟಿವಿ9 ನೆಟ್ವರ್ಕ್ ರಾಷ್ಟ್ರದ ರಾಜಧಾನಿಯಲ್ಲಿ ಆಯೋಜಿಸಿರುವ 3-ದಿನಗಳ ವ್ಹಾಟ್ ಇಂಡಿಯ ಥಿಂಕ್ಸ್ ಟುಡೇ (What India Thinks Today) ಜಾಗತಿಕ ಶೃಂಗಸಭೆಯ (Global Summit) ಎರಡನೇ ದಿನವಾದ ಇಂದು ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಪಾಲದಾರಿಕೆ ವಿಷಯದ ಮೇಲೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮೊದಲಿಗೆ ನವ್ಯೋದ್ಯಮ ಕ್ಷೇತ್ರದ ಬಗ್ಗೆ ಮಾತಾಡಿದ ವಿನಿತಾ, ಭಾರತದಲ್ಲಿ ಶೇಕಡ 99 ರಷ್ಟು ಸ್ಟಾರ್ಟ್ ಅಪ್ ಕಂಪನಿಗಳು ವಿಫಲವಾಗುತ್ತಿವೆ, ಕಾರ್ಯ ನಿರ್ವಹಣೆ ಆರಂಭವಾದ ಕೇವಲ 2 ವರ್ಷಗಳ ಅವಧಿಯಲ್ಲಿ ಅವು ಮುಚ್ಚುವ ಸ್ಥಿತಿ ನಿರ್ಮಣವಾಗಿದೆ ಎಂದು ಹೇಳಿದರು. ಕಾರ್ಪೋರೇಟ್ ಜಗತ್ತಿನ ಸಿಎಕ್ಸ್ ಒ ಮತ್ತು ಬೋರ್ಡ್ ಗಳಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದ್ದರೆ ಆ ನಿರ್ದಿಷ್ಟ ಸಂಸ್ಥೆಗಳು ಹೆಚ್ಚು ಲಾಭ ಗಳಿಸಿವೆ ಎಂದು ಡಾಟಾ ಹೇಳುತ್ತದೆ.

ನಮ್ಮ ದೇಶದ ಸಂಸ್ಥೆಗಳಲ್ಲಿ ಕೆಳಹಂತದ ವರ್ಕ್ ಫೋರ್ಸ್ ನಲ್ಲಿ ಶೇಕಡ 30 ರಿಂದ 33 ರಷ್ಟು ಮಹಿಳಾ ಪಾಲುದಾರಿಕೆ ಇದೆ, ಆದರೆ ಟಾಪ್ ಹಂತದಲ್ಲಿ ಅಂದರೆ ನಿರ್ಣಯಗಳನ್ನು ತೆಗೆದುಕೊಳ್ಳುವ ಬೋರ್ಡ್ ರೂಮ್ ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇಕಡಾ 5ರಷ್ಟು ಮಾತ್ರ ಇದೆ ಎಂದ ವಿನಿತಾ ಸಿಂಗ್, ಈ ತಾರತಮ್ಯ ಕೊನೆಗೊಳ್ಳದಿದ್ದರೆ ಅದು ಅರ್ಥಿಕ ವ್ಯವಸ್ಥೆಗೆ ದುಬಾರಿಯಾಗಿ ಪರಿಣಮಿಸಲಿದೆ ಅನ್ನುತ್ತಾರೆ. ತಮ್ಮ ಶುಗರ್ ಸಂಸ್ಥೆಯ ವರ್ಕ್ ಫೋರ್ಸ್ 4,000 ರಷ್ಟಿದ್ದು ಅದರಲ್ಲಿ 3,000 ಉದ್ಯೋಗಿಗಳು ಮಹಿಳೆಯರಾಗಿದ್ದಾರೆ ಅಂದರೆ ಶೇಕಡಾ 75 ರಷ್ಟು ಮಹಿಳೆಯರು ತಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಉದ್ಯಮಶೀಲ ಮತ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳಬಯಸುವ ಮಹಿಳೆಯರಿಗೆ ಸಂದೇಶವೊಂದನ್ನು ನೀಡಿದ ಅವರು, ಉದ್ಯಮ ಮತ್ತು ವ್ಯಾಪಾರಕ್ಕೆ ಅತ್ಯಂತ ಯೋಗ್ಯ ಮತ್ತು ಸೂಕ್ತವಾದ ದಶಕದಲ್ಲಿ ನಾವಿದ್ದೇವೆ, ಭಾರತದ ಎಕಾನಮಿ ಅರೊಗ್ಯಕರ ಸ್ಥಿತಿಯಲ್ಲಿದೆ, ನಮ್ಮ ದೇಶದಲ್ಲಿ ಶೇಕಡ 50 ರಷ್ಟು ವ್ಯವಹಾರ ಡಿಜಿಟಲ್ ಪಾವತಿಗಳ ಮೂಲಕ ನಡೆಯುತ್ತಿದೆ, 800 ಮಿಲಿಯನ್ ಜನ ಇಂಟರ್ನೆಟ್ ಬಳಸುತ್ತಾರೆ ಹಾಗಾಗಿ ಮಹಿಳೆಯರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಭಾರತವೇ ಸರಿಯಾದ ಸ್ಥಳ, ಮತ್ತು ಸರಿಯಾದ ಮಾರ್ಕೆಟ್ ಆಗಿದ್ದು ಈಗಲೇ ಸರಿಯಾದ ಸಮಯ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 26, 2024 05:43 PM