ರಾಯಚೂರು: ದೇಶಾದ್ಯಂತ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದ್ರೆ ಕೆಲವೊಂದು ಕಡೆ ಕೊರೊನಾ ಭೀತಿಯಿಂದ ದೇವಾಲಯಗಳನ್ನು ಓಪನ್ ಮಾಡಿಲ್ಲ. ಆಂಧ್ರದ ಕರ್ನೂಲ್ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳಿದ್ರೆ ಕ್ವಾರಂಟೈನ್ ಫಿಕ್ಸ್ ಆಗಲಿದೆ.
ಆಂಧ್ರಕ್ಕೆ ತೆರಳಿ ಅಂತಾರಾಜ್ಯ ಪ್ರವಾಸ ಮಾಡಿ ರಾಯರ ದರ್ಶನ ಮಾಡಿದ್ರೆ ಹೋಮ್ ಕ್ವಾರಂಟೈನ್ ಫಿಕ್ಸ್ ಆಗಲಿದೆ. ಹೀಗಾಗಿ ರಾಯರ ಭಕ್ತರಿಗೆ ಕ್ವಾರಂಟೈನ್ ಭೀತಿ ಕಾಡುತ್ತಿದೆ. ರಾಯಚೂರ ಜಿಲ್ಲಾಡಳಿತ ಈಗಾಗಲೇ ಮಂತ್ರಾಲಯಕ್ಕೆ ತೆರಳಿ ವಾಪಸಾದವರಿಗೆ ಹೋಮ್ ಕ್ವಾರಂಟೈನ್ ಮಾಡಿದೆ. ಈ ನಡುವೆ ಮಂತ್ರಾಲಯದ ಶ್ರೀಮಠವನ್ನು ಇನ್ನೂ ಓಪನ್ ಮಾಡಲಾಗಿಲ್ಲ.
ಆಂಧ್ರ ಸರ್ಕಾರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಇನ್ನೂ ಅಧಿಕೃತವಾಗಿ ಅನುಮತಿ ನೀಡಿಲ್ಲ. ಹೀಗಾಗಿ ಸದ್ಯಕ್ಕೆ ಕರ್ನಾಟಕದ ಯಾವುದೇ ಭಕ್ತರು ಮಂತ್ರಾಲಯಕ್ಕೆ ತೆರಳಿದ್ರೆ ಹೋಮ್ ಕ್ವಾರಂಟೈನ್ ಆಗಬೇಕಾಗುತ್ತೆ.
Published On - 9:10 am, Tue, 9 June 20