ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಅಮವಾಸ್ಯೆ ತಿಥಿ, ಶನಿವಾರ, ಮಾರ್ಚ್ 13, 2021. ಪೂರ್ವಾಭಾದ್ರೆ ನಕ್ಷತ್ರ, ರಾಹುಕಾಲ : ಇಂದು ಬೆಳಿಗ್ಗೆ 9.25 ರಿಂದ ಇಂದು ಬೆಳಿಗ್ಗೆ 10.55ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.25 ನಿಮಿಷ. ಸೂರ್ಯಾಸ್ತ: ಸಂಜೆ 6.25 ನಿಮಿಷ.
ತಾ.13-03-2021 ರ ಶನಿವಾರದ, ರಾಶಿಭವಿಷ್ಯ
ಮೇಷ: ಸವಾಲುಗಳನ್ನು ಹೊಸ ರೀತಿಯಲ್ಲಿ ಎದುರಿಸಲು ಸಜ್ಜಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾತ್ಮಕತೆಯಿಂದ ಎಲ್ಲರ ಮನಗೆಲ್ಲಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಚಿಂತೆ ಬೇಡ. ಶುಭಸಂಖ್ಯೆ 6
ವೃಷಭ: ಇನ್ನೊಬ್ಬರನ್ನು ಮೆಚ್ಚಿಸಲು ನಿಮ್ಮತನವನ್ನು ಮರೆಯಬೇಕಿಲ್ಲ. ಮನಸ್ಸಿಗೆ ಹಿಡಿಸಿದ ಕೆಲಸ ಮಾಡಲಿದ್ದೀರಿ. ಸರಕಾರಿ ನೌಕರರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಅತಿಯಾದ ವಿಶ್ವಾಸವೂ ವಂಚನೆಗೆ ಕಾರಣವಾದೀತು, ಎಚ್ಚರ. ಶುಭಸಂಖ್ಯೆ 8
ಮಿಥುನ:
ಬಹುದಿನಗಳಿಂದ ಕುಟುಂಬ ಸದಸ್ಯರು ಮಾಡುತ್ತಿದ್ದ ಬೇಡಿಕೆ ಪೂರ್ತಿ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಿಲ್ಲದಿದ್ದರೂ ನಷ್ಟವಾಗದು. ಶುಭಸಂಖ್ಯೆ 1
ಕಟಕ:
ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು. ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಶುಭಸಂಖ್ಯೆ 9
ಸಿಂಹ:
ಅನಿವಾರ್ಯ ಸಂದರ್ಭಗಳಲ್ಲಿ ಕೆಲವೊಂದು ಹೊಂದಾಣಿಕೆ ಮಾಡುವುದು ಅನಿವಾರ್ಯವೆನಿಸಲಿದೆ. ಇಷ್ಟ ಮಿತ್ರರ ಭೇಟಿಯಾಗಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಚಿಂತೆ ಬೇಡ. ಶುಭಸಂಖ್ಯೆ 2
ಕನ್ಯಾ:
ಉದ್ಯೋಗ ನಿಮಿತ್ತ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ದೇವತಾ ಪ್ರಾರ್ಥನೆ ಮಾಡಿ. ಶುಭಸಂಖ್ಯೆ 7
ತುಲಾ:
ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಗುರಿಯಾದೀತು. ಹಾಗಿದ್ದರೂ ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವ ಪ್ರಯತ್ನ ಬೇಡ. ಸ್ವಯಂ ವ್ಯಾಪಾರಿಗಳಿಗೆ ಶತ್ರುಬಾಧೆ ಕಂಡುಬಂದೀತು. ತಾಳ್ಮೆಯಿರಲಿ. ಶುಭಸಂಖ್ಯೆ 4
ವೃಶ್ಚಿಕ:
ಇಷ್ಟಮಿತ್ರರೊಂದಿಗೆ ಸದ್ಯದಲ್ಲೇ ಪ್ರವಾಸ ಕೈಗೊಳ್ಳುವ ಯೋಗ ಕೂಡಿಬರಲಿದೆ. ಸಂಗಾತಿಯ ಬಹುದಿನಗಳ ಬೇಡಿಕೆ ಪೂರೈಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ಪೂರ್ತಿಯಾಗಲಿವೆ. ಕಿರು ಓಡಾಟ ನಡೆಸಲಿದ್ದೀರಿ. ಶುಭಸಂಖ್ಯೆ 6
ಧನು:
ವೃತ್ತಿರಂಗದಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವೊಂದು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಾಲಗಾರರ ಚಿಂತೆ ಕಾಡಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬಂದೀತು. ಅನಿರೀಕ್ಷಿತವಾಗಿ ಹಳೆಯ ಸಂಬಂಧಿಕರನ್ನು ಭೇಟಿ ಮಾಡಲಿದ್ದೀರಿ. ಶುಭಸಂಖ್ಯೆ 3
ಮಕರ:
ಯಾವುದೇ ವಿಚಾರ ಅಥವಾ ವ್ಯಕ್ತಿಗಳನ್ನು ಮನಸ್ಸಿಗೆ ಅತಿಯಾಗಿ ಹಚ್ಚಿಕೊಂಡು ಕೊರಗುವುದು ಬೇಡ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ ಸಂಪಾದಿಸುವ ಯೋಗ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ. ಶುಭಸಂಖ್ಯೆ 8
ಕುಂಭ:
ವೃತ್ತಿರಂಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ನಿರಾಸೆಯಾದೀತು. ಆದರೆ ಭರವಸೆ ಕಳೆದುಕೊಳ್ಳಬೇಡಿ. ದಾಯಾದಿ ಕಲಹಗಳಿಗೆ ಹಿರಿಯರಿಂದ ಪರಿಹಾರ ಸಿಗಲಿದೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಶುಭಸಂಖ್ಯೆ 4
ಮೀನ:
ಕೆಲವೊಂದು ವಿಚಾರಗಳಲ್ಲಿ ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಮನೆಗೆ ಬಂಧು ಮಿತ್ರರ ಆಗಮನವಾಗಲಿದ್ದು, ಖರ್ಚು ವೆಚ್ಚಗಳಾದೀತು. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ. ಶುಭಸಂಖ್ಯೆ 5
Published On - 7:13 am, Sat, 13 March 21