ಕಾಲೇಜು ಬಳಿ ಬಸ್ ನಿಲ್ಲಿಸುತ್ತಿಲ್ಲವೆಂದು ಚಲಿಸುತ್ತಿದ್ದ ಬಸ್​​ನಿಂದ ಜಿಗಿದ ಹಾಸ್ಟೆಲ್​ ವಿದ್ಯಾರ್ಥಿನಿ ಸಾವು

|

Updated on: Apr 13, 2023 | 3:27 PM

ಹೂವಿನಹಡಗಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಸ್ಟಾಪ್​ ಬಳಿ ಬಸ್ ನಿಲ್ಲಿಸುತ್ತಿಲ್ಲವೆಂದು ಸರ್ಕಾರಿ ಬಸ್ ನಿಂದ ಜಿಗಿದು ಆಕ್ರೋಶ ವ್ಯಕ್ತಪಡಿಸಿದ್ದಳು. ಆದರೆ ಆ ವಿದ್ಯಾರ್ಥಿನಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ.

ಕಾಲೇಜು ಬಳಿ ಬಸ್ ನಿಲ್ಲಿಸುತ್ತಿಲ್ಲವೆಂದು ಚಲಿಸುತ್ತಿದ್ದ ಬಸ್​​ನಿಂದ ಜಿಗಿದ ಹಾಸ್ಟೆಲ್​ ವಿದ್ಯಾರ್ಥಿನಿ ಸಾವು
ಬಸ್ ನಿಂದ ಜಿಗಿದಿದ್ದ ವಿದ್ಯಾರ್ಥಿನಿ ಸಾವು
Follow us on

ವಿಜಯನಗರ: ಇತ್ತ ರಾಜಕಾರಣಿಗಳು ಪ್ರಸ್ತುತ ಅಸೆಂಬ್ಲಿ ಚುನಾವಣೆಯಲ್ಲಿ ನಿರತವಾಗಿರುವಾಗ ಅತ್ತ ನೂತನ ಜಿಲ್ಲೆ ವಿಜಯನಗರದ ಹೂವಿನಹಡಗಲಿಯಲ್ಲಿ (Huvinahadagali) ಹಾಸ್ಟೆಲ್​ ವಿದ್ಯಾರ್ಥಿನಿಯೊಬ್ಬಳು (Hostel Girl) ಕಾಲೇಜು ನಿಲ್ದಾಣದ ಬಳಿ ಬಸ್ ನಿಲ್ಲಿಸುತ್ತಿಲ್ಲವೆಂದು ಸರ್ಕಾರಿ ಸಾರಿಗೆ ಬಸ್ ನಿಂದ ಜಿಗಿದಿದ್ದಳು. ಆದರೆ ಆ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ (Death).

ಏನಾಯಿತು, ಘಟನೆ ಹೇಗಾಯಿತು?: 

ಶ್ವೇತಾ ಹಡಗಲಿಯಿಂದ ಇಂಜಿನಿಯರಿಂಗ್ ಕಾಲೇಜು ಬಸ್ ಸ್ಟಾಪ್ ವರೆಗೂ ಟಿಕೆಟ್ ಪಡೆದಿದ್ದಳು. ಆದ್ರೆ ಕಾಲೇಜು ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸದ ಪರಿಣಾಮ ಧಾವಂತಗೊಂಡ ವಿದ್ಯಾರ್ಥಿನಿ ಕಾಲೇಜು ಸ್ಟಾಪ್ ಬಳಿ ಇಳಿಯಲು ಮುಂದಾಗಿದ್ದಾಳೆ‌. ಬಸ್ ನಿಲ್ದಾಣದ ಬಳಿ ಬಸ್​​ ನಿಂದ ಆತುರಾತುರವಾಗಿ ಇಳಿಯಲು ಹೋಗಿ ಬಸ್ ನಿಂದ ಜಿಗಿದಿದ್ದಾಳೆ‌. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶ್ವೇತಾಳನ್ನ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ, ತೀವ್ರವಾಗಿ ಗಾಯಗೊಂಡಿದ್ದ ಶ್ವೇತಾ ಸಾವನ್ನಪ್ಪಿದ್ದಾಳೆ. ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟಲ್ ನಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು.

ಇದನ್ನೂ ಓದಿ:

ಹೆತ್ತವರಿಗೇ ಶಾಕ್! 7 ಹೆಜ್ಜೆ ಹಾಕಿ ಮದುವೆಯಾಗಿದ್ದ ದುಷ್ಟ 7 ತಿಂಗಳು ಮುಗಿಯುವಷ್ಟರಲ್ಲೆ ಪತ್ನಿಯ ಜೀವಕ್ಕೆ ಕೊಳ್ಳಿಯಿಟ್ಟ

ಬಸ್ ನಿಲ್ದಾಣ ಬಳಿ ಬಸ್ ನಿಲ್ಲಿಸಿದ ಪರಿಣಾಮ ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ದೂರು ದಾಖಲಾಗಿಸಲಾಗಿದ್ದು, ಸಾರಿಗೆ ಬಸ್ ಅನ್ನು ಹಡಗಲಿ ಪೊಲೀಸರು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿದ್ಯಾರ್ಥಿನಿ ಸಾವಿನಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಡಗಲಿ ಪೊಲೀಸರು ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಮನವೊಲಿಸಲು ಯತ್ನ ನಡೆಸಿದ್ದಾರೆ. ಘಟನೆಯ ನಂತರ ಪೊಲೀಸರು ಸಾರಿಗೆ ಬಸ್ ವಶಕ್ಕೆ ಪಡೆದಿದ್ದಾರೆ. ಹೂವಿನಹಡಗಲಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:04 pm, Thu, 13 April 23