ಹೆತ್ತವರಿಗೇ ಶಾಕ್! 7 ಹೆಜ್ಜೆ ಹಾಕಿ ಮದುವೆಯಾಗಿದ್ದ ದುಷ್ಟ 7 ತಿಂಗಳು ಮುಗಿಯುವಷ್ಟರಲ್ಲೆ ಪತ್ನಿಯ ಜೀವಕ್ಕೆ ಕೊಳ್ಳಿಯಿಟ್ಟ

ಮೃತ ಜುನಿಲಾ ಗಂಡ-ಅತ್ತೆ-ಮಾವ ಜೊತೆಯಲ್ಲೆ ವಾಸ ಮಾಡ್ತಿದ್ದರು. ಮೊನ್ನೆ ನಡೆದ ಗಲಾಟೆಯಲ್ಲಿ ರಕ್ತ ಕಾಣಿಸುತ್ತಿದ್ದಂತೆ ಮನೆಯಲ್ಲಿದ್ದ ಸ್ಯಾಂ ತಂದೆ ತಾಯಿ ಸೊಸೆಯ ರಕ್ಷಣೆಗೆ ಧಾವಿಸಿದ್ದಾರೆ. ಜಗಳ ಬಿಡಿಸಲು ಬಂದ ಕಾರಣ ಸುಪುತ್ರ ಸ್ಯಾಂ ತನ್ನ ತಂದೆ ತಾಯಿ ಮೇಲೆಯೂ ಹಲ್ಲೆ ಮಾಡಿದ್ದಾನೆ.

ಹೆತ್ತವರಿಗೇ ಶಾಕ್! 7 ಹೆಜ್ಜೆ ಹಾಕಿ ಮದುವೆಯಾಗಿದ್ದ ದುಷ್ಟ 7 ತಿಂಗಳು ಮುಗಿಯುವಷ್ಟರಲ್ಲೆ ಪತ್ನಿಯ ಜೀವಕ್ಕೆ ಕೊಳ್ಳಿಯಿಟ್ಟ
ಏಳು ತಿಂಗಳು ಮುಗಿಯುವಷ್ಟರಲ್ಲೆ ಪತ್ನಿಯ ಜೀವಕ್ಕೆ ಕೊಳ್ಳಿಯಿಟ್ಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 13, 2023 | 9:57 AM

ಅವರಿಬ್ಬರೂ ಮೊದಲ ನೋಟದಲ್ಲೆ ಮನಸೋತಿದ್ದರು. ಜೋಡಿಯನ್ನ ನೋಡಿದವರು ಸಹ ಮೇಡ್ ಫಾರ್ ಈಚ್ ಅದರ್ ಅಂತಲೆ ಅಂದಿದ್ರು. ಹೀಗಾಗೆ ಏಳು ತಿಂಗಳಿಂದೆ ತಮಿಳುನಾಡಿನ ಕನ್ಯಾಕುಮಾರಿಯ ಆ ಕನ್ಯೆಯನ್ನ ಸಿಲಿಕಾನ್ ಸಿಟಿಗೆ ಕೊಟ್ಟು ಮದುವೆ ಮಾಡಿದ್ದು ನೂರು ಕಾಲ ಸುಖವಾಗಿ ಬಾಳ್ತಾಳೆ ಅಂತಲೆ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಮದುವೆಯಾಗಿ ಏಳು ತಿಂಗಳು ಮುಗಿಯುವಷ್ಟರಲ್ಲೆ ಏಳು ಹೆಜ್ಜೆ ಹಾಕಿದ್ದ ಪತಿರಾಯ (Husband) ಆಕೆಯ (Wife) ಜೀವಕ್ಕೆ ಕೊಳ್ಳಿಯಿಟ್ಟುಬಿಟ್ಟಿದ್ದಾನೆ (Wife). ಯಾವಾಗಲೂ ಶಾಂತವಾಗಿರುವ ನಗರ ಎಲ್ಲರೂ ತಾವಾಯಿತು ತಮ್ಮ ಕೆಲಸವಾಯಿತು ಅಂತಿದ್ದು ಈ ಮನೆಯವರು ಸಹ ಅದೇ ರೀತಿ ಇದ್ರು. ಆದ್ರೆ ಇದೇ ಮನೆಯಲ್ಲೆ ಮಂಗಳವಾರ ರಾತ್ರಿ ಮಾತ್ರ ಘನಘೋರ ನಡೆದು ಹೋಗಿದ್ದು ಶಾಂತವಾಗಿದ್ದ ಮನೆಯ ಒಳಗಡೆ ನೆತ್ತರು ಹರಿದಿದೆ. ಏನಾಗ್ತಿದೆ ಅಂತ ನೋಡುವಷ್ಟರಲ್ಲೆ ಮಡದಿ ಮಸಣ ಸೇರಿದ್ದು ಹೆತ್ತ ಮಗನ ದುಷ್ಕ್ರತ್ಯ ಕಂಡು ಹೆತ್ತ ಪೋಷಕರು ಸಹ ಒಂದು ಕ್ಷಣ ಬೆಚ್ಚಿಬಿದ್ದಿದ್ದು ಮನೆ ಮಗಳಂತಿರಬೇಕಾದ ಸೊಸೆ ಜೀವತೆತ್ತಿದ್ದಾಳೆ (Family Dispute).

ಅಂದಹಾಗೆ ಈ ರೀತಿ ನೆತ್ತರು ಸುರಿದು ಭೀಕರವಾಗಿ ಗಂಡನ ಕೈಯಿಂದಲೆ ಕೊಲೆಯಾಗಿರುವ ಆ ನತದೃಷ್ಟ ನವವಿವಾಹಿತೆಯೆ ಹೆಸರು ಜನಿಲಾ ಜೂಬಿಯ. ಮೂಲತಃ ತಮಿಳುನಾಡಿನ ಕನ್ಯಾಕುಮಾರಿಯವಳಾದ ಈಕೆ 7 ತಿಂಗಳಿಂದಷ್ಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ (Doddaballapur) ಶ್ರೀನಗರ ನಿವಾಸಿ ಸ್ಯಾಮ್ ಜೊತೆ ಹಿರಿಯರು ಒಪ್ಪಿ ಮದುವೆ ಮಾಡಿಸಿಕೊಟ್ಟಿದ್ರು. ಜತೆಗೆ ಮೊದಲ ನೋಟದಲ್ಲೆ ಇಬ್ಬರು ಸಹ ಮನಸೋತಿದ್ದು, ಇಬ್ಬರೂ ಒಂದಾಗಿ ನೂರು ಕಾಲ ಸುಖಸಂಸಾರ ನಡೆಸುವ ಕನಸು ಕಂಡಿದ್ದರು. ಜನಿಲಾ ಸಹ ಕನ್ಯಾಕುಮಾರಿಯಿಂದ ದೊಡ್ಡಬಳ್ಳಾಪುರಕ್ಕೆ ಆಗಮಿಸಿ ಗಂಡನ ಮನೆಯಲ್ಲೆ ವಾಸ ಮಾಡ್ತಿದ್ದರು.

ಇನ್ನು ಗಂಡ-ಅತ್ತೆ-ಮಾವ ಜೊತೆಯಲ್ಲೆ ವಾಸ ಮಾಡ್ತಿದ್ದ ಜುನಿಲಾ ಮತ್ತು ಸ್ಯಾಮ್ ನಡುವೆ ಮದುವೆಯಾದಾಗಲಿಂದಲೂ ಸಣ್ಣಾಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿದ್ದು ರಾತ್ರಿ ಸಹ ಗಲಾಟೆ ನಡೆದಿದೆ. ಹೀಗಾಗಿ ಗಂಡ ಹೆಂಡತಿ ಜಗಳ ಮಾಮೂಲಿ ಅಂದುಕೊಂಡಿದ್ದ ಕುಟುಂಬಸ್ಥರಿಗೆ ಮನೆಯಲ್ಲಿ ಹರಿದ ರಕ್ತವನ್ನ ಕಂಡು ಬೆಚ್ಚಿ ಬಿದ್ದಿದ್ದು ಗಂಡ ಸ್ಯಾಂ ನವವಿವಾಹಿತ ಪತ್ನಿಗೆ ಚಾಕುವಿನಿಂದ ಹಿರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಗಲಾಟೆಯಲ್ಲಿ ರಕ್ತ ಕಾಣಿಸುತ್ತಿದ್ದಂತೆ ಮನೆಯಲ್ಲಿದ್ದ ಸ್ಯಾಂ ತಂದೆ ತಾಯಿ ಸೊಸೆಯ ರಕ್ಷಣೆಗೆ ಧಾವಿಸಿದ್ದಾರೆ. ಜಗಳ ಬಿಡಿಸಲು ಹೋದ ಕಾರಣ ಸುಪುತ್ರ ಸ್ಯಾಂ ತನ್ನ ತಂದೆ ಮತ್ತು ತಾಯಿ ಮೇಲೆಯೂ ಹಲ್ಲೆ ಮಾಡಿದ್ದಾನೆ. ಹೀಗಾಗಿ ತಂದೆಯ ಕೈಗೂ ರಕ್ತದ ಗಾಯವಾಗಿದ್ದು ನಂತರ ಅಕ್ಕಪಕ್ಕದವರು ಮನೆ ಬಳಿ ಬರ್ತಿದ್ದಂತೆ ಎಚ್ಚೆತ್ತ ಗಂಡ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಪತ್ನಿಯನ್ನ ಸ್ಥಳೀಯ ಆಸ್ವತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾನೆ.

ಆದ್ರೆ ಅಷ್ಟೊತ್ತಿಗಾಗಲೆ ತೀವ್ರ ರಕ್ತಸಾವ್ರದಿಂದ ಬಳಲಿದ್ದ ಜನಿಲಾ ಆಸ್ವತ್ರೆಗೆ ಹೋಗ್ತಿದ್ದಂತೆ ಕೊನೆಯುಸಿರೆಳೆದಿದ್ದಾಳೆ. ಇನ್ನು ವಿಚಾರ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಗಂಡ ಸ್ಯಾಮ್ ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ ಏಳೇಳೂ ಜನ್ಮಕ್ಕೂ ಜೊತೆಯಾಗಿರೋಣ ಅಂತ ಇಷ್ಟಾಪಟ್ಟು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಬಂದ ನವವಿವಾಹಿತೆ ಏಳು ತಿಂಗಳು ಕಳೆಯುವಷ್ಟರಲ್ಲಿ ಗಂಡನಿಂದಲೆ ಕೊಲೆಯಾಗಿದ್ದು ಮಾತ್ರ ನಿಜಕ್ಕೂ ದುರಂತ. ಈ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಸಂಪೂರ್ಣ ತನಿಖೆ ನಂತರ ಕೊಲೆಯ ಹಿಂದಿನ ಕಾರಣ, ಕಹಿಸತ್ಯಗಳು ಬೆಳಕಿಗೆ ಬರಬೇಕಿವೆ.

ವರದಿ: ನವೀನ್, ಟಿವಿ 9, ದೇವನಹಳ್ಳಿ

ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published On - 9:54 am, Thu, 13 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ