ಮೈಸೂರು: ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆಯಾಗಿರುವ ಘಟನೆ ಗಣೇಶ ನಗರದ ಮನೆಯಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು 24 ವರ್ಷದ ಕುಮಾರಿ ಎಂದು ಗುರುತಿಸಲಾಗಿದೆ.
ಮೂಲತಃ ಜಿಲ್ಲೆಯ ನಂಜನಗೂಡು ತಾಲೂಕು ಕೂಡ್ಲಾಪುರ ಗ್ರಾಮದವರಾದ ಕುಮಾರಿ ಮೈಸೂರಿನ ಮಹೇಶ್ ಎಂಬಾತನ ಜೊತೆ ಮದುವೆ 2 ವರ್ಷದ ಹಿಂದೆ ವಿವಾಹವಾಗಿದ್ದರು.
ಇತ್ತ ವರದಕ್ಷಿಣೆ ಆಸೆಗಾಗಿ ಪತಿ ಹಾಗೂ ಆತನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಕುಮಾರಿ ಪೋಷಕರು ಆರೋಪಿಸಿದ್ದಾರೆ. ಕುಮಾರಿ ಪತಿ ಮಹೇಶ್, ಅತ್ತೆ ಬಸಮ್ಮಣಿ ಹಾಗೂ ಮಾವ ಮಹದೇವ ಶೆಟ್ಟಿ ವಿರುದ್ಧ ಕುಮಾರಿ ಪೋಷಕರು ಆರೋಪಿಸಿದ್ದಾರೆ. ಇನ್ನು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.