ಡ್ರಿಪ್ ಬಾಟಲಿ ಸಮೇತ ಬಸ್ ನಿಲ್ದಾಣದಲ್ಲಿ ಬಾಲಕಿ! ಆರೋಗ್ಯ ಸಚಿವರ ಪಕ್ಕದ ಊರಿನಲ್ಲೇ ಕರುಣಾಜನಕ ದೃಶ್ಯ!!!

|

Updated on: Feb 04, 2020 | 5:21 PM

ಚಿತ್ರದುರ್ಗ: ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್​ಗೆ ಬಿಚ್ಚಿಬಿದ್ದಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ನೀಡಲು ವಿಶೇಷವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು  ಎದುರಾಗಿದೆ. ಇಂತಹ ಸಮಯದಲ್ಲಿ ಅಮಾಯಕ ಬಾಲಕಿಯೊಬ್ಬಳಿಗೆ ಚಿಕಿತ್ಸೆ ನೀಡದೆ, ಆಸ್ಪತ್ರೆಯಿಂದ  ಹೊರಹಾಕಿರುವ ಅಮಾನವೀಯ ಘಟನೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಪಕ್ಕದ ಊರಿನಲ್ಲೇ ನಡೆದಿದೆ. ಚಳ್ಳಕೆರೆ ಪಟ್ಟಣದಲ್ಲಿರುವ ತಿರುಮಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯನ್ನು ಹೊರಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಬಳ್ಳಾರಿ‌ ಜಿಲ್ಲೆ ಕೂಡ್ಲಗಿ ತಾಲೂಕಿನ ಉಡೇಮ್ ಗ್ರಾಮದ ಅರ್ಚನಾ(11) ಅನಾರೋಗ್ಯದಿಂದ ತಿರುಮಲ […]

ಡ್ರಿಪ್ ಬಾಟಲಿ ಸಮೇತ ಬಸ್ ನಿಲ್ದಾಣದಲ್ಲಿ ಬಾಲಕಿ! ಆರೋಗ್ಯ ಸಚಿವರ ಪಕ್ಕದ ಊರಿನಲ್ಲೇ ಕರುಣಾಜನಕ ದೃಶ್ಯ!!!
Follow us on

ಚಿತ್ರದುರ್ಗ: ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್​ಗೆ ಬಿಚ್ಚಿಬಿದ್ದಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ನೀಡಲು ವಿಶೇಷವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು  ಎದುರಾಗಿದೆ. ಇಂತಹ ಸಮಯದಲ್ಲಿ ಅಮಾಯಕ ಬಾಲಕಿಯೊಬ್ಬಳಿಗೆ ಚಿಕಿತ್ಸೆ ನೀಡದೆ, ಆಸ್ಪತ್ರೆಯಿಂದ  ಹೊರಹಾಕಿರುವ ಅಮಾನವೀಯ ಘಟನೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಪಕ್ಕದ ಊರಿನಲ್ಲೇ ನಡೆದಿದೆ.

ಚಳ್ಳಕೆರೆ ಪಟ್ಟಣದಲ್ಲಿರುವ ತಿರುಮಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯನ್ನು ಹೊರಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಬಳ್ಳಾರಿ‌ ಜಿಲ್ಲೆ ಕೂಡ್ಲಗಿ ತಾಲೂಕಿನ ಉಡೇಮ್ ಗ್ರಾಮದ ಅರ್ಚನಾ(11) ಅನಾರೋಗ್ಯದಿಂದ ತಿರುಮಲ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ.

ಆದ್ರೆ, ಹಣ ಪಾವತಿಸದ ಕಾರಣ ಚಿಕಿತ್ಸೆಯನ್ನು ಅರ್ಧಕ್ಕೆ‌ ನಿಲ್ಲಿಸಿ, ಬಾಲಕಿಯನ್ನು ಹೊರ ಕಳುಹಿಸಿದ್ದಾರೆ ಎಂದು ವೈದ್ಯರ ವಿರುದ್ಧ ಆರೋಪ ಮಾಡಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಬಾಲಕಿ ಮತ್ತು ತಾಯಿ ಡ್ರಿಪ್ ಬಾಟಲಿ ಸಮೇತ ಬಸ್ ನಿಲ್ದಾಣದಲ್ಲಿ ನಿಂತಿರುವ ಕರುಣಾಜನಕ ದೃಶ್ಯ ಫುಲ್ ವೈರಲ್ ಆಗಿದೆ.

ಈ ಬಗ್ಗೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣ ಡಿಹೆಚ್ಒ ಡಾ. ಫಾಲಾಕ್ಷ ಅವರ ಗಮನಕ್ಕೆ ಬಂದಿದ್ದು ಭೇಟಿ ನೀಡಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

Published On - 4:49 pm, Tue, 4 February 20