ಬೆಂಗಳೂರಿನಲ್ಲಿ ಮಳೆ ಅವಾಂತರ: ಕನಕನಗರದ ನೂರಾರು ಮನೆಗಳಿಗೆ ನುಗ್ಗಿದ ನೀರು

| Updated By: sandhya thejappa

Updated on: Jun 05, 2021 | 10:13 AM

ನಗರದಲ್ಲಿ ಮಳೆ ಬಂದಿದ್ದು, ರಾಜಕಾಲುವೆಯಲ್ಲಿ ಹೂಳು ತೆಗೆಯದಿದ್ದರಿಂದ ಮಳೆ ನೀರು ಮನೆಗೆ ನುಗ್ಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಹಿನ್ನೆಲೆ ಈ ರೀತಿ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಳೆ ಅವಾಂತರ: ಕನಕನಗರದ ನೂರಾರು ಮನೆಗಳಿಗೆ ನುಗ್ಗಿದ ನೀರು
ಬೆಂಗಳೂರು ಮಳೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಬೆಂಗಳೂರು ದಕ್ಷಿಣ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕನಕನಗರದ ನೂರಾರು ಮನೆಗಳಿಗೆ ನೀರು ನುಗಿದ್ದು, ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ನೀರು ಪಾಲಾಗಿವೆ. ಮನೆಗೆ ನೀರು ನುಗ್ಗಿದ್ದರಿಂದ ಮಕ್ಕಳೊಂದಿಗೆ ಹೊರಗೆ ಬಂದೆ. ಅಲ್ಪಸ್ವಲ್ಪ ಇದ್ದ ಅಕ್ಕಿ, ಬೇಳೆಕಾಳು ಎಲ್ಲಾ ನೀರು ಪಾಲಾಗಿದೆ. ಈಗ ಮಕ್ಕಳಿಗೆ ಅಡುಗೆ ಮಾಡಿಕೊಡಲು ಅಕ್ಕಿಯೇ ಇಲ್ಲ. ನಾವು ಹೇಗೆ ಜೀವನ ಸಾಗಿಸುವುದು ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ.

ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ನಗರದಲ್ಲಿ ಮಳೆ ಬಂದಿದ್ದು, ರಾಜಕಾಲುವೆಯಲ್ಲಿ ಹೂಳು ತೆಗೆಯದಿದ್ದರಿಂದ ಮಳೆ ನೀರು ಮನೆಗೆ ನುಗ್ಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಹಿನ್ನೆಲೆ ಈ ರೀತಿ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಮಳೆ ನೀರಿಗೆ ಮನೆ ಮುಂದೆ ಇದ್ದ ಬೈಕ್ ಕಾರು ಕೊಚ್ಚಿ ಹೋಗಿವೆ. ಕಳೆದೆ ಏಳೆಂಟು ವರ್ಷಗಳಿಂದ ಈ ಸಮಸ್ಯೆ ಹೀಗೆ ಇದೆ. ಆದರೂ ಇಲ್ಲಿ ಯಾರು ಬರಲ್ಲ. ಕಾರ್ಪೋರೇಟರ್ ಎಂಎಲ್ಎಗೆ ಹೇಳಿದ್ದರೂ ಸಮಸ್ಯೆ ಮಾತ್ರ ಇಲ್ಲಿಯವರೆಗೆ ಬಗೆಹರಿಸಿಲ್ಲ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ.

ತುಂಬಿ ತುಳುಕುತ್ತಿರುವ ಹಳ್ಳ, ಕುಂಟೆಗಳು
ತುಮಕೂರು: ಜಿಲ್ಲೆಯಲ್ಲಿ ತಡರಾತ್ರಿ ಬಂದ ಮಳೆಯ ಅಬ್ಬರದಿಂದ ಹಳ್ಳ, ಕುಂಟೆಗಳು ತುಂಬಿ ತುಳುಕುತ್ತಿವೆ. ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನಲ್ಲೂ ಭಾರಿ ಮಳೆ ಸುರಿದಿದೆ. ಭಾರಿ ಮಳೆಗೆ ರೈತರ ಜಮೀನುಗಳು ಜಲಾವೃತವಾಗಿವೆ. ಧಾರಾಕಾರ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಇದನ್ನೂ ಓದಿ

Karnataka Weather: ಹವಾಮಾನ ವರದಿ – ಇಂದು, ನಾಳೆ ಭಾರೀ ಮಳೆ ಸುರಿಯುವ ನಿರೀಕ್ಷೆ; ಕರಾವಳಿ ಭಾಗದಲ್ಲಿ ರೆಡ್​ ಅಲರ್ಟ್​

Bengaluru Rain: ಜೂನ್ 3, ಕಳೆದ 7 ವರ್ಷಗಳ ಜೂನ್ ತಿಂಗಳುಗಳಲ್ಲೇ ಅತಿಹೆಚ್ಚು ಮಳೆ ಸುರಿದ ದಿನ

(Hundreds of homes are filled in water with heavy rains in Bengaluru)