Husband Kills Wife: ಬಾಯಿಗೆ ಬಟ್ಟೆ ಇಟ್ಟು ಪತ್ನಿ ಕೊಲೆ ಮಾಡಿದ ಪತಿರಾಯ ಅರೆಸ್ಟ್

ಪತಿ ಶಫಿ ಪತ್ನಿಗೆ ಬಾಯಿಯಲ್ಲಿ ಬಟ್ಟೆ ಇಟ್ಟು ಉಸಿರುಗಟ್ಟಿಸಿ ಕೊಲೆಗೈದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ.

Husband Kills Wife: ಬಾಯಿಗೆ ಬಟ್ಟೆ ಇಟ್ಟು ಪತ್ನಿ ಕೊಲೆ ಮಾಡಿದ ಪತಿರಾಯ ಅರೆಸ್ಟ್
ಆರೋಪಿ ಶಫಿ ಮತ್ತು ಪತ್ನಿ ನೂರ್ ಅಸ್ಮಾ
Updated By: Digi Tech Desk

Updated on: Feb 12, 2021 | 9:11 AM

ವಿಜಯನಗರ: ಪತಿಯಿಂದಲೇ ಪತ್ನಿ ಕೊಲೆಯಾದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ನೂರ್ ಅಸ್ಮಾ(30) ಕೊಲೆಯಾದ ದುರ್ದೈವಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತಿ ಶಫಿ ಪತ್ನಿಗೆ ಬಾಯಿಯಲ್ಲಿ ಬಟ್ಟೆ ಇಟ್ಟು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಪತಿ ಶಫಿ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಲಹುಣಸಿ ನಿವಾಸಿ.

ಇನ್ನೂ ಪತ್ನಿ ಹೂವಿನಹಡಗಲಿಯಲ್ಲಿ ಡಾಟಾ ಎಂಟ್ರಿ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಇಬ್ಬರು ಪರಸ್ಪರ ಪ್ರೀತಿಸಿ ಕಳೆದ ಒಂಭತ್ತು ತಿಂಗಳಿಂದಷ್ಟೇ ಮದುವೆಯಾಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಇನ್ನೂ ಘಟನಾ ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತಿ ಶಫಿಯನ್ನ ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪತಿಯಿಂದಲೇ ಪತ್ನಿ ಕೊಲೆ: ಹಣಕಾಸು ವಿಚಾರಕ್ಕೆ ಮಡದಿ ಕತ್ತು ಹಿಸುಕಿ ಕೊಂದ ಗಂಡ

Published On - 8:02 am, Fri, 12 February 21