ಗಿಳಿಯಂತೆ ಸಾಕಿ ಗಿಡುಗನ ಕೈಗೆ ಕೊಟ್ಟಂತಾಯಿತು.. ಹೆಂಡತಿಯನ್ನೇ ಕೊಲೆ ಮಾಡಿದ ಪಾಪಿ ಗಂಡ

|

Updated on: Jan 11, 2021 | 7:50 AM

ಆಕೆ ಹೆತ್ತವರನ್ನು ಕಳೆದುಕೊಂಡು ಅನಾಥಳಾಗಿ ಅಜ್ಜಿಮನೆಯಲ್ಲಿ ಬೆಳೆದ ಹುಡುಗಿ. ಆದ್ರೂ ಆಕೆಯನ್ನ ಅಜ್ಜಿ ಪ್ರೀತಿಯಿಂದ ಸಾಕಿದ್ರು. ಆದ್ರೆ ಗಿಳಿಯಂತೆ ಸಾಕಿದ ಆಕೆಯನ್ನ ಗಿಡುಗನ ಕೈಗೆ ಕೊಟ್ಟು ಈಗ ಕಣ್ಣೀರು ಹಾಕುತ್ತಿದ್ದಾರೆ.

ಗಿಳಿಯಂತೆ ಸಾಕಿ ಗಿಡುಗನ ಕೈಗೆ ಕೊಟ್ಟಂತಾಯಿತು.. ಹೆಂಡತಿಯನ್ನೇ ಕೊಲೆ ಮಾಡಿದ ಪಾಪಿ ಗಂಡ
ಲಕ್ಷ್ಮಿ ಮತ್ತು ಪಾಪಿ ಗಂಡ ರುದ್ರಪ್ಪ ಮದುವೆ ಫೋಟೋ
Follow us on

ಧಾರವಾಡ: ಹೆಂಡತಿಯನ್ನು ಉಸಿರುಗಟ್ಟಿಸಿ ಅಮಾನುಷವಾಗಿ ಕೊಂದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲಗಿನಕಟ್ಟಿಯಲ್ಲಿ ನಡೆದಿದೆ. ಹುಲಗಿನಕಟ್ಟಿ ನಿವಾಸಿ ಲಕ್ಷ್ಮಿಯನ್ನು ರುದ್ರಪ್ಪ ಉಸಿರುಗಟ್ಟಿಸಿ ಅಮಾನುಷವಾಗಿ ಕೊಂದು ವಿಕೃತಿ ಮರೆದಿದ್ದಾನೆ. ಲಕ್ಷ್ಮೀ ಸಾವಿನಿಂದ ಆಕೆಯ ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿದೆ.

ತಂದೆ ತಾಯಿ ಇಲ್ಲದ ಲಕ್ಷ್ಮೀ ಅಜ್ಜಿ ಮನೆಯಲ್ಲಿ ಬೆಳೆದಿದ್ಲು. ಕಳೆದ ವರ್ಷ ಮೇ ತಿಂಗಳಲ್ಲಿ 30 ವರ್ಷದ ರುದ್ರಪ್ಪನ ಜೊತೆ ಲಕ್ಷ್ಮೀಯ ಮದುವೆ ಮಾಡಲಾಗಿತ್ತು. ಲಕ್ಷ್ಮೀ ಅಪ್ರಾಪ್ತಳಾಗಿದ್ದಳು. ಸಾಲದ್ದಕ್ಕೆ ರುದ್ಪಪ್ಪ ಕುಡುಕ ಬೇರೆ ಆಗಿದ್ದ. ಹೀಗಾಗಿ ಮದುವೆಯಾದ ಬಳಿಕ ಲಕ್ಷ್ಮೀ ತವರು ಮನೆಯಲ್ಲೆೇ ಇದ್ಲು. ರುದ್ರಪ್ಪ ಆಗಾಗ ಲಕ್ಷ್ಮೀ ಮನೆಗೆ ಕುಡಿದು ಬಂದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ. ಈತನಿಗೆ ಹಿರಿಯರು ಬುದ್ಧಿ ಹೇಳಿದ್ರೂ ಕೇಳಿಲ್ಲ.

ಲಕ್ಷ್ಮೀ ಮನೆಗೆ ಬಂದು ಆಕೆಯನ್ನ ತನ್ನ ಮನೆಗೆ ಕಳುಹಿಸಿ ಕೊಡಿ ಅಂತಾ ಪೀಡಿಸುತ್ತಿದ್ದನಂತೆ. ಮೊನ್ನೆ ಸಂಜೆ ರುದ್ರಪ್ಪ ತನ್ನ ಹೊಲಕ್ಕೆ ಲಕ್ಷ್ಮೀಯನ್ನ ಕರೆದುಕೊಂಡು ಹೋಗಿದ್ದಾನೆ. ನಂತ್ರ ಅವಳಿಗೆ ಹಿಂಸೆ ಕೊಟ್ಟು ಹಗ್ಗದಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಲಕ್ಷ್ಮೀ ಸತ್ತಿರೋದನ್ನು ಖಚಿತಪಡಿಸಿಕೊಂಡು ತಾನು ಅಲ್ಲೆ ಇದ್ದ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಯಾರೋ ನೋಡಿ ಕಾಪಾಡಿದ್ದಾರೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಬಗ್ಗೆ ಕಲಘಟಗಿ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಪ್ಪ ಅಮ್ಮ ಇಲ್ಲದ ಅಪ್ರಾಪ್ತೆಯನ್ನ ಮದುವೆಯಾಗಿ ಆಕೆಗೆ ಚಿತ್ರ ಹಿಂಸೆ ಕೊಟ್ಟು ಕೊಂದ ಈ ಪಾಪಿಗೆ ತಕ್ಕ ಶಿಕ್ಷೆ ನೀಡಬೇಕಿದೆ.

ರುದ್ರಪ್ಪ

Published On - 7:48 am, Mon, 11 January 21