‘ರಣರಂಗದಲ್ಲಿ ಭೇಟಿಯಾಗ್ತೀನಿ ಎಂದಿದ್ದೆ, ಈಗ ಹುಡುಕಿದ್ರೂ ಎಂಟಿಬಿ ಸಿಗುತ್ತಿಲ್ಲ’

|

Updated on: Nov 24, 2019 | 7:43 PM

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರದ ಉಪಚುನಾವಣೆಯ ಕಾವು ಜೋರಾಗಿದ್ದು, ತಮ್ಮ ಅಭ್ಯರ್ಥಿಗಳ ಪರ ಪಕ್ಷದ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಪರ ಮೇಡಿ ಮಲ್ಲಸಂದ್ರದಲ್ಲಿ ಪಕ್ಷದ ನಾಯಕರು ಪ್ರಚಾರ ನಡೆಸಿದ್ರು. ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಸಹ ಚುನಾವಣಾ ರಂಗ ಪ್ರವೇಶಕ್ಕಿಳಿದಿದ್ದಾರೆ. ವಿಧಾನಸೌಧದಲ್ಲಿ ಎಂಟಿಬಿ ನಾಗರಾಜ್​ಗೆ ರಣರಂಗದಲ್ಲಿ ಭೇಟಿ ಮಾಡ್ತೀನಿ ಎಂದು ಹೇಳಿದ್ದೆ. ಅವರನ್ನು ನಾನು ಹುಡುಕುತ್ತಿದ್ದೇನೆ. ಆದ್ರೆ, ಎಂಟಿಬಿ ನಾಗರಾಜ್ ಅವರೇ ಇದುವರೆಗು ಸಿಗಲಿಲ್ಲ […]

‘ರಣರಂಗದಲ್ಲಿ ಭೇಟಿಯಾಗ್ತೀನಿ ಎಂದಿದ್ದೆ, ಈಗ ಹುಡುಕಿದ್ರೂ ಎಂಟಿಬಿ ಸಿಗುತ್ತಿಲ್ಲ’
ಡಿ.ಕೆ.ಶಿವಕುಮಾರ್, ಎಂಟಿಬಿ ನಾಗರಾಜ್
Follow us on

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರದ ಉಪಚುನಾವಣೆಯ ಕಾವು ಜೋರಾಗಿದ್ದು, ತಮ್ಮ ಅಭ್ಯರ್ಥಿಗಳ ಪರ ಪಕ್ಷದ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಪರ ಮೇಡಿ ಮಲ್ಲಸಂದ್ರದಲ್ಲಿ ಪಕ್ಷದ ನಾಯಕರು ಪ್ರಚಾರ ನಡೆಸಿದ್ರು. ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಸಹ ಚುನಾವಣಾ ರಂಗ ಪ್ರವೇಶಕ್ಕಿಳಿದಿದ್ದಾರೆ.

ವಿಧಾನಸೌಧದಲ್ಲಿ ಎಂಟಿಬಿ ನಾಗರಾಜ್​ಗೆ ರಣರಂಗದಲ್ಲಿ ಭೇಟಿ ಮಾಡ್ತೀನಿ ಎಂದು ಹೇಳಿದ್ದೆ. ಅವರನ್ನು ನಾನು ಹುಡುಕುತ್ತಿದ್ದೇನೆ. ಆದ್ರೆ, ಎಂಟಿಬಿ ನಾಗರಾಜ್ ಅವರೇ ಇದುವರೆಗು ಸಿಗಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಕುಟುಕಿದರು.

ಎಂಟಿಬಿ ಬಡವ ಅಲ್ಲ, ಶ್ರೀಮಂತ: 
ಎಂಟಿಬಿ ನಾಗರಾಜ್ ಅವರಿಗೂ ಈ ಕ್ಷೇತ್ರಕ್ಕೂ ಯಾವ ಸಂಬಂಧ ಇರಲಿಲ್ಲ. ಎಂಟಿಬಿ ನಾಗರಾಜ್ ಬಡವ ಅಲ್ಲ, ಬಹಳ ದೊಡ್ಡ ಶ್ರೀಮಂತ. ಇಷ್ಟು ಮಾತಾಡ್ತಾ ಇದೀಯಲ್ಲಪ್ಪ, ನಿನಗೆ ಇಷ್ಟು ಶಕ್ತಿ ಕೊಟ್ಟಿದ್ಯಾರು? ನನಗೆ ಯಾರೋ ಒತ್ತಡ ಹಾಕ್ತಿದ್ದಾರೆ ಅಂತ ಕಾರ್ಯಕರ್ತರನ್ನು ಕರೆದು ಎಂಟಿಬಿ ಹೇಳಿದ್ರಾ? ಬಚ್ಚೇಗೌಡರು, ಯಡಿಯೂರಪ್ಪ, ಎಂಟಿಬಿದು ರೌಂಡ್ ಟೇಬಲ್ ಮೀಟಿಂಗ್ ಆಯ್ತಂತೆ. ಚುನಾವಣೆಗೆ ಆಣೆ ಪ್ರಮಾಣ ಕರೀತಾವ್ರಂತೆ ಎಂದರು.

ಸತ್ತ ಮೇಲೆ ಉಡುದಾರ ಇಟ್ಟು ಕಳಸ್ತಾರೆ:
ಎಷ್ಟೇ ದುಡ್ಡು ಇರಲಿ, ಎಂತೆಂಥಾ ಚಕ್ರವರ್ತಿಗಳೆಲ್ಲ ಹೊರಟೋದ್ರು. ಎಂತೆಂಥಾ ನಾಯಕರೆಲ್ಲ ಕ್ಲೋಸ್ ಆಗೋದ್ರು. ಜನರ ಮುಂದೆ ನಾನು ಎಂಟಿಬಿಯೆಲ್ಲ ಯಾವ ಲೆಕ್ಕ. ಎಲ್ಲವನ್ನು ದುಡ್ಡಲ್ಲೇ ಲೆಕ್ಕ ಮಾಡ್ತೀರಾ? ಸಿದ್ದರಾಮಯ್ಯಗೆ ದುಡ್ಡು ಕೊಟ್ಟಿದ್ರಂತೆ, ನಂಜೇಗೌಡರಿಗೆ ಕೊಟ್ಟಿದ್ರಂತೆ ಎಂದೆಲ್ಲಾ ಹೇಳಿದ್ದಾರೆ. ಎಂಟಿಬಿ ಬಗ್ಗೆ ನಾನು ಮಾತಾಡ್ಲಾ? ಈಗ ಬೇಡ ಅವೆಲ್ಲ. ಸತ್ತ ಮೇಲೆ ಒಂದು ಉಡುದಾರ ಇಟ್ಟು ಕಳಸ್ತಾರೆ ಅಷ್ಟೇ. ಇತಿಹಾಸದಲ್ಲಿ ಇವರು ಮಾಡಿದ ತಾಯ್ತನವನ್ನು ಹೊಸಕೋಟೆ ಜನ ಕ್ಷಮಿಸಲ್ಲ ಎಂದು ಎಂಟಿಬಿ ವಿರುದ್ಧ ಕಿಡಿಕಾರಿದರು.