ಫಡ್ನವಿಸ್ ಮುಂದಿದೆ ವಿಶ್ವಾಸಮತದ ಸವಾಲು, ಸುಪ್ರೀಂ ಕೈಯಲ್ಲಿ ದೇವೇಂದ್ರ ಭವಿಷ್ಯ
ನವದೆಹಲಿ: ಒಂದು ತಿಂಗಳ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮಹಾ ಕಿತ್ತಾಟದ ವಿಚಾರವಾಗಿ ಇಂದು ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಮಹತ್ವದ್ದಾಗಿದೆ. ಶಾಸಕರ ಬಚಾವ್ ಮಾಡಲು ಮೂರು ಪಕ್ಷಗಳು ಎತ್ನಿಸುತ್ತಿದ್ದು, ಬಿಜೆಪಿಗೆ ವಿಶ್ವಾಸಮತದಲ್ಲಿ ಸೋಲು ಭಯ ಕಾಡ್ತಿದೆ. ರಾತ್ರಿ ಕಳೆದು ಬೆಳಗಾಗುಷ್ಟರಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅನ್ನೋದಕ್ಕೆ ಮಹಾರಾಷ್ಟ್ರ ರಾಜಕೀಯ ಸಾಕ್ಷಿಯಾಗಿದೆ. ಮಹಾಮೈತ್ರಿ ಸರ್ಕಾರ ರಚಿಸಲು ಎಲ್ಲಾ ತಯಾರಿ ಮಾಡ್ಕೊಂಡಿದ್ದ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ಗೆ ಶಾಕ್ ಕೊಟ್ಟು ಬಿಜೆಪಿ ಸರ್ಕಾರ ರಚಿಸಿತು. ದೇವೇಂದ್ರ […]
ನವದೆಹಲಿ: ಒಂದು ತಿಂಗಳ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮಹಾ ಕಿತ್ತಾಟದ ವಿಚಾರವಾಗಿ ಇಂದು ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಮಹತ್ವದ್ದಾಗಿದೆ. ಶಾಸಕರ ಬಚಾವ್ ಮಾಡಲು ಮೂರು ಪಕ್ಷಗಳು ಎತ್ನಿಸುತ್ತಿದ್ದು, ಬಿಜೆಪಿಗೆ ವಿಶ್ವಾಸಮತದಲ್ಲಿ ಸೋಲು ಭಯ ಕಾಡ್ತಿದೆ.
ರಾತ್ರಿ ಕಳೆದು ಬೆಳಗಾಗುಷ್ಟರಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅನ್ನೋದಕ್ಕೆ ಮಹಾರಾಷ್ಟ್ರ ರಾಜಕೀಯ ಸಾಕ್ಷಿಯಾಗಿದೆ. ಮಹಾಮೈತ್ರಿ ಸರ್ಕಾರ ರಚಿಸಲು ಎಲ್ಲಾ ತಯಾರಿ ಮಾಡ್ಕೊಂಡಿದ್ದ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ಗೆ ಶಾಕ್ ಕೊಟ್ಟು ಬಿಜೆಪಿ ಸರ್ಕಾರ ರಚಿಸಿತು. ದೇವೇಂದ್ರ ಫಡ್ನವಿಸ್ 2ನೇ ಬಾರಿಗೆ ಸಿಎಂ ಆದ್ರೆ, ಎನ್ಸಿಪಿಯ ಅಜಿತ್ ಪವಾರ್ ಡಿಸಿಎಂ ಆಗಿದ್ದಾರೆ.
ಆದ್ರೀಗ ಅವರ ಮುಂದೆ ಬಹುದೊಡ್ಡ ಸವಾಲಿದೆ. ದೇವೇಂದ್ರ ಫಡ್ನವಿಸ್ ಅವರ ಭವಿಷ್ಯವನ್ನು ಸರ್ವೋಚ್ಛ ನ್ಯಾಯಾಲಯ ಇಂದು ನಿರ್ಧರಿಸಲಿದೆ. ಇದ್ರಿಂದ ಕಮಲ ನಾಯಕರಲ್ಲೀಗ ಆತಂಕ ಮನೆ ಮಾಡಿದೆ.
ಫಡ್ನವಿಸ್ ಮುಂದಿದೆ ವಿಶ್ವಾಸಮತದ ಬಹುದೊಡ್ಡ ಸವಾಲು..! ಸಿಎಂ ಆಗಿ ಪ್ರಮಾಣ ಸ್ವೀಕರಿಸಿರುವ ದೇವೇಂದ್ರ ಫಡ್ನವಿಸ್ಗೆ ಬಹುಮತ ಸಾಬೀತು ಪಡಿಸಲೇಬೇಕಾದ ಅನಿವಾರ್ಯ ಇದೆ. ಆದ್ರೆ, ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಫಡ್ನವಿಸ್ಗೆ ಟೈಂ ಫಿಕ್ಸ್ ಮಾಡಿಲ್ಲ. ರಾಜ್ಯಪಾಲರ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕಾಂಗ್ರೆಸ್, ಶಿವಸೇನೆ ಮತ್ತು ಎನ್ಸಿಪಿ ನಾಯಕರು ಬಹುಮತ ಸಾಬೀತಿಗೆ ಟೈಂ ಫಿಕ್ಸ್ ಮಾಡುವಂತೆ ಕೋರಿದ್ದಾರೆ.
ನಿನ್ನೆ ಭಾನುವಾರ ರಜಾ ದಿನವಾದ್ರೂ ವಿಚಾರಣೆ ನಡೆಸಿದ್ದ ಕೋರ್ಟ್, 3 ಪಕ್ಷ ಗಳ ವಾದ ಆಲಿಸಿದೆ. ಆದ್ರೆ, ಕೆಲವೊಂದಿಷ್ಟು ದಾಖಲೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಖಡಕ್ ಆಗಿ ಹೇಳಿದೆ.
ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ: 2ಪತ್ರಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಖಡಕ್ ಆಗಿ ಹೇಳಿದೆ. ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ ರಾಜ್ಯಪಾಲರ ಪತ್ರ ಮತ್ತು ರಾಜ್ಯಪಾಲರಿಗೆ ನೀಡಿರುವ ಬಿಜೆಪಿಗೆ ಇರುವ ಶಾಸಕರ ಬೆಂಬಲದ ಪತ್ರವನ್ನು ಸಲ್ಲಿಸಿವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸುಪ್ರೀಂಕೋರ್ಟ್ ಸೂಚನೆಯಂತೆ ಇಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಾಹಿತಿ ಸಲ್ಲಿಸಬೇಕಿದೆ. ಅಲ್ದೆ ಸಿಎಂ ದೇವೇಂದ್ರ ಫಡ್ನವಿಸ್, ಡಿಸಿಎಂ ಅಜಿತ್ ಪವಾರ್ಗೆ ನೋಟಿಸ್ ನೀಡಿದ್ದು, ಇಂದು ತಮ್ಮ ಪರವಾಗಿ ಇರುವ ಶಾಸಕರ ಬೆಂಬಲವನ್ನು ಸುಪ್ರೀಂಕೋರ್ಟ್ನಲ್ಲಿ ದೃಢಪಡಿಸಬೇಕಾಗುತ್ತೆ.
ಈ ಬಗ್ಗೆ ಬೆಳಗ್ಗೆ 10.30ಕ್ಕೆ ನ್ಯಾ. ರಮಣ ನೇತೃತ್ವದ ಪೀಠ ವಿಚಾರಣೆ ನಡೆಸಲಿದ್ದು, ಮಹತ್ವದ ಆದೇಶ ಹೊರಡಿಸಲಿದೆ. ಸಿಎಂ ಫಡ್ನವಿಸ್ ಬಹುಮತ ಸಾಬೀತು ಪಡಿಸುವ ಕುರಿತು ಟೈಂ ಫಿಕ್ಸ್ ಮಾಡುವ ಸಾಧ್ಯತೆ ಇದ್ದು, ತೀವ್ರ ಕುತೂಹಲ ಕೆರಳಿಸಿದೆ.
Published On - 6:15 am, Mon, 25 November 19