ಮೊಳಕಾಲ್ಮೂರು ಕ್ಷೇತ್ರದಿಂದ ಈ ಬಾರಿ ಶ್ರೀರಾಮುಲು ಗೆದ್ದು ತೋರಿಸಲಿ: ಸಿದ್ದರಾಮಯ್ಯ
ಅವರೇನು ಮೂಲ ಬಿಜೆಪಿ ಆಥವಾ ಆರೆಸ್ಸೆಸ್ ಗಿರಾಕಿಯೇ? ಪಕ್ಷದ ನಿಷ್ಠೆ ಬಗ್ಗೆ ಮಾತಾಡುವ ಅವರು ಈ ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದು ತೋರಿಸಲಿ ಅಂತ ಶ್ರೀರಾಮುಲುಗೆ ಸಿದ್ದರಾಮಯ್ಯ ಸವಾಲು ಹಾಕಿದರು.
ಚಿಕ್ಕಮಗಳೂರು: ಗುರುವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಚಿಕ್ಕಮಗಳೂರಿನಲ್ಲಿದ್ದರು. ಪಕ್ಷದ ಕಾರ್ಯಕರ್ತನೊಬ್ಬನ ಮಗಳ ಮದುವೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೂ ಮಾತಾಡಿದರು. ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರನ್ನು ವಿಶೇಷವಾಗಿ ಟಾರ್ಗೆಟ್ ಮಾಡಿ ಮಾತಾಡಿದ ವಿರೋಧ ಪಕ್ಷದ ನಾಯಕ, ಬಳ್ಳಾರಿಯ ನಾಯಕ ರಾಜಕೀಯ ಬದುಕು ಆರಂಭಿಸಿದ್ದೇ ಕಾಂಗ್ರೆಸ್ (Congress) ಪಕ್ಷದಿಂದ ಮುನಿಸಿಪಲ್ ಸದಸ್ಯನಾಗಿ ಆಯ್ಕೆಯಾಗುವ ಮೂಲಕ. ಅದಾದ ಮೇಲೆ ಅವರು ಬಿಜೆಪಿಯಿಂದಲೂ ಹೊರಬಂದು ತಮ್ಮದೇಯಾದ ಒಂದು ಪಾರ್ಟಿ ಮಾಡಿಕೊಂಡಿದ್ದರಲ್ಲ? ಅವರೇನು ಮೂಲ ಬಿಜೆಪಿ ಆಥವಾ ಆರೆಸ್ಸೆಸ್ ಗಿರಾಕಿಯೇ? ಪಕ್ಷದ ನಿಷ್ಠೆ ಬಗ್ಗೆ ಮಾತಾಡುವ ಅವರು ಈ ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದು ತೋರಿಸಲಿ ಅಂತ ಸವಾಲು ಹಾಕಿದರು.