ಧಾರವಾಡ: ಕರುನಾಡಲ್ಲಿ ಕೊರೊನಾ ಸುನಾಮಿ ವಿಸ್ಫೋಟಗೊಳ್ತಿದೆ. ದಶ ದಿಕ್ಕುಗಳಿಂದಲೂ ದಾಳಿ ಮಾಡ್ತಿರೋ ಕ್ರೂರಿ ಕೇಕೆ ಹಾಕ್ತಿದೆ. ಕಳ್ಳ ದಾರಿಯಲ್ಲಿ ನುಸುಳಿ. ಕಂಡ ಕಂಡವರ ದೇಹ ಹೊಕ್ತಿರೋ ಹೆಮ್ಮಾರಿ ಎಲ್ಲರನ್ನೂ ನಡುಗಿಸ್ತಿದೆ. ಮುಂಬೈನ ನಂಜಿನ ಮಹಾಘಾತದ ನಡುವೆ ಧಾರವಾಡಕ್ಕೆ ಮತ್ತೊಂದು ಮಹಾ ಆಘಾತ ಬಂದಪ್ಪಳಿಸಿದೆ.
ಧಾರವಾಡಕ್ಕೆ ಕಂಟಕವಾಗ್ತಿದೆ ILI, SARI ಪ್ರಕರಣ!
ಯೆಸ್, ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತ್ರಿಶತಕದತ್ತ ಮುನ್ನುಗ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ILI ಹಾಗೂ ಸಾರಿ ಪ್ರಕರಣಗಳು ಜಿಲ್ಲಾಡಳಿತಕ್ಕೆ ದೊಡ್ಡ ಟೆನ್ಷನ್ ತಂದೊಡ್ಡಿದೆ.
ಇನ್ನು, ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಪರೀಕ್ಷೆ ಮಾಡಿದಾಗ ಕೊರೊನಾ ವಿಸ್ಫೋಟಗೊಳ್ತಿರೋದು ಪಕ್ಕಾ ಆಗಿತ್ತು. ಅಲ್ಲೊಂದು ಇಲ್ಲೊಂದು ILI ಹಾಗೂ SARI ಪ್ರಕರಳು ಪತ್ತೆಯಾಗ್ತಿದ್ವು. ಆದ್ರೆ ಇದೇ ಶುಕ್ರವಾರ ಜಿಲ್ಲೆಯಲ್ಲಿ ದೃಢಪಟ್ಟ 30 ಪ್ರಕರಣಗಳಲ್ಲಿ 20 ILI ಹಾಗೂ ಎರಡು SARI ಕೇಸ್ಗಳೇ ಅನ್ನೋದು ಎಲ್ಲರ ನಿದ್ದೆಗೆಸಿಡಿಸಿದೆ. ಈ ಸೋಂಕಿತ ವ್ಯಕ್ತಿಗಳಿಗೆ ಕೊರೊನಾ ಎಲ್ಲಿಂದ ಬಂತು ಅನ್ನೋದು ತಿಳಿಯೋದೇ ಕಷ್ಟವಾಗಿದೆ.
ಇದೇ ರೀತಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಬರುತ್ತಿರೋ ಪ್ರಕರಣಗಳ ಪೈಕಿ ಸಾಕಷ್ಟು ಪ್ರಮಾಣದಲ್ಲಿ ILI ಪ್ರಕರಣಗಳೇ ಆಗಿವೆ. ಇದುವರೆಗೂ ಗ್ರಾಮೀಣ ಪ್ರದೇಶದಲ್ಲಿ ILI ಪ್ರಕರಣಗಳು ಹೆಚ್ಚಾಗಿ ಕಂಡು ಬರ್ತಿದೆ. ಇದನ್ನ ನೋಡಿದ್ರೆ ಕೊರೊನಾ ಮೂರನೇ ಹಂತಕ್ಕೆ ತಲುಪಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.
ಒಟ್ನಲ್ಲಿ ಕೊರೊನಾ ಹಾವಳಿಗೆ ಸಿಲುಕಿ ಪೇಡಾನಗರಿ ಧಾರವಾಡ ದಂಗು ಬಡಿದು ಕೂತಿದೆ. ಕ್ರೂರಿ ವೈರಸ್ ಜೊತೆ ಜೊತೆಗೆ ILI, SARI ಕೇಸ್ಗಳು ರೌದ್ರಾವತಾರ ಮೆರೀತದ್ದು ಮಂದ್ಯಾವ ಗತಿ ಕಾಣಿಸುತ್ತೆ ಅಂತ ಜನ ಚಿಂತೆಗೆ ಬಿದ್ದಿದ್ದಾರೆ.