ಕೊರೊನಾ ಭೀತಿಯಲ್ಲೂ ಕುಡುಕರಿಗೆ ಎಣ್ಣೆ ಚಿಂತೆ, ಬೆಣ್ಣೆನಗರಿಯಲ್ಲಿ ಕಳ್ಳಭಟ್ಟಿ ಗ್ಯಾಂಗ್ ಅರೆಸ್ಟ್​!

ಕೊರೊನಾ ಭೀತಿಯಲ್ಲೂ ಕುಡುಕರಿಗೆ ಎಣ್ಣೆ ಚಿಂತೆ, ಬೆಣ್ಣೆನಗರಿಯಲ್ಲಿ ಕಳ್ಳಭಟ್ಟಿ ಗ್ಯಾಂಗ್ ಅರೆಸ್ಟ್​!

ದಾವಣಗೆರೆ: ಕೊರೊನಾ ಅಟ್ಠಹಾಸ.. ರಾಜ್ಯವಷ್ಟೇ ಅಲ್ಲ ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಆದ್ರೆ ಇದೇ ಕೊರೊನಾದಿಂದಾಗಿ ಮದ್ಯಪ್ರಿಯರೂ ಕೂಡ ಕಂಗಾಲಾಗಿದ್ದಾರೆ. ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಿದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು ಅಡ್ಡದಾರಿ ಹಿಡಿದು ಕಳ್ಳಭಟ್ಟಿ ತಯಾರಿಸಿ ಸಿಕ್ಕಿಬಿದ್ದಿದ್ದಾರೆ. ಗುಡ್ಡದಲ್ಲಿ ಕಳ್ಳಭಟ್ಟಿ ತಯಾರಿಸಿ ಸಿಕ್ಕಿಬಿತ್ತು ಗ್ಯಾಂಗ್..! ದಾವಣಗೆರೆ ತಾಲೂಕಿನ ಆಲೂಕಹಟ್ಟಿ, ಅಣಜಿ ಹಾಗೂ ಮೆಳ್ಳೆಕಟ್ಟೆ ದೊಡ್ಡ ಗುಡ್ಡ. ಬೆಳಗ್ಗೆಯಿಂದ್ಲೇ ಇಲ್ಲಿ ಅಬಕಾರಿ ಸಿಬ್ಬಂದಿ ಸುತ್ತಾಡ್ತಿದ್ದಾರೆ. ಜೀಪ್‌ಗಳು ಮುಖ್ಯರಸ್ತೆ ಬಿಟ್ಟು ಗುಡ್ಡದ ಕಡೆ ತಿರುಗಿದ್ದೇ […]

sadhu srinath

|

Apr 18, 2020 | 7:39 AM

ದಾವಣಗೆರೆ: ಕೊರೊನಾ ಅಟ್ಠಹಾಸ.. ರಾಜ್ಯವಷ್ಟೇ ಅಲ್ಲ ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಆದ್ರೆ ಇದೇ ಕೊರೊನಾದಿಂದಾಗಿ ಮದ್ಯಪ್ರಿಯರೂ ಕೂಡ ಕಂಗಾಲಾಗಿದ್ದಾರೆ. ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಿದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು ಅಡ್ಡದಾರಿ ಹಿಡಿದು ಕಳ್ಳಭಟ್ಟಿ ತಯಾರಿಸಿ ಸಿಕ್ಕಿಬಿದ್ದಿದ್ದಾರೆ.

ಗುಡ್ಡದಲ್ಲಿ ಕಳ್ಳಭಟ್ಟಿ ತಯಾರಿಸಿ ಸಿಕ್ಕಿಬಿತ್ತು ಗ್ಯಾಂಗ್..! ದಾವಣಗೆರೆ ತಾಲೂಕಿನ ಆಲೂಕಹಟ್ಟಿ, ಅಣಜಿ ಹಾಗೂ ಮೆಳ್ಳೆಕಟ್ಟೆ ದೊಡ್ಡ ಗುಡ್ಡ. ಬೆಳಗ್ಗೆಯಿಂದ್ಲೇ ಇಲ್ಲಿ ಅಬಕಾರಿ ಸಿಬ್ಬಂದಿ ಸುತ್ತಾಡ್ತಿದ್ದಾರೆ. ಜೀಪ್‌ಗಳು ಮುಖ್ಯರಸ್ತೆ ಬಿಟ್ಟು ಗುಡ್ಡದ ಕಡೆ ತಿರುಗಿದ್ದೇ ತಡ.. ಕಳ್ಳಭಟ್ಟಿ ತಯಾರಕರು ಸ್ಥಳದಿಂದ ಎಸ್ಕೇಪ್. ಅಲ್ಲಿ ಹೋಗಿ ನೋಡಿದ್ರೆ 4 ಕಡೆ ಸಾವಿರಾರು ಲೀಟರ್‌ ಕಳ್ಳಭಟ್ಟಿ ಸಿದ್ಧ ಮಾಡಿ ದಾವಣಗೆರೆ ಸೇರಿದಂತೆ ಹತ್ತಾರು ಕಡೆ ಪೂರೈಕೆ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಕಾಲುದಾರಿ ಸಹ ಇಲ್ಲದ ಸ್ಥಳಗಳನ್ನ ಆಯ್ಕೆ ಮಾಡಿಕೊಂಡ ದಂಧೆಕೋರರು ಲಾಕ್‌ಡೌನ್ ಆದ ದಿನದಿಂದ ಶುರುಹಚ್ಚಿಕೊಂಡಿದ್ದಾರೆ.

ಕಳ್ಳಭಟ್ಟಿ ಖರೀದಿಗೆ ಹತ್ತಾರು ಜನ ಬರೋದು ಅಬಕಾರಿ ಇಲಾಖೆಗೆ ಮಾಹಿತಿ ಸಿಕ್ಕಿದೆ. ಇದನ್ನ ಆಧಾರವಾಗಿಟ್ಟುಕೊಂಡು ನಿರಂತರ ದಾಳಿ ನಡೆಸಲಾಗ್ತಿತ್ತು. ಆದ್ರೆ ಈ ಕಿಲಾಡಿಗಳು ಮಾಡಿಕೊಂಡಿದ್ದ ಸ್ಥಳ ಮಾತ್ರ ಗೊತ್ತಾಗ್ತಾನೇ ಇರಲಿಲ್ಲ. ರಾತ್ರಿ ವೇಳೆ ಕಳ್ಳಭಟ್ಟಿ ಸುಡಲು ಬೆಂಕಿ ಹಚ್ಚಿದ್ದು ಕಣ್ಣಿಗೆ ಬಿದ್ದಿತ್ತು. ಇದೇ ಮಾಹಿತಿ ಮೇರೆಗೆ ಬೆಳಗ್ಗೇ ರೇಡ್‌ ಮಾಡಲಾಯ್ತು.

ಸರ್ಜಿಕಲ್‌ ಸ್ಪಿರಿಟ್‌ ಬಳಸಿ ಮದ್ಯ ಮಾರಾಟ..! ಮತ್ತೊಂದೆಡೆ ಸಿದ್ಧವೀರಪ್ಪ ಬಡಾವಣೆಯ ದಲ್ಲಾಳಿ ಬಸವರಾಜ್‌ ಎಂಬಾತ ತನ್ನ ಅಂಗಡಿ ಬಂದ್‌ ಮಾಡಿ ಹೊಸ ದಂಧೆ ಶುರು ಮಾಡಿದ್ದಾನೆ. ಮೆಡಿಕಲ್ ಶಾಪ್‌ಗಳಲ್ಲಿ ಸಿಗೋ ಸರ್ಜಿಕಲ್‌ ಸ್ಪಿರಿಟ್‌ ಬಳಸಿ ಮದ್ಯ ಮಾರಾಟ ಮಾಡ್ತಿದ್ದ. ವೈದ್ಯರು ಶಸ್ತ್ರಚಿಕಿತ್ಸೆ ವೇಳೆ ಬಳಸುವ ಸ್ಪಿರಿಟ್ ಇದಾಗಿದ್ದು, ಮೆಡಿಕಲ್ ಶಾಪ್‌ನಲ್ಲಿ 100 ರೂಪಾಯಿಗೆ 1 ಬಾಟಲ್ ಸಿಗುತ್ತೆ. ಇದನ್ನ ತಂದು ಹತ್ತಾರು ಲೀಟರ್‌ ನೀರು ಹಾಕಿ ಜೊತೆಗೊಂದಿಷ್ಟು ಬೆಲ್ಲದ ನೀರು ಹಾಕಿ ಕುದಿಸಿ ಮಾರಾಟ ಮಾಡ್ತಿದ್ದ. ಈತನನ್ನೂ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಒಟ್ನಲ್ಲಿ ಕೊರೊನಾದಿಂದಾಗಿ ಲಾಕ್‌ಡೌನ್ ಆದ್ಮೇಲೆ ಮದ್ಯ ಸಿಗದೆ ಎಣ್ಣೆ ಪ್ರಿಯರು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಇಂಥವರನ್ನೇ ಟಾರ್ಗೆಟ್ ಮಾಡಿಕೊಂಡು ಈ ಖದೀಮರು ಕಳ್ಳಭಟ್ಟಿ ಹಾಗೂ ಸ್ಪಿರಿಟ್ ಬಳಸಿ ಮದ್ಯ ತಯಾರಿಸ್ತಿದ್ರು. ಆದ್ರೆ ಇವರು ಪೊಲೀಸರ ಕೈಗೆ ಲಾಕ್ ಆಗಿದ್ದಾರೆ. ಅದೇನೆ ಇರ್ಲಿ ಎಲ್ಲರೂ ಕೊರೊನಾ ಭೀತಿಯಲ್ಲೇ ಬದುಕುತ್ತಿದ್ರೆ ಕುಡುಕರಿಗೆ ಮಾತ್ರ ಎಣ್ಣೆಯದ್ದೇ ದೊಡ್ಡ ಚಿಂತೆಯಾಗಿಬಿಟ್ಟಿದೆ.

Follow us on

Related Stories

Most Read Stories

Click on your DTH Provider to Add TV9 Kannada